ಅಲ್ ಬಿರ್ರ್ ಕಿಡ್ಸ್ ಫೆಸ್ಟ್ ಸ್ವಾಗತ ಸಮಿತಿ ರಚನೆ :ಚೇರ್ಮೆನ್ ಆಗಿ ಇಬ್ರಾಹಿಂ ಕುಕ್ಕಟ್ಟೆ ಆಯ್ಕೆ

Update: 2024-12-21 06:59 GMT

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಅಲ್ ಬಿರ್ರ್ ಶಾಲೆ ಕಿಡ್ಸ್ ಫೆಸ್ಟ್ ಕಾರ್ಯಕ್ರಮವು 2025 ಜನವರಿ 14 ರಂದು ಗುರುಪುರ ಸಬೀಲ್ ಉಲ್ ಹುದಾ ಅಲ್ ಬಿರ್ರ್ ಶಾಲೆಯಲ್ಲಿ ನಡೆಯಲಿದೆ. ಅದರ ಯಶಸ್ವಿಗಾಗಿ ಕೈಕಂಬ ಪ್ರೀಮಿಯರ್ ಸಭಾಂಗಣ ದಲ್ಲಿ ನಡೆದ ಸಭೆಯಲ್ಲಿ ಸ್ವಾಗತ ಸಮಿತಿ ರಚಿಸಲಾಯಿತು.

ಕಾರ್ಯಕ್ರಮ ದಲ್ಲಿ ಕಬೀರ್ ದಾರಿಮಿ ದುವಾ ನೆರವೇಸಿದರು. ಎಸ್ ಕೆ ಎಸ್ ಎಸ್ ಎಫ್ ಕೈಕಂಬ ವಲಯ ಸಮಿತಿ ಅಧ್ಯಕ್ಷರಾದ ಜಮಾಲುದ್ದಿನ್ ದಾರಿಮಿ ಉದ್ಘಾಟಿಸಿದರು.  ಅಲ್ ಬಿರ್ರ್ ಕರ್ನಾಟಕ ಫೆಸ್ಟ್ ಸಂಯೋಜಕರಾದ ನವಾಝ್ ಸರ್ ರವರು ಪ್ರಸ್ತಾವಿಕ ಭಾಷಣ ನಡೆಸಿದರು. ‌

ದಕ್ಷಿಣ ಕನ್ನಡ ಜಿಲ್ಲಾ ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷರಾದ ಎಮ್ ಎಚ್ ಮೋಹಿದೀನ್ ಹಾಜಿ ಮತ್ತು ಮೆಟ್ರೋ ಶಾಹುಲ್ ಹಮೀದ್ ಹಾಜಿ ಗುರುಪುರ ಶುಭಹಾರೈಸಿದರು. ಉಳಾಯಿಬೆಟ್ಟು ಜುಮಾ ಮಸೀದಿ ಅಧ್ಯಕ್ಷ ಇಸ್ಮಾಯಿಲ್, ಅಲ್ ಬಿರ್ರ್ ನಿರ್ದೇಶಕ ಹಂಝ ಮಿಶ್ರರಿಯಾ, ಕಣ್ಣೂರ್ ಅಲ್ ಬಿರ್ರ್ ಸಂಯೋಜಕ ಸಿತಾರ್ ಮಜೀದ್ ಹಾಜಿ, ಲೋರಟ್ಟೋಪದವು ಅಲ್ ಬಿರ್ರ್ ಸಂಯೋಜಕ ಅಲ್ತಾಫ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಬೀಲುಲ್ ಹುದಾ ಅಲ್ ಬಿರ್ರ್ ಶಾಲೆಯ ಚೇರ್ಮೆನ್ ಆಸೀಫ್ ಹಾಜಿ ಸುರಲ್ಪಾಡಿ ವಹಿಸಿದರು.

