ಅ.3ರಂದು ಬ್ಯಾರಿ ಭಾಷಾ ದಿನಾಚರಣೆಗೆ ಬ್ಯಾರಿ ಅಕಾಡಮಿ ಮನವಿ
ಮಂಗಳೂರು, ಸೆ.30: ಬ್ಯಾರಿ ಭಾಷೆಗೆ ಅಧಿಕೃತ ಮಾನ್ಯತೆ ನೀಡಿ, ರಾಜ್ಯ ಸರಕಾರವು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಸ್ಥಾಪಿಸಿದ ದಿನ ಅಕ್ಟೋಬರ್ 3ನ್ನು 'ಬ್ಯಾರಿ ಭಾಷಾ ದಿನಾಚರಣೆ'ವಾಗಿ ಆಚರಿಸಲಾಗುತ್ತಿದೆ.
ಜಗತ್ತಿನಾದ್ಯಂತ ಪಸರಿಸಿರುವ ಬ್ಯಾರಿ ಭಾಷಿಗರು, ಸಂಘ-ಸಂಸ್ಥೆಗಳು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅಥವಾ ಭಿತ್ತಿಪತ್ರ/ಬ್ಯಾನರ್ ಪ್ರದರ್ಶನದ ಮೂಲಕ ಅಕ್ಟೋಬರ್ 3ನೇ ದಿನದಂದು ಬ್ಯಾರಿ ಭಾಷಾ ದಿನಾಚರಣೆ ಮಾಡಬೇಕೆಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಮನವಿ ಮಾಡಿದೆ.
ಅಕಾಡಮಿಯು ಚಿಕ್ಕಮಗಳೂರು ಜಿಲ್ಲಾ ಬ್ಯಾರಿಗಳ ಒಕ್ಕೂಟದ ಸಹಯೋಗದೊಂದಿಗೆ ಅ.3ರಂದು ಚಿಕ್ಕಮಗಳೂರಿನ ಕುವೆಂಪು ರಂಗಮಂದಿರದಲ್ಲಿ ಬ್ಯಾರಿ ಭಾಷಾ ದಿನಾಚರಣೆಯ ಅದ್ದೂರಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಾರ್ಯಕ್ರಮ ಆಯೋಜಿಸಲಿರುವ ಸಂಘ-ಸಂಸ್ಥೆಗಳು ಚುನಾವಣಾಧಿಕಾರಿಗಳ ಪೂರ್ವಾನುಮತಿ ಪಡೆಯಬೇಕು.
ಮಾದರಿ ಭಿತ್ತಿಪತ್ರ/ಬ್ಯಾನರ್ ಗಳಿಗಾಗಿ ಅಕಾಡಮಿ ದೂರವಾಣಿ ಸಂ: 0824-2412297, ಮೊ:7483946578 ಅಥವಾ
ಇ-ಮೇಲ್ bearyacademy@yahoo.in ಗೆ ಸಂಪರ್ಕಿಸಬಹುದು ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ.