ಮಂಗಳೂರು: ಇ-ಸಿಗರೇಟ್ ಮಾರಾಟ ಪ್ರಕರಣ; ಮೂವರು ವ್ಯಾಪಾರಿಗಳ ಪರವಾನಿಗೆ ರದ್ದತಿಗೆ ಪೊಲೀಸ್ ಇಲಾಖೆ ಶಿಫಾರಸು

Update: 2023-08-24 13:15 GMT

ಫೈಲ್‌ ಫೋಟೊ 

ಮಂಗಳೂರು, ಆ.24: ಕೇಂದ್ರ ಸರಕಾರದಿಂದ ನಿಷೇಧಿಸಲ್ಪಟ್ಟ ಇ-ಸಿಗರೇಟ್‌ ಮಾರಾಟ ಮಾಡುತ್ತಿದ್ದ ದೂರಿನ ಮೇರೆಗೆ ಬರ್ಕೆ ಪೊಲೀಸರಿಂದ ದಾಳಿಗೊಳಗಾದ ನಗರದ ಲಾಲ್‌ಬಾಗ್‌ನ ಸಾಯಿಬೀನ್ ಕಾಂಪ್ಲೆಕ್ಸ್‌ನ ನೆಲಮಹಡಿಯಲ್ಲಿರುವ ಆಮಂತ್ರಣ, ಯೂನಿಕ್ ವರ್ಲ್ಡ್, ಫೆಂಟಾಸ್ಟಿಕ್ ವರ್ಲ್ಡ್‌ನ ವ್ಯಾಪಾರಿಗಳ ಪರವಾನಿಗೆ ರದ್ದತಿಗೆ ಪೊಲೀಸ್ ಇಲಾಖೆಯು ಮಂಗಳೂರು ಮಹಾನಗರ ಪಾಲಿಕೆಗೆ ಶಿಫಾರಸು ಮಾಡಿದೆ.

ಇ-ಸಿಗರೇಟ್‌ಗಳನ್ನು ಮತ್ತು ಸರಕಾರದ ಎಚ್ಚರಿಕೆಯನ್ನು ಪ್ಯಾಕೆಟ್ ಮೇಲೆ ನಮೂದಿಸದ ವಿದೇಶಿ ಸಿಗರೇಟ್‌ಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಖಚಿತ ಮಾಹಿತಿಯ ಮೇರೆಗೆ ಆ.21ರಂದು ಬರ್ಕೆ ಪೊಲೀಸರು ಅಂಗಡಿಗೆ ದಾಳಿ ನಡೆಸಿ 2,70,000 ರೂ. ಮೌಲ್ಯದ ಇ- ಸಿಗರೇಟ್ ಹಾಗೂ ವಿದೇಶಿ ಸಿಗರೇಟ್‌ಗಳನ್ನು ವಶಪಡಿಸಿಕೊಂಡು ಕಾನೂನು ಕ್ರಮ ಜರುಗಿಸಿದ್ದರು.

ಈ ಆರೋಪಿಗಳು ಹಿಂದೆಯೂ ಅಂಗಡಿಗಳಲ್ಲಿ ಇ-ಸಿಗರೇಟ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆದರೂ ಆರೋಪಿಗಳು ಮಾರಾಟ ಮುಂದುವರಿಸಿರುವುದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಈ ಮೂರು ಅಂಗಡಿಗಳ ಟ್ರೇಡ್ ಲೈಸನ್ಸ್ ರದ್ದುಪಡಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮಂಗಳೂರು ಮಹಾನಗರ ಪಾಲಿಕೆಗೆ ಪತ್ರ ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News