ವಾಸ್ತವಿಕ ಸುದ್ದಿಗಳಿಗೆ ಪ್ರಾಧಾನ್ಯತೆಯಿಂದ ಜನಕಲ್ಯಾಣ: ರಫೀಉದ್ದೀನ್ ಕುದ್ರೋಳಿ

Update: 2024-10-04 14:41 GMT

ಮಂಗಳೂರು: ನೈಜ ಘಟನೆಗಳ ವಾಸ್ತವಿಕ ಸುದ್ದಿಗಳಿಗೆ ಮಾಧ್ಯಮಗಳಲ್ಲಿ ಹೆಚ್ಚಿನ ಪ್ರಾಧಾನ್ಯತೆ ದೊರೆಯುವಂತಾಗಲಿ ಇದರಿಂದ ಪರಸ್ಪರ ಅಪನಂಬಿಕೆ ದೂರವಾಗಿ ಜನ ಕಲ್ಯಾಣ ಸಾಧ್ಯವಾಗಬಹುದು ಎಂದು ಯುನಿವೆಫ್ ಕರ್ನಾಟಕದ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಹೇಳಿದರು.

ಅವರು ಶುಕ್ರವಾರ ನಗರದ ಕಂಕನಾಡಿಯ ಜಮೀಅತುಲ್ ಫಲಾಹ್ ಸಭಾಂಗಣದಲ್ಲಿ ಯುನಿವೆಫ್ ಕರ್ನಾಟಕ ಇದರ ಅರಿಯಿರಿ ಮನುಕುಲದ ಪ್ರವಾದಿ ಅಭಿಯಾನದ ಅಂಗವಾಗಿ ಪತ್ರಕರ್ತ ರೊಂದಿಗೆ ಸ್ನೇಹ ಮಿಲನ ಮತ್ತು ಮಾನವ ಸ್ವಾತಂತ್ರ್ಯ ಕಲ್ಯಾಣ ;ಪ್ರವಾದಿ ಮುಹಮ್ಮದ್ (ಸ)ವಿಚಾರ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡು ತ್ತಿದ್ದರು.

ಸಮಾಜದಲ್ಲಿ ಸಹಿಷ್ಣುತೆ ಕದಡುವವರು ಇದ್ದಾರೆ, ಈ ಸಂದರ್ಭ ಅಪನಂಬಿಕೆ ದೂರಮಾಡಿ, ಸಹಿಷ್ಣುತೆಯ ಸಮಾಜ ನಿರ್ಮಾಣ ಧಾರ್ಮಿಕ ಹೊಣೆಗಾರಿಕೆ ಯಾಗಿದೆ. ಕೆಲವು ಮಾಧ್ಯಮಗಳ ಮೂಲಕ ಯಾವುದೋ ಒಬ್ಬ ವ್ಯಕ್ತಿಯನ್ನು ಗುರಿ ಮಾಡಿ ಇಡೀ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ,ತಪ್ಪು ಮಾಹಿತಿ ಯಿಂದ ವ್ಯಕ್ತಿ ಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ನಡೆದಿದೆ. ಪ್ರವಾದಿ ವರ್ಯರ ಬಗ್ಗೆಯೂ ಸಾಕಷ್ಟು ಅಪನಂಬಿಕೆ ಗಳಿವೆ ಈ ಹಿನ್ನೆಲೆಯಲ್ಲಿ ಮಾನವರನ್ನು ಎಲ್ಲಾ ದಾಸ್ಯಗಳಿಂದ ಮುಕ್ತಗೊಳಿಸುವ ಪ್ರವಾದಿ ವರ್ಯರ ಚಿಂತನೆ, ವಾಸ್ತವ ಸಂಗತಿ ಗಳನ್ನು ಹಂಚಿಕೊಳ್ಳಲು ಸಮಾಜದಲ್ಲಿ ಮಾಧ್ಯಮ ಸೇರಿದಂತೆ ವಿವಿಧ ವರ್ಗಗಳ ಜೊತೆ ಅರಿಯಿರಿ ಮನುಕುಲದ ಪ್ರವಾದಿಯನ್ನು ಎಂಬ ಅಭಿಯಾನವನ್ನು ಯುನಿವೆಫ್ ಕರ್ನಾಟಕದ ವತಿಯಿಂದ ಹಮ್ಮಿಕೊಳ್ಳ ಲಾಗಿದೆ ಎಂದು ರಫೀಉದ್ದೀನ್ ಕುದ್ರೋಳಿ ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಹಿರಿಯ ಪತ್ರಕರ್ತರಾದ ಪಿ.ಬಿ.ಹರೀಶ್ ರೈ, ಪುಷ್ಪರಾಜ್ ಬಿ.ಎನ್, ಮುಹಮ್ಮದ್ ಆರಿಫ್ ಪಡುಬಿದ್ರೆ ಮೊದಲಾ ದವರು ಭಾಗವಹಿಸಿದ್ದರು.

ಯುನಿವೆಫ್ ಕರ್ನಾಟಕ ಇದರ ಕಾರ್ಯದರ್ಶಿ ಯು. ಕೆ. ಖಾಲಿದ್ ದಿಕ್ಸೂಚಿ ಭಾಷಣದಲ್ಲಿ ಮಾನವ ಸ್ವಾತಂತ್ರ್ಯ ಕಲ್ಯಾಣದ ಬಗ್ಗೆ ಪ್ರವಾದಿ ಮುಹಮ್ಮದ್( ಸ)ಮನಕುಲಕ್ಕೆ ನೀಡಿದ ಸಂದೇಶವನ್ನು ತಿಳಿಸುವ ಅಭಿಯಾನದ ಬಗ್ಗೆ ವಿಷಯ ಮಂಡನೆ ಮಾಡಿದರು. ಅಭಿಯಾನದ ಸಂಚಾಲಕ ವಕಾಝ್ ಅರ್ಸಲಾನ್ ಕಾರ್ಯಕ್ರಮ ನಿರೂಪಿಸಿದರು. ಉಬೇದುಲ್ಲಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News