ಪಿ.ಎ. ಪಾಲಿಟೆಕ್ನಿಕ್, ಪ್ರಥಮ ದರ್ಜೆ ಕಾಲೇಜಿನ ಪದವಿ ದಿನಾಚರಣೆ
ಕೊಣಾಜೆ: ಯಾವುದೇ ಸಾಧಕ ವ್ಯಕ್ತಿಯ ಸಾಧನೆಯ ಹಿಂದೆ ಅಷ್ಟೇ ಕಠಿಣ ಪರಿಶ್ರಮವೂ ಇರುತ್ತದೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಪಿ.ಎ.ಇಬ್ರಾಹಿಂ ಅವರು ಓರ್ವ ಶೈಕ್ಷಣಿಕ ಸಾಧಕರಾಗಿ ನಮಗೆಲ್ಲರಿಗೂ ಮಾದರಿಯಾಗಿದ್ದಾರೆ. ಅವರು ಕಟ್ಟಿಬೆಳೆಸಿದ ಪಿ.ಎ.ಶಿಕ್ಷಣ ಸಂಸ್ಥೆಯು ಮುಂದೆ ಸ್ವಾಯತ್ತ ಸಂಸ್ಥೆಯಾಗಿ,ವಿಶ್ವವಿದ್ಯಾನಿಲಯವಾಗಿ ಬೆಳೆಯಲಿ ಎಂದು ಸ್ಪೀಕರ್ ಯು.ಟಿ ಖಾದರ್ ಹಾರೈಸಿದರು.
ಪಿ.ಎ ಪ್ರಥಮ ದರ್ಜೆ ಕಾಲೇಜು ಮತ್ತು ಪಿ.ಎ ಪಾಲಿಟೆಕ್ನಿಕ್ ನ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯೊಂದಿಗೆ ಮುನ್ನಡೆಯುವುದರ ಜೊತೆಗೆ ತಂದೆ ತಾಯಿಗಳಿಗೆ, ಕಲಿತ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ಸಮಾಜಕ್ಕೆ ಋಣಿಯಾಗಿರಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಯು.ಟಿ ಖಾದರ್ ಅವರಿಗೆ ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು .
ಮುಖ್ಯ ಅಥಿತಿಯಾಗಿ ಆಗಮಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರಾದ ರಾಜು ಕೃಷ್ಣ ಚಲನ್ನವರ್ ಮಾತನಾಡಿ “ ಇಂದಿನ ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ಸವಾಲುಗಳ ಜೊತೆ ಅವಕಾಶಗಳೂ ಇದ್ದು ಯುವ ಜನತೆ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ಪಿ.ಎ.ಇ.ಟಿ ಯ ಟ್ರಸ್ಟಿ ಪಿ.ಎ ಸಲ್ಮಾನ್ ಇಬ್ರಾಹಿಂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ “ಇದು ಶೈಕ್ಷಣಿಕ ಬದುಕಿನ ಅಂತ್ಯದ ಜೊತೆ ನಿಜಬದುಕಿನ ಆರಂಭ, ನಾಲ್ಕು ಗೋಡೆಯ ನಡುವೆ ಕಲಿತಿದ್ದನ್ನು ಜೀವನಕ್ಕೆ ಅಳವಡಿಸುತ್ತಾ ದೇವರ ಮೇಲೆ ಧೃಡ ವಿಶ್ವಾಸ, ಸಮಾಜದ ಸರಿ ತಪ್ಪುಗಳನ್ನು ಅರಿಯುವ ಮೂಲಕ ಸಮಾಜದ ಏಳಿಗೆಗೆ ಕಾರಣೀಭೂತರಾಗ ಬೇಕೆಂದರು.”
ಪಿ.ಎ.ಇ.ಟಿ ಯ ವ್ಯವಸ್ಥಾಪಕ ಟ್ರಸ್ಟೀ ಅಬ್ದುಲ್ಲಾ ಇಬ್ರಾಹೀಂ ಅಧ್ಯಕ್ಷೀಯ ನುಡಿಗಳನ್ನಾಡಿ ವಿದ್ಯಾರ್ಥಿಗಳಿಗೆ ಮತ್ತು ಅವರನ್ನು ರೂಪಿಸಿದ ಶಿಕ್ಷಕರಿಗೆ ಅಭಿನಂದಿಸಿದರು. ಪಿ.ಎ ಕಾಲೇಜ್ ಆಫ್ ಪಾಲಿಟೆಕ್ನಿಕ್ ನ ಪ್ರಾಂಶುಪಾಲರಾದ ಪ್ರೊ.ಕೆ.ಪಿ ಸೂಫಿ ಮಕ್ಕಳಿಗೆ ಪ್ರಮಾಣವಚನಗಳನ್ನು ಓದಿ ಹೇಳಿದರು. ಪೇಸ್ ನಾಲೆಡ್ಜ್ ಸಿಟಿ ಯ ಲೋಗೋ ಹಾಗೂ ಪಿ.ಎ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಪತ್ರಿಕೆ “ಕಾಲೇಜ್ ಕ್ರಾನಿಕಲ್", ಪೋಡ್ಕಾಸ್ಟ್ ಪೆಪ್ ಟಾಲ್ಕ್ಸ್ ನ ಉದ್ಘಾಟನೆಯನ್ನು ಮಾಡಲಾ ಯಿತು. ನಂತರ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ಹಂಚಲಾಯಿತು.
ಪಿ.ಎ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಸರ್ಫ್ರಾಝ್ ಜಿ.ಹಾಸಿಂ ಸ್ವಾಗತಿಸಿದರು ಮತ್ತು ಐ.ಕ್ಯೂ.ಎ.ಸಿ ಯ ಸಂಯೋಜಕಿ ವಾಣಿಶ್ರೀ ವಂದಿಸಿದರು. ಪೇಸ್ ಟ್ರಸ್ಟಿಗಳಾದ ಅಬ್ದುಲ್ ಲತೀಫ್, ಮೊಹಮ್ಮದ್ ಶಾಫಿ, ಮುಹಮ್ಮದ್ ಅಮೀನ್ ಇಬ್ರಾಹಿಂ,ಅಹ್ಮದ್ ಕುಟ್ಟಿ, ಪಿ.ಎ ಕಾಲೇಜಿನ ಡೀನ್ ಡಾ.ಸಯ್ಯಿದ್ ಅಮೀನ್ ಅಹಮದ್, ಪೇಸ್ ಕ್ಯಾಂಪಸ್ ನ ಎ.ಜಿ.ಎಂ ಶರಫುದ್ದೀನ್ ಪಿ.ಕೆ ಮತ್ತು ವಿವಿಧ ವಿಭಾಗದ ಮುಖ್ಯಸ್ಥರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಇರ್ಫಾದ್ ಪ್ರಾರ್ಥಿಸಿದರು. ಅಧ್ಯಾಪಕರಾದ ಅನ್ಫಾ ಮತ್ತು ಅಜಿತ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.