ಸಿಪಿಐಗೆ ಶತಮಾನೋತ್ಸವ ಸಂಭ್ರಮ : ಡಿ.25ರಂದು ಉದ್ಘಾಟನೆ, 26ರಂದು ಬಹಿರಂಗ ಸಭೆ

Update: 2024-12-21 07:08 GMT

ಸಾಂದರ್ಭಿಕ ಚಿತ್ರ

ಮಂಗಳೂರು, ಡಿ.21: ಭಾರತ ಕಮ್ಯುನಿಸ್ಟ್ ಪಕ್ಷ ಶತಮಾನೋತ್ಸವ ಸಂಭ್ರಮದಲ್ಲಿದ್ದು, ಡಿ 24ರಿಂದ 26ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಡಿ. 25ರಂದು ಬೆಳಗ್ಗೆ ಕೇರಳದ ನೀಲೇಶ್ವರ ಸಮೀಪದ ಕಯ್ಯೂರಿನ ಹುತಾತ್ಮ ರೈತ ಹೋರಾಟಗಾರರ ಸ್ಮಾರಕದಲ್ಲಿ ಸಂಭ್ರಮಾಚರಣೆಗೆ ಚಾಲನೆ ದೊರೆಯಲಿದೆ. ಸಂಜೆ 3.30ಕ್ಕೆ ತೊಕ್ಕೊಟ್ಟು ಉಳ್ಳಾಲ ನಗರದಲ್ಲಿ ಸ್ವಯಂ ಸೇವಕರ ಪ್ರಚಾರ ಜಾಥ ಆಯೋಜಿಸಲಾಗಿದೆ. ಸಂಜೆ 4.30ಕ್ಕೆ ಉಳ್ಳಾಲ ರಾಣಿ ಅಬ್ಬಕ್ಕ ವೃತ್ತ ಬಳಿಯ ಕಡಲ ಕಿನಾರೆಯಲ್ಲಿ ಸಾಂಸ್ಕೃತಿಕ ಸಂಜೆ, ಭಾರತೀಯ ಜಲಕಲಾ ಸಮಿತಿಯಿಂದ ಹೋರಾಟ ಗೀತೆಗಳು ಕವಿ, ಕಲಾವಿದ ಹುಸೇನ್ ಕಾಟಿಪಳ್ಳ ಮತ್ತು ಬಳಗಿಂದ ಜನಪದೀಯ ಸೌಹಾರ್ದ ಗೀತೆಗಳನ್ನು ಒಳಗೊಂಡ ಸಂಗೀತ ರಸಮಂಜರಿ ಪ್ರೀತಿದ ಪೂ ಕಲಾತಂಡದಿಂದ ಸಿಂಹ ಕುಣಿತ ನಡೆಯಲಿದೆ.

ಡಿ. 26ರಂದು ಬೆಳಗ್ಗೆ 10 ಗಂಟೆಗೆ ಮಂಗಳೂರು ಮಿನಿ ವಿಧಾನ ಸೌಧದಿಂದ ವರ್ಣರಂಜಿತ ಮೆರವಣಿಗೆ ಬಳಿಕ ಬಹಿರಂಗ ಸಭೆ 11ಕ್ಕೆ ಡಾನ್‌ಬಾಸ್ಕೋ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಮುಖ್ಯ ಅತಿಥಿಗಳಾಗಿ ಶತಮಾನೋತ್ಸವದ ಸಂಭ್ರಮಾಚರಣೆಯ ಕರ್ನಾಟಕ ಸಮಿತಿಯ ಗೌರವಾಧ್ಯಕ್ಷ, ಶಿಕ್ಷಣ ತಜ ಡಾ. ಜಿ. ರಾಮಕೃಷ್ಣ , ಸಮಿತಿಯ ಅಧ್ಯಕ್ಷ ಡಾ. ಸಿದ್ದನಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ಸಾತಿ ಸುಂದರೇಶ್, ಮಂಗಳೂರು ಸಮಿತಿಯ ಗೌರವಾಧ್ಯಕ್ಷ ಡಾ. ಬಿ. ಶ್ರೀನಿವಾಸ ಕಕ್ಕಿಲಾಯ, ಪ್ರ. ಕಾರ್ಯದರ್ಶಿ ಬಿ. ಶೇಖರ್, ಸಿಪಿಐ ರಾಜ್ಯ ಮಂಡಳಿಯ ಮಾಜಿ ಸದಸ್ಯ ವಿ ಕುಕ್ಯಾನ್, ಎಐಟಿಯುಸಿ ಅಧ್ಯಕ್ಷ ಎಚ್.ವಿ. ರಾವ್, ಸಿಪಿಐ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಶಶಿಕಲ ಗಿರೀಶ್ ಉಡುಪಿ ಭಾಗವಹಿಸಲಿದ್ದಾರೆ. ಮಂಗಳೂರು ಸಮಿತಿಯ ಅಧ್ಯಕ್ಷ ನಾಗೇಶ್ ಕಲ್ಲೂರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸಿಪಿಐ ಪ್ರಕಟನೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News