ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಸ್ವಚ್ಛತೆಗೆ ‘14 ಮಿನಿಟ್ ಮಿರಾಕಲ್ ಸ್ಕೀಮ್ ’ ಕಾಸರಗೋಡಿನಲ್ಲಿ ಪ್ರಯೋಗ

Update: 2023-10-01 17:51 GMT

ಮಂಗಳೂರು: ಭಾರತೀಯ ರೈಲ್ವೆಯು ವಂದೇ ಭಾರತ್ ರೈಲಿನ ಸ್ವಚ್ಛತೆಗೆ ೧೪-ನಿಮಿಷಗಳ ಪವಾಡ (14 ಮಿನಿಟ್ ಮಿರಾಕಲ್ ಸ್ಕೀಮ್) ಯೋಜನೆಯನ್ನು ಕೈಗೆತ್ತಿಕೊಂಡಿದೆ.

ಕಾಸರಗೋಡು ರೈಲ್ವೆ ನಿಲ್ದಾಣದಲ್ಲಿ ‘14 ಮಿನಿಟ್ ಮಿರಾಕಲ್’ ಯೋಜನೆಯಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 20633  KGQ-TVC ) ರೈಲನ್ನು 47 ಮಂದಿಯನ್ನು ಪ್ರತಿ ಕೋಚ್‌ಗೆ ಮೂವರನ್ನು ನಿಯೋಜಿಸುವ ಮೂಲಕ ಸ್ವಚ್ಛಗೊಳಿಸಲಾಯಿತು.

ವಂದೇ ಭಾರತ್ ಎಕ್ಸ್‌ಪ್ರೆಸ್ ಮಂಗಳೂರು ಕೋಚಿಂಗ್ ಡಿಪೋ ಅಧಿಕಾರಿ ಮನೋಜ್.ಬಿ ಅವರು ‘14 ನಿಮಿಷಗಳ ಪವಾಡ’ ಯೋಜನೆಯ ಬದ್ಧತೆಯ ಪ್ರತಿಜ್ಞೆಯನ್ನು ಈ ಸಂದರ್ಭದಲ್ಲಿ ಬೋಧಿಸಿದರು. ಪಾಲಕ್ಕಾಡ್ ಹೆಚ್ಚುವರಿ ವಿಭಾಗೀಯ ರೈಲ್ವೆ ಮ್ಯಾನೇಜರ್ ಸಕ್ಕೀರ್ ಹುಸೇನ್ ಅವರು ಸ್ವಚ್ಛತಾ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News