ಮಾಣಿ : ಕರ್ನಾಟಕ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವ
ಬಂಟ್ವಾಳ : ವಿದ್ಯಾಭಿವರ್ಧಕ ಸಂಘ (ರಿ) ಮಾಣಿ ಇದರ ಅಧೀನದ ಕರ್ನಾಟಕ ಪ್ರೌಢ ಶಾಲೆ ಮತ್ತು ಕರ್ನಾಟಕ ಆಂಗ್ಲ ಮಾಧ್ಯಮ ಶಾಲೆ ಇವುಗಳ ಸಹಯೋಗದಲ್ಲಿ 2024 - 25 ನೇ ಸಾಲಿನ ವಾರ್ಷಿಕೋತ್ಸವ ಕಾರ್ಯಕ್ರಮ ಶನಿವಾರ ನಡೆಯಿತು.
ಕಾರ್ಯಕ್ರಮವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾಣಿ ವಲಯದ ಮೇಲ್ವಿಚಾರಕಿ ಆಶಾಪಾರ್ವತಿ ಉದ್ಘಾಟಿಸಿದರು. ಪೆರ್ನೆಯ ಶ್ರೀರಾಮಚಂದ್ರ ಪದವಿಪೂರ್ವ ಕಾಲೇಜು ಇದರ ಪ್ರಾಂಶುಪಾಲ ಶೇಖರ್ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಮಾರೋಪ ಸಮಾರಂಭದ "ಸಂಭ್ರಮ"- ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ಮಾಣಿ ವಿದ್ಯಾಭಿವರ್ಧಕ ಸಂಘದ ಅಧ್ಯಕ್ಷ ಕಿರಣ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಪುತ್ತೂರು ಮಾಯ್ ದೆ ದೇವುಸ್ ಶಾಲಾ ಮುಖ್ಯ ಶಿಕ್ಷಕಿ ಜಾನೆಟ್ ಡಿ' ಸೋಜಾ ಆಗಮಿಸಿದ್ದರು.
ಐಡಿಯಲ್ ಕ್ಯಾಶ್ಯೂ ಇಂಡಸ್ಟ್ರೀಸ್ ಮಾಲಕ ಗಂಗಾಧರ ಶೇರ್, ಮಂಗಳೂರು ರಾಮಕೃಷ್ಣ ಕಾಲೇಜು ಪ್ರಾಂಶುಪಾಲ ಡಾ. ಅನುಸೂಯ ರೈ, ಕೊಣಾಜೆ ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ಸಹ ಪ್ರಾಧ್ಯಾಪಕ ಮುಹಮ್ಮದ್ ಹುಸೇನ್ ಕೆ., ಶಿಕ್ಷಕ - ರಕ್ಷಕ ಸಂಘದ ಅಧ್ಯಕ್ಷ ಹರೀಶ್ ಮಾಣಿ, ಮೆಲ್ವಿನ್ ಕಿಶೋರ್ ಮಾರ್ಟಿಸ್, ಆಡಳಿತ ಮಂಡಳಿ ಜೊತೆ ಕಾರ್ಯದರ್ಶಿ ಕುಶಲ ಎಂ. ಪೆರಾಜೆ ಸದಸ್ಯರುಗಳಾದ ಬಾಲಕೃಷ್ಣ ಶೆಟ್ಟಿ ಕೊಡಾಜೆ, ಜಯರಾಮ ರೈ, ಸನತ್ ಕುಮಾರ್ ಜೈನ್, ವನಿತಾ ಲಕ್ಷ್ಮೀನಾರಾಯಣ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಇತ್ತೀಚೆಗೆ ಸೇವೆಯಿಂದ ನಿವೃತ್ತಿ ಗೊಂಡ ಚಿತ್ರಕಲಾ ಶಿಕ್ಷಕಿ ಐ. ಜಯಲಕ್ಷ್ಮೀ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಹಮ್ಮದ್ ಯಾಸಿರ್ ಕಲ್ಲಡ್ಕ, ಕಳೆದ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದ ಭವ್ಯಶ್ರೀ ಮತ್ತು ವಿಜೇತ್ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಶಾಲಾ ಆಡಳಿತ ಮಂಡಳಿ ಕೋಶಾಧಿಕಾರಿ ಜಗನ್ನಾಥ ಚೌಟ ಬದಿಗುಡ್ಡೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತುಂಬೆ ಪ.ಪೂ. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕೆ.ಎನ್. ಗಂಗಾಧರ ಆಳ್ವ ಅವರನ್ನು ಗೌರವಿಸಲಾಯಿತು. ಕಲಿಕೆ, ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು.
ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಆಡಳಿತ ಮಂಡಳಿ ಸದಸ್ಯಬಾಲಕೃಷ್ಣ ಆಳ್ವ ಕೊಡಾಜೆ ಪ್ರಸ್ತಾವನೆಗೈದರು.
ಪ್ರೌಢಶಾಲಾ ಮುಖ್ಯ ಶಿಕ್ಷಕ ಎಸ್. ಚೆನ್ನಪ್ಪ ಗೌಡ ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಸಾರಿಕಾ ವಾರ್ಷಿಕ ವರದಿ ವಾಚಿಸಿದರು. ಶಾಲಾ ಸಂಚಾಲಕ ಹಾಜಿ ಇಬ್ರಾಹಿಂ ಕೆ. ಮಾಣಿ ಸ್ವಾಗತಿಸಿ, ಶಿಕ್ಷಕ ಗಂಗಾಧರ ಗೌಡ ವಂದಿಸಿದರು.
ಶಿಕ್ಷಕರುಗಳಾದ ಪ್ರಿಯಾ, ಜೀವಿತ, ಸವಿತಾ ಶ್ಯಾಮಲಾ ಕೆ. ಮತ್ತು ಸುಶ್ಮಿತಾ ವಿವಿಧ ಕಾರ್ಯಕ್ರಮ ನಿರೂಪಿಸಿದರು.