ಮಂಗಳೂರು: ಏಷ್ಯಾ ವೆಡ್ಡಿಂಗ್ ಶೋಗೆ ಚಾಲನೆ

Update: 2023-08-25 11:42 GMT

ಮಂಗಳೂರು, ಆ. 25: ಮದುವೆ ಮತ್ತು ಆಭರಣಗಳ ಪ್ರದರ್ಶನ ಮೂರು ದಿನಗಳ ಕಾಲ ನಡೆಯಲಿರುವ ಏಷ್ಯಾ ವೆಡ್ಡಿಂಗ್ ಶೋ ನಗರದ ಎಂ.ಜಿ. ರಸ್ತೆಯ ಟಿ.ಎಂ.ಎ. ಪೈ ಇಂಟರ್‌ನ್ಯಾಶನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ಆರಂಭಗೊಂಡ್ದಿದ್ದು, ನಟಿ ಆದ್ಯಾ ನಾಯಕ್ ಶುಕ್ರವಾರ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು 3 ದಿನಗಳ ಕಾಲ ಹಮ್ಮಿಕೊಂಡಿರುವ ಏಷ್ಯಾ ವೆಡ್ಡಿಂಗ್ ಶೋನಲ್ಲಿ ಮಂಗಳೂರಿನ ಜನರಿಗೆ ಇಷ್ಟವಾಗುವ ರೀತಿಯ ಜ್ಯುವೆಲ್ಲರಿಗಳ ಉತ್ತಮ ಕಲೆಕ್ಷನ್ ಇದೆ. ವಧುವಿನ ಆಭರಣಗಳಿಂದ ಹಿಡಿದು ಉಡುಪು ಸೇರಿದಂತೆ ಎಲ್ಲ ಅಗತ್ಯಗಳು ಒಂದೇ ಸೂರಿನಡಿ ಲಭ್ಯವಾಗುತ್ತಿದೆ. ಇದರ ಸದುಪಯೋಗವನ್ನು ಜನರು ಪಡೆದು ಕೊಳ್ಳಬೇಕು ಎಂದರು.

ಈ ಸಂದರ್ಭ ಎಚ್‌ಆರ್‌ಎಸ್ ಮೀಡಿಯಾದ ಹರೀಶ್ ಸಚ್‌ದೇವ್ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಮಂಗಳೂರಿ ನಲ್ಲಿ ಏಷ್ಯಾ ವೆಡ್ಡಿಂಗ್ ಶೋ ಆಯೋಜಿಸುತ್ತಿದ್ದು ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಈ ಬಾರಿಯೂ ಎಲ್ಲರೂ ಇಷ್ಟಪ ಡುವ ಬ್ರ್ಯಾಂಡ್‌ಗಳ ಹೊಸ ಹಾಗೂ ಅಪಾರ ಸಂಗ್ರಹವಿದೆ. ಜ್ಯುವೆಲ್ಲರಿಗಳಲ್ಲಿಯೂ ಗೋಲ್ಡ್, ಸಿಲ್ವರ್, ಪ್ಲಾಟಿನಂ ವಿಶೇಷ ವಾದ ಶೈಲಿಯ ಅಪರೂಪದ ಡಿಸೈನ್‌ಗಳಿರುವ ಕಲೆಕ್ಷನ್ ಲಭ್ಯವಿದ್ದು ಮಂಗಳೂರಿನ ಜನರ ಸದುಪಯೋಗ ಪಡೆಸಿಕೊಳ್ಳಬೇಕು ಎಂದರು.

ಈ ಸಂದರ್ಭ ವಿಜಯಕರ್ನಾಟಕದ ಪತ್ರಿಕೆಯ ಮಂಗಳೂರು ಆವೃತ್ತಿಯ ಸ್ಥಾನೀಯ ಸಂಪಾದಕರಾದ ರವೀಂದ್ರ ಶೆಟ್ಟಿ ಉಪಸ್ಥಿತರಿದ್ದರು.

ಮೇಳದಲ್ಲಿ ಬೆಂಗಳೂರಿನ ಶ್ರೀ ಗಣೇಶ್ ವಜ್ರಗಳು ಮತ್ತು ಆಭರಣಗಳು, ಬೆಂಗಳೂರಿನ ಗಜರಾಜ್ ಜ್ಯುವೆಲ್ಲರ್ಸ್, ಬೆಂಗಳೂರಿನ ಸಿಂಹ ಜ್ಯುವೆಲ್ಲರ್ಸ್, ಸ್ಟೈಲ್ ಔರಾ, ಗಾಸಿಪ್, ಅಸುಟುರಿ, ಕೊಕೊ ಲಗ್ಸುರಿ ಇಂಟರ್‌ನ್ಯಾಶನಲ್, ಸೇಫ್ಟಿ ಪಿನ್ ಸೀರೆಗಳು, ಪಿಕೆ ದೆಕ್ಸನ್ಸ್, ಮುದ್ರಾಕ್ ಹಾಗೂ ಇನ್ನಿತರ ಬ್ರ್ಯಾಂಡ್‌ಗಳು ಈ ವೆಡ್ಡಿಂಗ್ ಶೋನಲ್ಲಿ ದಲ್ಲಿ ಭಾಗವಹಿಸಿದೆ.

ಕೌಚರ್, ಸಾಂಪ್ರದಾಯಿಕ ಆಭರಣಗಳು, ಮದುಮಗಳ ಬಟ್ಟೆಗಳು, ಕಾಂಚೀಪುರಂ ವೆಡ್ಡಿಂಗ್ ಸೀರೆಗಳು, ಬನಾರಸ್ ವೆಡ್ಡಿಂಗ್ ಸೀರೆಗಳು, ಅಮೂಲ್ಯ ಹರಳುಗಳ ಮತ್ತು ಮುತ್ತಿನ ಆಭರಣಗಳು, ವೆಡ್ಡಿಂಗ್ ಪರಿಕರಗಳು, ಲೈಫ್‌ಸ್ಟೈಲ್ ಪರಿಕರಗಳು, ವೆಡ್ಡಿಂಗ್ ಫೋಟೋಗ್ರಾಫರ್, ವೆಡ್ಡಿಂಗ್ ಗಿಫ್ಟ್‌ಗಳು ಸೇರಿದಂತೆ ಒಂದು ಮದುವೆ ಕಾರ್ಯಕ್ರಮಗಳಿಗೆ ಬೇಕಾದ ಎಲ್ಲ ಸೊತ್ತುಗಳು ಈ ಪ್ರದರ್ಶನದಲ್ಲಿ ಗ್ರಾಹಕರಿಗೆ ಸಿಗಲಿದೆ. ಆ.26 ಮತ್ತು 27ರಂದು ಬೆಳಗ್ಗೆ 10.30ರಿಂದ ರಾತ್ರಿ 8 ಗಂಟೆಯವರೆಗೆ ಪ್ರದರ್ಶನ ತೆರೆದಿರುತ್ತದೆ.




 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News