ಮಂಗಳೂರು ಮಹಾನಗರ ಪಾಲಿಕೆ: ತ್ಯಾಜ್ಯ ಸಂಗ್ರಹಣೆಗೆ 27.15 ಕೋಟಿ ರೂ. ಮೊತ್ತದ ವಾಹನ ಖರೀದಿ

Update: 2023-08-29 12:34 GMT

ಮಂಗಳೂರು, ಆ. 29: ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್‌ಗಳ ಮನೆಗಳ ತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಟಕ್ಕಾಗಿ ಸ್ವಚ್ಛ ಭಾರತ್ ಮಿಷನ್‌ನಡಿ 27.15 ಕೋಟಿರೂ. ಮೊತ್ತದ ವಾಹನಗಳ ಖರೀದಿಗೆ ಸರಕಾರದಿಂದ ಅನುಮೋದನೆ ದೊರಕಿ ವಾಹನಗಳ ಸರಬರಾಜಿಗೆ ಕಾರ್ಯಾದೇಶ ನೀಡಲಾಗಿದೆ.

ಬಳ್ಳಾರಿಯ ಮೆ. ಕ್ಯಾಮಿಯಾನ್ ಅಟೋಮೊಬೈಲ್ ಸಂಸ್ಥೆಯಿಂದ 4.81 ಕೋಟಿ ರೂ. ಮೊತ್ತದ 45 ಹೆಡ್ರಾಲಿಕ್ ಜೀಪ್ ಟಿಪ್ಪರ್ ವಾಹನ ಮಂಗಳೂರು ಮಹಾನಗರ ಪಾಲಿಕೆ ಕಚೇರಿಗೆ ತಲುಪಿದ್ದು, ಮಂಗಳವಾರ ಅವುಗಳ ಉದ್ಘಾಟನೆ ನೆರವೇರಿಸಲಾಯಿತು.

ಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳನ್ನು ನಾಲ್ಕು ವಲಯಗಳಾಗಿ ವಿಂಗಡಿಸಲಾಗಿದೆ. ಈ ನಾಲ್ಕು ವಲಯಗಳಿಗೆ ಪ್ರತ್ಯೇಕ ಪ್ಯಾಕೇಜ್‌ಗಳಲ್ಲಿ ಮನೆ ಕಸ ಸಂಗ್ರಹಣ ಮತ್ತು ಸಾಗಾಟಕ್ಕೆ ವಾಹನಗಳ ಖರೀದಿ, ಮಾನವ ಸಂಪನ್ಮೂಲ, ನಿರ್ವಹಣೆ ಯೊಂದಿಗೆ ಒಂದು ವರ್ಷದ ಅವಧಿಗೆ ಹೊರ ಗುತ್ತಿಗೆಯ ಮೂಲಕ ಹಸಿ ಹಾಗೂ ಒಣ ತ್ಯಾಜ್ಯ ಸಂಗ್ರಹ ನಡೆಯಲಿದೆ. ಗುತ್ತಿಗೆದಾರರ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಪಾಲಿಕೆ ಆಯುಕ್ತ ಆನಂದ್ ತಿಳಿಸಿದ್ದಾರೆ.

ಜೆಟ್ ಸಕ್ಕಿಂಗ್ ಯಂತ್ರ

ಪಾಲಿಕೆ ವ್ಯಾಪಿಯ ವಲಯ 2ರ ವಾರ್ಡ್ ಸಂಖ್ಯೆ 21ರಿಂದ 40ರ ಒಳಚರಂಡಿ ನಿರ್ವಹಣೆಗಾಗಿ ಜೆಟ್ ಸಕ್ಕಿಂಗ್ ಯಂತ್ರ ಖರೀದಿಸಲಾಗಿದೆ. ಈ ಯಂತ್ರವು 6000 ಲೀಟರ್ ಸಾಮರ್ಥ್ಯವನ್ನು ಹೊಂದಿದ್ದು, 39.11 ಲಕ್ಷ ರೂ.ಗಳಿಗೆ ಈ ವಾಹನವನ್ನು ಮೆ. ಕ್ವಾಲಿಟಿ ಎನ್ವಿರೋ ಇಂಜಿನಿಯರಿಂಗ್ ಪ್ರೈ. ಲಿ. ಸಂಸ್ಥೆಯಿಂದ ವಾಹನ ಖರೀದಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News