ಅನಧಿಕೃತ ಬ್ಯಾನರ್, ಕಟೌಟ್ ತೆರವುಗೊಳಿಸದಿದ್ದರೆ ಕ್ರಿಮಿನಲ್ ಕೇಸ್: ಮಂಗಳೂರು ಮಹಾನಗರಪಾಲಿಕೆ ಎಚ್ಚರಿಕೆ

Update: 2024-01-17 13:08 GMT

ಮಂಗಳೂರು: ಮಂಗಳೂರು ಮಹಾನಗರಪಾಲಿಕೆಯ ವಿವಿಧೆಡೆ ರಸ್ತೆ ಬದಿಗಳಲ್ಲಿ ಕೆಲವೊಂದು ಜಾಹೀರಾತು ಸಂಸ್ಥೆ ಹಾಗೂ ಖಾಸಗಿ ವ್ಯಕ್ತಿಗಳು ವಾಣಿಜ್ಯ ಉದ್ದೇಶಗಳಿಗಾಗಿ ಮತ್ತು ರಾಜಕೀಯ,ಧಾರ್ಮಿಕ, ಖಾಸಗಿ ಕಾರ್ಯಕ್ರಮಗಳ ಪ್ರಚಾರಕ್ಕಾಗಿ ಅನಧಿಕೃತ ಬ್ಯಾನರ್, ಕಟೌಟ್, ಬಂಟಿಂಗ್ಸ್, ಪ್ಲೆಕ್ಸ್ ಇತ್ಯಾದಿಗಳನ್ನು ಹಾಕಿದ್ದು, ಅದನ್ನು ಶೀಘ್ರ ತೆರವುಗೊಳಿಸದಿದ್ದರೆ ಅಂತಹವರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಲಾಗುವುದು ಎಂದು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ಅನಧಿಕೃತ ಪಾದಚಾರಿಗಳಿಗೆ ಮತ್ತು ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದ್ದು, ಅಪಘಾತ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಗಳಿರುವುದಲ್ಲದೆ ಸಾರ್ವಜನಿಕ ಸ್ಥಳಗಳನ್ನು ರೂಪಗೊಳಿಸಿದಂತಾಗುತ್ತಿದೆ. ಅಲ್ಲದೆ ವಿದ್ಯುತ್ ಅವಘಡಗಳು ಉಂಟಾಗಿ ಪ್ರಾಣಹಾನಿ ಸಂಭಸುವ ಸಾಧ್ಯತೆ ಇದೆ. ಕೆಲವೊಂದು ವಿವಾದಾತ್ಮಕ ಮತ್ತು ದ್ವೇಷ ಸಂದೇಶ ಸಾರುವ ಫ್ಲೆಕ್ಸ್‌ಗಳು ಅಳವಡಿಸುತ್ತಿರುವುದರಿಂದ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗಿ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆಗಳ ಬಗ್ಗೆ ಪೊಲೀಸ್ ಇಲಾಖೆಯಿಂದ ಆಕ್ಷೇಪ ವ್ಯಕ್ತವಾಗುತ್ತಿದೆ.

ಹಾಗಾಗಿ ಎಲ್ಲಾ ರೀತಿಯ ಅನಧಿಕೃತ ಬ್ಯಾನರ್, ಕಟೌಟ್, ಬಂಟಿಂಗ್ ಮತ್ತು ಪ್ಲೆಕ್ಸ್ ಇತ್ಯಾದಿಗಳನ್ನು ತೆರವುಗೊಳಿಸಬೇಕು. ಮಹಾನಗರಪಾಲಿಕೆ ಆಧೀನದಲ್ಲಿ ಸರಕಾರಿ ಮತ್ತು ಖಾಸಗಿ ಸ್ಥಳಗಳಲ್ಲಿ 1084 ಅಧಿಕೃತ ಜಾಹೀರಾತು ಫಲಕಗಳಿದ್ದು, ಈ ಜಾಹೀರಾತು ಫಲಕಗಳನ್ನು ಬಳಕೆ ಮಾಡುವಂತೆ ಆಯುಕ್ತರು ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News