ಮೀಫ್ ನಿಂದ ಅಂತರ್ ಜಿಲ್ಲಾ ಮ್ಯಾಟ್ ಕಬಡ್ಡಿ ಪಂದ್ಯಾಟ: ಬಂಟ್ವಾಳದ ತೌಹೀದ್ ಆಂಗ್ಲ ಮಾಧ್ಯಮ ಶಾಲೆ ಚಾಂಪಿಯನ್

Update: 2024-11-10 11:08 GMT

ಮಂಗಳೂರು, ನ.10: ದ.ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟ(ಮೀಫ್)ದ ವತಿಯಿಂದ ಜೋಕಟ್ಟೆಯ ಅಂಜುಮನ್ ವಿದ್ಯಾ ಸಂಸ್ಥೆಯ ಕ್ರೀಡಾಂಗಣದಲ್ಲಿ ಶನಿವಾರ ದ.ಕ. ಮತ್ತು ಉಡುಪಿ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ ನಡೆಯಿತು.

ಮಂಗಳೂರು ನಗರ ಸಂಚಾರ ಸಹಾಯಕ ಪೊಲೀಸ್ ಆಯುಕ್ತರು ನಜ್ಮಾ ಫಾರೂಖಿ ಪಂದ್ಯಾವಳಿಗೆ ಚಾಲನೆ ನೀಡಿದರು. ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಂಗಳೂರಿನ ಡೆಲ್ಟಾ ಸಂಸ್ಥೆಯ ಬದ್ರುದ್ದೀನ್ ಪಣಂಬೂರು ಮಾತನಾಡಿ ಶುಭ ಹಾರೈಸಿದರು.

ವೈಟ್ ಸ್ಟೋನ್ ಸಂಸ್ಥೆಯ ವ್ಯವಸ್ಥಾಪಕ ಬಿ.ಎಂ.ಶರೀಫ್ ಕಬಡ್ಡಿ ಕೋರ್ಟ್ ಉದ್ಘಾಟಿಸಿದರು. ಮೀಫ್ ಪ್ರಧಾನ ಕಾರ್ಯದರ್ಶಿ ರಿಯಾಝ್ ಕಣ್ಣೂರು ಪ್ರಾಸ್ತಾವಿಕ ಭಾಷಣಗೈದರು.

ಪಂದ್ಯಾಕೂಟದ ಪ್ರಾಯೋಜಕತ್ವವನ್ನು ಜೋಕಟ್ಟೆಯ ಅಂಜುಮನ್ ವಿದ್ಯಾ ಸಂಸ್ಥೆ ವಹಿಸಿದ್ದು, ಇದರ ಉಸ್ತುವಾರಿಯನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶರೀಫ್ ಎಚ್.ಪಿ.ಸಿಎಲ್., ಸಂಚಾಲಕ ಅಮೀರ್ ಬಾವಾಜಿ, ಮಸಾಕೀನ್ ಕೇಂದ್ರ ಸಂಚಾಲಕ ಗೋವಾ ಖಾದರ್ ವಹಿಸಿದ್ದರು.

ವೇದಿಕೆಯಲ್ಲಿ ಮೀಫ್ ಕಾರ್ಯಕ್ರಮ ಕಾರ್ಯದರ್ಶಿ ಮುಹಮ್ಮದ್ ಶಾರಿಕ್, ಸದಸ್ಯರಾದ ಅಡ್ವೋಕೇಟ್ ಉಮರ್ ಫಾರೂಖ್, ಪರ್ವೇಝ್ ಅಲಿ, ಶೇಖ್ ರಹ್ಮತುಲ್ಲಾಹ್, ಬಿ.ಎ.ನಝೀರ್, ಬಿ.ಎ.ಇಕ್ಬಾಲ್, ರಝಾಕ್ ಹಜ್ಜಾಜ್, ಅಂಜುಮನ್ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ರಶೀದ್ ಕೊಪ್ಪ, ಕೋಶಾಧಿಕಾರಿ ರಶೀದ್ ಬಾವಾಜಿ, ಉಪ ಸಂಚಾಲಕ ಜಿ.ಎಂ.ಸಂಶುದ್ದೀನ್, ಜೊತೆ ಕಾರ್ಯದರ್ಶಿ ಕಾಸಿಂ ಅಮೀರ್, ಮಾಜಿ ಅಧ್ಯಕ್ಷ ಬಿ.ಎ.ರಹೀಂ, ಫಾರೂಖ್ ಏರ್ಲೈನ್ಸ್, ಪ್ರಾಂಶುಪಾಲೆ ಮುಶೀಬ, ಕಾಲೇಜು ಪ್ರಾಂಶುಪಾಲೆ ಸುಮಯ್ಯ, ಮುಖ್ಯೋಪಾಧ್ಯಾಯಿನಿ ವಿನಯಾ, ದೈಹಿಕ ಶಿಕ್ಷಣ ಶಿಕ್ಷಕಿ ತೇಜಾಕ್ಷಿ ಮೊದಲಾದವರು ಉಪಸ್ಥಿತರಿದ್ದರು.

