ಬ್ರಿಟಿಷರ ಆಳ್ವಿಕೆಗಿಂತಲೂ ಬಿಜೆಪಿ ಕೆಟ್ಟ ಆಡಳಿತ: ಹರೀಶ್ ಕುಮಾರ್ ಆರೋಪ

Update: 2024-08-15 17:16 GMT

ಮಂಗಳೂರು: ಬಿಜೆಪಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲ. ದೇಶದಲ್ಲಿ ಬ್ರಿಟಿಷರ ಆಳ್ವಿಕೆಗಿಂತಲೂ ಬಿಜೆಪಿ ಕೆಟ್ಟ ಆಡಳಿತ ನಡೆಸುತ್ತಿದೆ. ಇಡಿ, ಸಿಬಿಐ, ಐಟಿ ಮುಂತಾದ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷದ ನಾಯಕರನ್ನು ಹೆದರಿಸುತ್ತಿದೆ. ಇದರ ವಿರುದ್ಧ ಕಾಂಗ್ರೆಸಿಗರು ಹೋರಾಡಬೇಕು ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಕರೆ ನೀಡಿದ್ದಾರೆ.

ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಗುರುವಾರ ನಡೆದ ೭೮ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ಬಳಿಕ ಅವರು ಮಾತನಾಡಿದರು.

ಬ್ರಿಟಿಷರ ಆಳ್ವಿಕೆಯಲ್ಲಿ ಭಾರತೀಯರ ಜೀವನ ಕಷ್ಟಕರ ಆಗಿತ್ತು. ಈಗ ಬಿಜೆಪಿ ಸರಕಾರದ ಧೋರಣೆ, ಭ್ರಷ್ಟಾಚಾರ, ಬೆಲೆ ಏರಿಕೆಯಿಂದ ಜನರು ಕಂಗಾಲಾಗಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬದಲಾಯಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಹರೀಶ್ ಕುಮಾರ್ ಕಿಡಿಕಾರಿದರು.

ಈ ಸಂದರ್ಭ ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹೀಂ, ಮಾಜಿ ಶಾಸಕ ಜೆ.ಆರ್.ಲೋಬೊ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್, ಪಕ್ಷದ ಮುಖಂಡರಾದ ಸುರೇಶ್ ಬಳ್ಳಾಲ್, ಸುರೇಂದ್ರ ಕಂಬಳಿ, ಜೆ.ಅಬ್ದುಲ್ ಸಲೀಂ, ಅಬ್ದುಲ್ ರವೂಫ್, ಶಾಹುಲ್ ಹಮೀದ್, ಕೆ.ಪಿ.ಥೋಮಸ್, ನವೀನ್ ಡಿಸೋಜ, ವಿಶ್ವಾಸ್ ಕುಮಾರ್‌ದಾಸ್, ಶಾಲೆಟ್ ಪಿಂಟೊ, ಸಮೀರ್ ಪಜೀರ್, ಎಸ್.ಅಪ್ಪಿ, ಟಿ. ಹೊನ್ನಯ್ಯ, ಹಯಾತುಲ್ ಖಾಮಿಲ್, ವಿಶ್ವನಾಥ ಬಜಾಲ್, ಶುಭೋದಯ ಆಳ್ವ, ನೀರಜ್‌ ಚಂದ್ರಪಾಲ್, ಟಿ.ಕೆ.ಸುಧೀರ್, ವಿಕಾಸ್ ಶೆಟ್ಟಿ, ನಝೀರ್ ಬಜಾಲ್, ಭರತೇಶ್ ಅಮೀನ್, ಶಬೀರ್ ಎಸ್, ಸಬಿತಾ ಮಿಸ್ಕಿತ್, ಗೀತಾ ಅತ್ತಾವರ, ಚಂದ್ರಕಲಾ ಜೋಗಿ, ಶಾರಿಕ ಪೂಜಾರಿ, ಮಂಜುಳಾ ನಾಯಕ್, ಚಂದ್ರಕಲಾ ಡಿ.ರಾವ್, ಆಲ್ವಿನ್ ಪ್ರಕಾಶ್, ಎ.ಸಿ.ಜಯರಾಜ್, ಮೋಹನ್‌ದಾಸ್ ಕೊಟ್ಟಾರಿ, ಸುಹಾನ್ ಆಳ್ವ, ಝುಬೈರ್ ತಲೆಮೊಗರು, ರಮಾನಂದ ಪೂಜಾರಿ, ರೋಬಿನ್, ಲಕ್ಷ್ಮಣ್ ಶೆಟ್ಟಿ, ಜಿ.ಎ.ಜಲೀಲ್, ಫಯಾಝ್ ಅಮ್ಮೆಮ್ಮಾರ್, ಸೌಹಾನ್ ಎಸ್.ಕೆ ಉಪಸ್ಥಿತರಿದ್ದರು. ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ಜೋಕಿಂ ಡಿಸೋಜ ಧ್ವಜ ಪ್ರಭಾರಿಯಾಗಿ ಕಾರ್ಯನಿರ್ವಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News