ಅ.8: ತುಳು ಭವನದಲ್ಲಿ ದಸರಾ ಬಹುಭಾಷಾ ಕವಿಗೋಷ್ಠಿ

Update: 2024-10-04 13:27 GMT

ಮಂಗಳೂರು: ದಸರಾ ಬಹುಭಾಷಾ ಕವಿಗೋಷ್ಠಿಯು ಅ.8ರ ಅಪರಾಹ್ನ 3ಕ್ಕೆ ನಗರದ ಉರ್ವ ಸ್ಟೋರ್‌ನಲ್ಲಿರುವ ತುಳು ಸಾಹಿತ್ಯ ಅಕಾಡಮಿಯ ತುಳು ಭವನದಲ್ಲಿ ನಡೆಯಲಿದೆ.

ಕರ್ನಾಟಕ ತುಳು ಸಾಹಿತ್ಯ ಅಕಾಡಮಿ, ತುಳು ಪರಿಷತ್, ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ ಹಾಗೂ ಮಯೂರಿ ಫೌಂಡೇಶನ್ ಜಂಟಿಯಾಗಿ ಮೂರನೇ ವರ್ಷದ ದಸರಾ ಬಹುಭಾಷಾ ಕವಿಗೋಷ್ಠಿಯನ್ನು ಆಯೋಜಿಸಿದೆ. ಕಾಸರಗೋಡು, ದ.ಕ. ಹಾಗೂ ಉಡುಪಿ ಜಿಲ್ಲಾ ವ್ಯಾಪ್ತಿಯ 12 ಭಾಷೆಗಳ ಕವಿಗಳು ಕವಿತೆ ವಾಚಿಸಲಿದ್ದಾರೆ.

ಪ್ರಾಧ್ಯಾಪಕಿ ಹಾಗೂ ಸಾಹಿತಿ ಡಾ.ನಿಕೇತನ ಉಡುಪಿ ಕವಿಗೋಷ್ಠಿ ಉದ್ಘಾಟಿಸುವರು. ಸಾಹಿತಿ ಕಾಸರಗೋಡಿನ ರಾಧಾಕೃಷ್ಣ ಉಳಿಯತ್ತಡ್ಕ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸುವರು. ಮಯೂರಿ ಫೌಂಡೇಶನ್ ಅಧ್ಯಕ್ಷ ಜಯ ಕೆ. ಶೆಟ್ಟಿ ಮುಂಬೈ ಅತಿಥಿಯಾಗಿ ಭಾಗವಹಿಸುವರು.

ಗೀತಾ ಜೈನ್ (ತುಳು), ಪ್ರಮೀಳಾ ರಾಜ್ ಸುಳ್ಯ (ಕನ್ನಡ), ಚಂದ್ರಾವತಿ ಬಡ್ಡಡ್ಕ (ಅರೆಭಾಷೆ), ಬಾಬು ಕೊರಗ ಪಾಂಗಾಳ (ಕೊರಗ ಭಾಷೆ), ಮಂಜುನಾಥ್ ಗುಂಡ್ಮಿ (ಕುಂದಾಪುರ ಕನ್ನಡ), ಜ್ಯೋತಿ ರವಿರಾಜ್ (ಹವ್ಯಕ ಕನ್ನಡ), ಆಕೃತಿ ಭಟ್ (ಶಿವಳ್ಳಿ ತುಳು), ಶರೀಫ್ ನೀರ್ಮುಂಜೆ (ಬ್ಯಾರಿ), ಡಾ.ಪ್ಲೇವಿಯಾ ಕ್ಯಾಸ್ಟಲಿನೊ (ಕೊಂಕಣಿ), ರಾಜನ್ ಮುನಿಯೂರು (ಮಲಯಾಳ), ಸಿಯಾನ ಬಿ.ಎಂ. (ಬ್ಯಾರಿ), ಫೆಲ್ಸಿ ಲೊಬೋ ದೇರೆಬೈಲ್ (ಕೊಂಕಣಿ), ಶರ್ಮಿಳಾ ಬಜಕೂಡ್ಳು (ಮರಾಟಿ), ಶ್ರೀನಿವಾಸ ಪೆರಿಕ್ಕಾನ (ಕರಾಡ) ಕವಿಗೋಷ್ಠಿಯಲ್ಲಿ ಭಾಗವಹಿಸುವರು ಎಂದು ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಪ್ರಕಟನೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News