ಮೂಡುಬಿದಿರೆ: ಸರಣಿ ರಸ್ತೆ ಅಪಘಾತ; ಇಬ್ಬರಿಗೆ ಗಾಯ

Update: 2024-11-11 07:38 GMT

 ಮೂಡುಬಿದಿರೆ: ಓವರ್ ಟೇಕ್ ಮಾಡುವ ಭರದಲ್ಲಿ ಸರಣಿ ಅಪಘಾತ ನಡೆದು ತಾಯಿ ಮತ್ತು ಮಗಳು ಗಂಭೀರ ಗಾಯಗೊಂಡಿರುವ ಘಟನೆ ತೋಡಾರಿನಲ್ಲಿ ಸೋಮವಾರ ನಡೆದಿರುವ ಬಗ್ಗೆ ಘಟನೆ ವರದಿಯಾಗಿದೆ‌..

ಮಾಸ್ಟರ್ ಎಂಬ ಹೆಸರಿನ ಖಾಸಗಿ ಬಸ್ ಮೂಡುಬಿದಿರೆಯಿಂದ ಮಂಗಳೂರಿನತ್ತ ಹೋಗುವ ಸಂದರ್ಭದಲ್ಲಿ ತೋಡಾರು ಮೈಟ್ ಕಾಲೇಜ್ ಎದುರುಗಡೆ ಕಾಲೇಜು ಬಸ್ಸನ್ನು ಓವರ್ ಟೇಕ್ ಮಾಡುವ ವೇಳೆ ಘಟನೆ ನಡೆದಿದ್ದು, ಕಾಲೇಜ್ ಬಸ್ ಗೆ ಢಿಕ್ಕಿ ಹೊಡೆದ ಖಾಸಗಿ ಬಸ್, ಎದುರಿನಲ್ಲಿ ಬರುತ್ತಿದ್ದ ತಾಯಿ ಮತ್ತು ಮಗಳಿದ್ದ ಸ್ಕೂಟಿಗೆ ಢಿಕ್ಕಿ ಹೊಡೆದಿದೆ. ಸ್ಕೂಟಿಯು ಅದರ ಎದುರಿನಲ್ಲಿದ್ದ ಆಟೊ‌ರಿಕ್ಷಾವೊಂದಕ್ಕೆ ಢಿಕ್ಕಿ ಹೊಡೆದಿದೆ‌. ಘಟನೆಯಿಂದ ತಾಯಿಗೆ ಅಲ್ಪ ಪ್ರಮಾಣದ ಗಾಯಗಳಾಗಿದ್ದು ಮಗಳಿಗೆ ಗಂಭೀರ ಗಾಯಗಳಾಗಿವೆ.  

ಕಾಲೇಜು ಬಸ್ ನಲ್ಲಿದ್ದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು, ಖಾಸಗಿ ಬಸ್ ಗಳು ರಭಸದ ಕಡಿವಾಣವಿಲ್ಲದೆ ಓಡಾಡುತ್ತಿದ್ದು ಈ ಬಗ್ಗೆ ಈಗಾಗಲೇ ಹಲವು ಪ್ರಕರಣಗಳು ನಡೆದಿದ್ದು, ಪೊಲೀಸರಾಗಲೀ, ಬಸ್ ಮಾಲಕರಾಗಲೀ ಇನ್ನೂ ಎಚ್ಚೆತ್ತುಕೊಂಡಿಲ್ಲ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆಕ್ರೋಶ‌ ವ್ಯಕ್ತ ಪಡಿಸಿದರು.

ಸ್ಥಳಕ್ಕೆ ಮೂಡುಬಿದಿರೆ ಪೊಲೀಸರು ಭೇಟಿ ನೀಡಿ ಉದ್ರಿಕ್ತ ವಿದ್ಯಾರ್ಥಿಗಳನ್ನು ಸಮಧಾನ ಪಡಿಸುತ್ತಿದ್ದಾರೆ. ವಿದ್ಯಾರ್ಥಿಗಳು ಬಸ್ಸಿನ ಮಾಲಕ ಸ್ಥಳಕ್ಕೆ ಬರಬೇಕೆಂದು ಆಗ್ರಹಿಸಿ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಆದರೆ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಘಟನೆಗೆ ಸಂಬಂಧಿಸಿ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‌ 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News