ಕೋಟೆಪುರ: ಟಿಪ್ಪುಸುಲ್ತಾನ್ ಶಾಲಾ ನೂತನ ಕಟ್ಟಡ ಉದ್ಘಾಟನೆ
ಉಳ್ಳಾಲ: ಸಮಾಜ, ದೇಶ, ಸಮುದಾಯ ಬಲಿಷ್ಠವಾಗಲು ರಸ್ತೆ ಬದಿ ಭಾಷಣ ಮಾಡಿದರೆ ಸಾಲದು. ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಿ ಮಕ್ಕಳನ್ನು ಸತ್ಪ್ರಜೆ ಮಾಡಿದರೆ ಸಮುದಾಯವನ್ನು ಉನ್ನತ ಸ್ಥಾನಕ್ಕೆ ಕೊಂಡೊ ಯ್ಯಬಹುದಾಗಿದೆ ಎಂದು ರಾಜ್ಯ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ಉಳ್ಳಾಲ ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ಅಧೀನದ ಕೋಟೆಪುರ ಅನುದಾನಿತ ಟಿಪ್ಪುಸುಲ್ತಾನ್ ಶಿಕ್ಷಣ ಸಂಸ್ಥೆಗೆ ದಾನಿಯ ನೆರವಿನಿಂದ ಹಾಜಿ ಯು.ಕೆ. ಸಯ್ಯದ್ ಅವರ ಸ್ಮರಣಾರ್ಥ ನಿರ್ಮಿಸಲಾದ ನೂತನ ಕಟ್ಟಡವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲೆಗೆ ಸರಕಾರದ 35 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಿ ಕಟ್ಟಡಕ್ಕೆ ಹೊಸರೂಪ ಕೊಟ್ಟು ಶಾಲೆ ಉಳಿಸುವ ಪ್ರಯತ್ನ ಮಾಡಿದರೂ ಮಕ್ಕಳ ಸಂಖ್ಯೆ ಹೆಚ್ಚಾಗದ ಕಾರಣ ಆಂಗ್ಲ ಮಾಧ್ಯಮ ಅನಿವಾರ್ಯ. ಈ ನಿಟ್ಟಿನಲ್ಲಿ ಊರವರೇ ಕಟ್ಟಡ ನಿರ್ಮಿಸಿ ಕೊಟ್ಟಿರುವುದು ಸ್ಥಳೀಯ ಪ್ರದೇಶಕ್ಕೆ ದೊಡ್ಡ ಕೊಡುಗೆಯಾಗಿದೆ ಎಂದು ಖಾದರ್ ಹೇಳಿದರು.
ಕೋಟೆಪುರ ಜುಮಾ ಮಸೀದಿಯ ಖತೀಬ್ ಇರ್ಷಾದ್ ಸಖಾಫಿ ದುಆ ನೆರವೇರಿಸಿದರು. ಕಟ್ಟಡದ ದಾನಿಗಳಾದ ಹಮೀದ್ ಸಯ್ಯದ್, ಖಾದರ್ ಸಯ್ಯದ್, ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್. ಈಶ್ವರ್, ಮಂಗಳೂರು ಫಿಶ್‌ಮೀಲ್ ಆಯಿಲ್ ಅಸೋಸಿಯೇಶನ್ ಅಧ್ಯಕ್ಷ ಎಚ್.ಕೆ.ಖಾದರ್, ದರ್ಗಾದ ನಿಕಟಪೂರ್ವ ಅಧ್ಯಕ್ಷ ಅಬ್ದುರ‌್ರಶೀದ್, ನಿಕಟ ಪೂರ್ವ ಉಪಾಧ್ಯಕ್ಷ ಮೋನು ಇಸ್ಮಾಯಿಲ್, ಮತ್ಸ್ಯೋದ್ಯಮಿಗಳಾದ ಇಮ್ತಿಯಾಝ್, ಫಾರೂಕ್, ಸಂಸ್ಥೆಯ ಮಾಜಿ ಸಂಚಾಲಕ ಯು.ಕೆ.ಅಬ್ಬಾಸ್, ನಗರಸಭಾ ಸದಸ್ಯ ಮುಹಮ್ಮದ್ ರಮೀಝ್, ಕೋಟೆಪುರ ಜುಮಾ ಮಸೀದಿಯ ಅಧ್ಯಕ್ಷ ಯು.ಕೆ. ಅಬ್ಬಾಸ್, ಮಾಜಿ ಅಧ್ಯಕ್ಷ ಹಮ್ಮಬ್ಬ ಯು.ಕೆ.ಮಹಮೂದ್, ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆಎಂಕೆ ಮಂಜನಾಡಿ, ದಾನಿ ಶರಾಫತ್, ಮುಖ್ಯಶಿಕ್ಷಕಿ ಗೀತಾ ಆರ್.ಶೆಟ್ಟಿ, ಶಿಕ್ಷಕರಾದ ಈಶ್ವರ್ ಮೂಲ್ಯ, ಅಲ್ಲಾಭಕ್ಷ್ ಅಲಗೂರು ಉಪಸ್ಥಿತರಿದ್ದರು.
ಹಯಾತುಲ್ ಇಸ್ಲಾಂ ಟ್ರಸ್ಟ್ ಕಾರ್ಯದರ್ಶಿ ಎಂ.ಎಚ್. ಮಲಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜತೆ ಕಾರ್ಯದರ್ಶಿ ಮುಹಮ್ಮದ್ ಫಾಝಿಲ್ ಕೋಟೆಪುರ ಸ್ವಾಗತಿಸಿದರು. ಶಿಕ್ಷಕಿ ಮೋಹಿತಾ ವಂದಿಸಿದರು. ಮೃದುಲಾ ಜೀವನ್ ಬಂಗೇರ ಕಾರ್ಯಕ್ರಮ ನಿರೂಪಿಸಿದರು.