ಬಂಟ್ವಾಳ ತೌಹೀದ್ ಆಂಗ್ಲ ಮಾಧ್ಯಮ ಶಾಲೆ ಚಾಂಪಿಯನ್

ಪಂದ್ಯಾಟದಲ್ಲಿ ಬಂಟ್ವಾಳ ತೌಹೀದ್ ಆಂಗ್ಲ ಮಾಧ್ಯಮ ಶಾಲೆ ಚಾಂಪಿಯನ್ ಆಗಿ ಹೊರಹೊಮ್ಮಿತು. ಜೋಕಟ್ಟೆ ಅಂಜುಮನ್ ಆಂಗ್ಲ ಮಾಧ್ಯಮ ಶಾಲೆ ರನ್ನರ್ ಅಪ್ ಪ್ರಶಸ್ತಿಗೆ ಭಾಜನವಾಯಿತು.

ಉತ್ತಮ ಆಲ್ ರೌಂಡರ್: ಶಾಹಿದ್ ಮುಈನುದ್ದೀನ್ (ಅಂಜುಮನ್ ಜೋಕಟ್ಟೆ), ಬೆಸ್ಟ್ ರೈಡರ್: ಬಾಹಿರ್ (ತೌಹೀದ್ ಬಂಟ್ವಾಳ) ಬೆಸ್ಟ್ ಡಿಫೆಂಡರ್: ಸನಉಲ್ಲಾ (ತೌಹೀದ್ ಬಂಟ್ವಾಳ)

ಮೋಸ್ಟ್ ವ್ಯಾಲ್ಯೂವೇಬಲ್ ಪ್ಲೇಯರ್: ಮುಹಮ್ಮದ್ ಅಫ್ನಾನ್ (ನೋಬ್ಲ್ ಶಾಲೆ ಕುಂಜತ್ತಬೈಲ್) ಪ್ರಶಸ್ತಿ ಪಡೆದುಕೊಂಡರು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಯೆನೆಪೊಯ ಸಮೂಹ ಸಂಸ್ಥೆಯ ವ್ಯವಸ್ಥಾಪಕ ಮತ್ತು ಟ್ರಸ್ಟಿ ಯೆನೆಪೊಯ ಅಬ್ದುಲ್ಲಾ ಜಾವೀದ್, ಅಕಾಡಮಿ ಆಫ್ ಲರ್ನಿಂಗ್ ಅಧ್ಯಕ್ಷ ಸಯ್ಯದ್ ಬ್ಯಾರಿ ಮತ್ತು ಜೋಕಟ್ಟೆ ಹಳೆ ಜುಮಾ ಮಸೀದಿಯ ಅಧ್ಯಕ್ಷ ಬಿ.ಎಸ್.ಬಶೀರ್ ಉಪಸ್ಥಿತಿಯಲ್ಲಿ ಚಾಂಪಿಯನ್ ಶಿಪ್ ಟ್ರೋಫಿ, ಪದಕ ಮತ್ತು ಪ್ರಶಸ್ತಿ ಪತ್ರ ಹಾಗೂ ವೈಯುಕ್ತಿಕ ಪ್ರಶಸ್ತಿಗಳನ್ನು ವಿತರಿಸಲಾಯಿತು.

ಅಂಜುಮನ್ ಜೋಕಟ್ಟೆಯ ಅಧ್ಯಕ್ಷ ಸಿರಾಜ್ ಮಾನೆಗಾರ ಸ್ವಾಗತಿಸಿದರು. ದಿವ್ಯಾ ಮತ್ತು ಶಿಫಾಲಿ ಕಾರ್ಯಕ್ರಮ ನಿರೂಪಿಸಿದರು.

ಉಭಯ ಜಿಲ್ಲೆಗಳ 20 ವಿದ್ಯಾ ಸಂಸ್ಥೆಗಳ 300 ಕ್ರೀಡಾಪಟುಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದರು.

 

 

 

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News