ಮಂಗಳೂರು: ಕತರ್‌ನಲ್ಲಿ ಉದ್ಯೋಗ ನೀಡುವುದಾಗಿ ನಂಬಿಸಿ ವ್ಯಕ್ತಿಗೆ ವಂಚನೆ

Update: 2023-10-10 17:43 GMT

ಮಂಗಳೂರು, ಅ.10: ಕತರ್‌ನಲ್ಲಿ ಉದ್ಯೋಗ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರ ಖಾತೆಯಿಂದ 2.50,325ರೂ. ಹಣ ವರ್ಗಾಯಿಸಿ ವಂಚನೆ ಮಾಡಿದ ಬಗ್ಗೆ ನಗರದ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೋಹನ್ ಶರ್ಮ ಮತ್ತು ಆಲಿ ಪ್ರಕರಣದ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಕತರ್‌ನ ಕಂಪನಿಯೊಂದರಲ್ಲಿ ಇಂಜಿನಿಯರ್ ಉದ್ಯೋಗವಿದ್ದು, ಇದರ ಇಂಟರ್‌ವ್ಯೆ ಇದೆಯೆಂದು ಇ-ಮೇಲ್‌ಗೆ ಸಂದೇಶ ಬಂದಿತ್ತು’. ಅದರಂತೆ ದೂರುದಾರರು ಅರ್ಜಿ ಸಲ್ಲಿಸಲು ನಿರ್ಧರಿಸಿ, ಆರೋಪಿಗಳು ಹೇಳಿದಂತೆ ಅಂಕಪಟ್ಟಿ, ರೆಸ್ಯೂಮ್, ಸ್ಯಾಲರಿ ಸ್ಲಿಪ್, ಪಾಸ್‌ಪೋರ್ಟ್ ಪ್ರತಿ, ಕೋವಿಡ್ ವ್ಯಾಕ್ಸಿನೇಶನ್ ಸರ್ಟಿಫಿಕೇಟ್‌ನ್ನು ಇ-ಮೇಲ್ ಮೂಲಕ ಕಳುಹಿಸಿಕೊಟ್ಟಿದ್ದರು. ಇದಾದ ಕೆಲದಿನಗಳ ಬಳಿಕ ಅವರ ಖಾತೆಯಿಂದ ಹಂತ ಹಂತವಾಗಿ 2,50,325 ಲಕ್ಷ ರೂ. ಹಣವನ್ನು ವರ್ಗಾಯಿಸಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News