ಅ.30ರಂದು ಯೆನೆಪೊಯ ವಿವಿಯ ಬಲ್ಮಠ, ಕೂಳೂರು ಸಂಸ್ಥೆಗಳ ಪದವೀಧರರಿಗೆ ಪದವಿ ಪ್ರದಾನ
ಮಂಗಳೂರು: ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ಬಲ್ಮಠ, ಕೂಳೂರು ಸಂಸ್ಥೆಗಳಲ್ಲಿ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ನೀಡಿ ಗೌರವಿಸುವ ಸಮಾರಂಭವು ದೇರಳಕಟ್ಟೆ, ಯೆನೆಪೋಯ ವಿಶ್ವವಿದ್ಯಾಲಯದ ಆವರಣದಲ್ಲಿರುವ ಯೆಂಡ್ಯೂರೆನ್ಸ್ ಸಭಾಂಗಣದಲ್ಲಿ ಅ.30 ರಂದು ಬೆಳಗ್ಗೆ 9 ರಿಂದ ನೆರವೇರಲಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ನುಪಮ್ ಅಗರವಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ಗೌರವ ಅತಿಥಿಗಳಾಗಿ ಅಜೋಲಿಸ್ ಬಯೋಸೈನ್ಸ್ ಪ್ರೈ.ಲಿಮಿಟೆಡ್ ನಿರ್ದೇಶಕಿ ಅದಿತಿ ಉಮೇಶ್, ರೈನ್‌ಟ್ರೀ ಮೀಡಿಯಾ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಪ್ರಧಾನ ಸಂಪಾದಕರಾದ ಸಂಧ್ಯಾ ಮೆಂಡೋನ್ಸಾ ಇವರು ಆಗಮಿಸಲಿದ್ದಾರೆ.
ಯೆನೆಪೊಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಪ್ರೊ. ವೈಸ್ ಚಾನ್ಸೆಲರ್‌ಡಾ. ಬಿ ಎಚ್ ಶ್ರೀಪತಿ ರಾವ್, ಪರೀಕ್ಷಾ ನಿಯಂತ್ರ ಕರು, ಡಾ. ಬಿ.ಟಿ. ನಂದೀಶ್ ಇವರ ಗೌರವ ಉಪಸ್ಥಿತಿಯಲ್ಲಿ ಸಮಾರಂಭ ನೆರವೇರಲಿದೆ.
ಯೆನೆಪೋಯ ವಿವಿ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್ ಸೈನ್ಸ್, ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ಪ್ರಾಂಶುಪಾಲ ಡಾ. ಅರುಣ್ ಎ ಭಾಗವತ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.