ಕಾರ್ಯಕ್ರಮ ದಲ್ಲಿ ಅಲ್ ಬಿರ್ರ್ ಕಿಡ್ಸ್ ಫೆಸ್ಟ್ ಯಶಸ್ವಿ ಗಾಗಿ ಸ್ವಾಗತ ಸಮಿತಿ ರಚಿಸಲಾಯಿತು. ನಿರ್ದೇಶಕರಾಗಿ ಜಮಾಲುದ್ದಿನ್ ದಾರಿಮಿ,ಆಸೀಫ್ ಹಾಜಿ ಸುರಲ್ಪಾಡಿ,ಇಸ್ಮಾಯಿಲ್ ಉಳಾಯಿಬೆಟ್ಟು,ಚೇರ್ಮನ್ ಆಗಿ ಇಬ್ರಾಹಿಂ ಕುಕ್ಕಟ್ಟೆ, ವೈಸ್ ಚೇರ್ಮೆನ್ ಹಂಝ ಮಿಶ್ರರಿಯಾ,ಸಮೀರ್ ನೂಯಿ,ಕನ್ವಿನರ್ ಆಗಿ ಆರೀಫ್ ಕಮ್ಮಾಜೆ, ಷರೀಫ್ ಮಳಲಿ, ವೈಸ್ ಕನ್ವಿನರ್ ಆಗಿ ಬಷೀರ್ ಫ್ಲವರ್, ಅನ್ವರ್ ಮಾಜ್ದ, ಶೇಕ್ ಮೋನು ರೈಫಲ್, ಶೇಕಬ್ಬ ಕಂದಾವರ, ಕೋಶಾಧಿಕಾರಿ ಯಾಗಿ ಎಮ್ ಎಚ್ ಮೋಹಿದೀನ್ ಹಾಜಿ, ಸದಸ್ಯರುಗಳಾಗಿ ಅಬ್ದುಲ್ ರಹಿಮಾನ್ ಕೆತ್ತಿಕಲ್, ಇಮ್ರಾನ್ ಬಂಗ್ಲಗುಡ್ಡೆ,ಮಜೀದ್ ಸೋನಾ, ಸಫ್ವಾನ್ ಕೈಕಂಬ, ಶಾಫಿ ಕಾಂಜಿಲಕೋಡಿ, ಇಕ್ಬಾಲ್ ಸುರಲ್ಪಾಡಿ, ನೌಶಾದ್ ಬಜ್ಪೆ, ಅಬ್ದುಲ್ ರಹಿಮಾನ್ ರಾಜಧಾನಿ, ಹನೀಫ್ ಕಂದಾವರ, ದಾವೂದ್ ಕಂದಾವರ, ಅಬ್ಬಾಸ್ ನಾಡಾಜೆ, ರಝಾಕ್ ಕೈಕಂಬ, ಇಕ್ಬಾಲ್ ಕುಕ್ಕಟ್ಟೆ, ಅಶ್ರಫ್ ಸೋನಾ, ಜಮಾಲ್, ಅಬ್ದುಲ್ ರಹಿಮಾನ್, ಸಿರಾಜ್ ಕೈಕಂಬ, ಮನ್ಸೂರ್ ಕುಪ್ಪೆಪದವು, ಅಶ್ರಫ್ ಉಳಾಯಿಬೆಟ್ಟು, ಮುಹಮ್ಮದ್ ಕೈಕಂಬ, ಸಾದಿಕ್ ಗಂಜಿಮಠ, ಕಬೀರ್ ದಾರಿಮಿ, ಫಾರೂಕ್ ಕೈಕಂಬ ರವರನ್ನು ಆಯ್ಕೆ ಮಾಡಲಾಯಿತು.

ಕೈಕಂಬ ಅಲ್ ಬಿರ್ರ್ ಕಾರ್ಯದರ್ಶಿ ಹಾಗೂ ತೋಡಾರ್ ಅಲ್ ಬಿರ್ರ್ ಸಂಯೋಜಕ ಆರೀಫ್ ಕಮ್ಮಾಜೆ ಸ್ವಾಗತಿಸಿದರು. ಕೈಕಂಬ ಅಲ್ ಬಿರ್ರ್ ಸಂಯೋಜಕರ ಶರೀಫ್ ಮಳಲಿ ಧನ್ಯವಾದಗೈದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News