ಪಕ್ಷಿಕೆರೆ ಫ್ರೆಂಡ್ಸ್‌ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Update: 2023-08-15 18:06 GMT

ಮುಲ್ಕಿ: ಇಲ್ಲಿನ ಕೆಮ್ರಾಲ್‌ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಸಮಾಜ ದೊಂದಿಗೆ ಗುರುತಿಸಿಕೊಂಡಿರುವ ಪಕ್ಷಿಕೆರೆ ಫ್ರೆಂಡ್ಸ್‌ ವತಿಯಿಂದ  ಸ್ವಾತಂತ್ರ್ಯ ದಿನಾಚರಣೆಯನ್ನು ಹೊಸಕಾಡು ಬಸ್‌ ನಿಲ್ದಾಣದ ಬಳಿ ಆಚರಿಸಲಾಯಿತು.

ಪಕ್ಷಿಕೆರೆಯ ಪರಿಸರ ಪ್ರೇಮಿ ಹಾಗೂ ಪೇಪರ್‌ ಸೀಡ್‌ ಸಂಸ್ಥೆಯ ನಿತಿನ್‌ ವಾಸ್‌ ಅವರು ಧ್ವಜಾರೋಹಣಗೈದರು. ಬಳಿಕ ಮಾತನಾಡಿದ ಅವರು, ಸ್ವಾತಂತ್ಯೋತ್ಸವದ ದಿನದಂದು ಪ್ರತೀಯೊಬ್ಬರು ಒಂದೊಂದು ಮರಗಳನ್ನು ನಡೆವಂತಾಗಬೇಕು. ಇದರಿಂದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪ್ರತೀಯೊಬ್ಬರು ಸಮಾಜಕ್ಕೆ ಉಡುಗೊರೆ ನೀಡಿದಂತಾಗುವ ಜೊತೆಗೆ ಪರಿಸರವೂ ಶುದ್ಧವಾಗಿರುತ್ತದೆ ಎಂದರು.

ಇದೇ ಸಂದರ್ಭ ಹಲವು ವರ್ಷಗಳಿಂದ ಮೆಸ್ಕಾಂ ಉದ್ಯೋಗದ ಜೊತೆಗೆ ಸಮಾಜಿಕ ಕಳಕಳಿಯೊಂದಿಗೆ ಕೆಲಸ ನಿರ್ವಹಿಸುತ್ತಿ ರುವ ಮೆಸ್ಕಾಂ ಸಿಬ್ಬಂದಿ ಯೋಗೀಶ್‌ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಸ್ಥಳೀಯರಾದ ಹಿರಿಯ ನಾಗರೀಕ ಪಲ್ಲಿಕುಟ್ಟಿ, ಸುನಿಲ್‌ ಬಂಡಾರಿ, ಪಕ್ಷಿಕೆರೆ ಫ್ರೆಂಡ್ಸ್‌ ನ ಅಧ್ಯಕ್ಷ ಶರೀಫ್‌, ಕ್ಲಬ್‌ನ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಇರ್ಷಾದ್‌ ಕೆರೆಕಾಡು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.










 


 


 


 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News