ಮಂಗಳೂರು: ಕೆವೈಸಿ ಹೆಸರಿನಲ್ಲಿ ವ್ಯಕ್ತಿಗೆ ವಂಚನೆ
Update: 2023-09-23 16:09 GMT
ಮಂಗಳೂರು, ಸೆ.23: ಕೆವೈಸಿ ಮಾಡದಿದ್ದರೆ ಕ್ರೆಡಿಟ್ ಕಾರ್ಡ್ ಬ್ಲಾಕ್ ಆಗುತ್ತದೆ ಎಂದು ನಂಬಿಸಿ ಅಪರಿಚಿತ ವ್ಯಕ್ತಿಯೊಬ್ಬ 1,93,210 ರೂ. ಬ್ಯಾಂಕ್ ಖಾತೆಯಿಂದ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ವರದಿಯಾಗಿದೆ.
ಈ ಸಂಬಂಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರ ಮೊಬೈಲ್‌ಗೆ ಅಪರಿಚಿತ ಸಂಖ್ಯೆಯಿಂದ ಕೈವೈಸಿ ಅಪ್‌ಡೇಟ್ ಮಾಡುವ ಕುರಿತಂತೆ ಸಂದೇಶ ಬಂದಿದೆ. ಬಳಿಕ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಅಪ್‌ಡೇಟ್ ಮಾಡದಿದ್ದರೆ ಕ್ರೆಡಿಟ್ ಕಾರ್ಡ್ ಬ್ಲಾಕ್ ಆಗುತ್ತದೆ ಎಂದು ತಿಳಿಸಿದ ಎನ್ನಲಾಗಿದೆ.
ಇದನ್ನು ನಂಬಿದ ದೂರುದಾರರು ಸಂದೇಶದಲ್ಲಿ ಬಂದಿದ್ದ ಲಿಂಕ್ ಮೂಲಕ ಕ್ರೆಡಿಟ್ ಕಾರ್ಡ್ ನಂಬರ್ ನಮೂದಿಸಿ, ಒಟಿಪಿ ನೀಡಿದ್ದಾರೆ. ತಕ್ಷಣ ಹಂತ ಹಂತವಾಗಿ 1.93 ಲಕ್ಷ ರೂ. ಅವರ ಖಾತೆಯಿಂದ ಅಪರಿಚಿತ ವ್ಯಕ್ತಿಯ ಖಾತೆಗೆ ವರ್ಗಾವಣೆ ಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.