ಅನಿಲ ಸುರಕ್ಷತೆಯ ತಪಾಸಣೆ: ಗ್ರಾಹಕರಿಗೆ ಸೂಚನೆ
Update: 2023-08-16 13:22 GMT
ಮಂಗಳೂರು: ತೈಲ ಕಂಪನಿಗಳ ನಿರ್ದೇಶನದಂತೆ ಎಚ್‌ಪಿ ಗ್ಯಾಸ್ ಏಜೆನ್ಸಿಗಳಿಂದ ಅನಿಲ ಸುರಕ್ಷತೆಯ ತಪಾಸಣೆ ನಡೆಯಲಿದೆ. ಗ್ರಾಹಕರ ಮನೆಗೆ ಪೆಟ್ರೋಲಿಯಮ್ ಕಂಪೆನಿಯ ಗುರುತು ಚೀಟಿ ಹೊಂದಿರುವ ವ್ಯಕ್ತಿಗಳು ತೆರಳಿ ಗ್ಯಾಸನ್ನು ಪರಿಶೀಲಿಸಿದ ನಂತರ ಪರಿಶೀಲಿಸಿರುವುದಕ್ಕೆ ಸೇವಾ ಶುಲ್ಕ 236 ರೂ. ಹಾಗೂ ರಬ್ಬರ್ ಟ್ಯೂಬ್ ಬದಲಾಯಿಸಬೇಕಾದಲ್ಲಿ 190 ರೂ. ನೀಡಬೇಕೆಂಬುದಾಗಿ ತಿಳಿಸಬಹುದಾಗಿದೆ. ಆದರೆ ಈ ರೀತಿಯ ಅನಿಲ ಸುರಕ್ಷತೆಯ ತಪಾಸಣೆಯು ಗ್ರಾಹಕರಿಗೆ ಕಡ್ಡಾಯವಾಗಿರುವುದಿಲ್ಲ ಎಂದು ಜಿಲ್ಲಾಧಿಕಾರಿಯ ಕಚೇರಿ ಪ್ರಕಟನೆ ತಿಳಿಸಿದೆ.
ಗ್ಯಾಸ್ ಏಜೆನ್ಸಿಯವರು ಗ್ರಾಹಕರಿಗೆ ಸರಿಯಾದ ಮಾಹಿತಿ ನೀಡಿ ಗ್ರಾಹಕರು ಬಯಸಿದಲ್ಲಿ ಮಾತ್ರ ಅವರ ಅನುಮತಿ ಮೇರೆಗೆ ಮನೆಯೊಳಗೆ ಹೋಗಿ ಅನಿಲ ತಪಾಸಣೆಯನ್ನು ಕೈಗೊಳ್ಳಬಹುದಾಗಿದೆ. ಸಾರ್ವಜನಿಕರು ಕೂಡ ತಮ್ಮ ಸುರಕ್ಷತೆ ಗಾಗಿ ಅಡುಗೆ ಅನಿಲ ತಪಾಸಣೆ ಕೈಗೊಳ್ಳಲು ಬಯಸಿದಲ್ಲಿ ಗ್ಯಾಸ್ ಏಜೆನ್ಸಿಗೆ ಕರೆ ಮಾಡಿ ತಪಾಸಣೆ ಮಾಡಿಸಿಕೊಳ್ಳ ಬಹುದಾಗಿದೆ ಎಂದು ತಿಳಿಸಲಾಗಿದೆ.