ಮಂಗಳೂರು: ಬ್ಯಾರಿಸ್ ಕ್ಯಾಂಪಸ್ ನಲ್ಲಿ "ಉತ್ಕರ್ಷ್ 2024" ಸ್ಪರ್ಧೆ
ಮಂಗಳೂರು: ಬ್ಯಾರೀಸ್ ಗ್ರೂಪ್ ಆಫ್ ಇನ್ ಸ್ಟಿಟ್ಯೂಷನ್ಸ್ ವತಿಯಿಂದ "ಉತ್ಕರ್ಷ್ 2024" ಎಂಬ ಅಂತರ್ ಶಾಲಾ ಮತ್ತು ಅಂತರ್ ಕಾಲೇಜು ಸ್ಪರ್ಧೆಯನ್ನು ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್ ಇನೋಳಿಯಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ BIES ಪ್ರಾಂಶುಪಾಲರಾದ ಡಾ. ಅಝೀಜ್ ಮುಸ್ತಫಾ, ಬೀಡ್ಸ್ ಪ್ರಾಂಶುಪಾಲರಾದ ಖಲೀಲ್ ರಝಾಕ್, BIPUC ಪ್ರಾಂಶುಪಾಲರಾದ ಬಿ.ಕೆ.ಅಬ್ದುಲ್ ಲತೀಫ್, BITP ನಿರ್ದೇಶಕ ಪ್ರೊ. ಪೃಥ್ವಿರಾಜ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಅಬ್ದುಲ್ಲಾ ಗುಬ್ಬಿ, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ನಳಿನಿ ರೆಬೆಲ್ಲೋ, ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಅಂಜುಮ್ ಖಾನ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ವಸಂತ್ ಕುಮಾರ್, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಪ್ರೊ. ಸಿನಾನ್, AI & DS ವಿಭಾಗದ ಮುಖ್ಯಸ್ಥರಾದ ಡಾ. ಮೆಹಬೂಬ್ ಮುಜಾವರ್, ಕಾರ್ಯಕ್ರಮದ ಸಂಯೋಜಕರಾದ ಪ್ರಫುಲ್ಲ ಅವರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಕ್ವಿಝ್, ರಂಗೋಲಿ, ಮಾಡೆಲ್ ಸೃಷ್ಟಿ, ಛಾಯಾಗ್ರಹಣ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಿಗೆ ನಗದು ಬಹುಮಾನ ಮತ್ತು ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಗಿದೆ. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ 25 ಶಾಲಾ-ಕಾಲೇಜುಗಳ 430 ವಿದ್ಯಾರ್ಥಿಗಳು ಭಾಗವಹಿಸಿದ್ದರು.