ಯೆನೆಪೋಯ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಎಪಿಸೀಲರ್ ಮೊಣಕಾಲು ಇಂಪ್ಲಾಂಟ್ ಚಿಕಿತ್ಸೆ

Update: 2024-07-06 11:37 GMT

ಮಂಗಳೂರು: ನಗರದ ಕೊಡಿಯಾಲ್‌ಬೈಲ್‌ನ ಯೆನೆಪೊಯ ಸ್ಪೆಷಾಲಿಟಿ ಆಸ್ಪತ್ರೆಯು ಎಪಿಸೀಲರ್ ಮೊಣಕಾಲು ಇಂಪ್ಲಾಂಟ್ ಚಿಕಿತ್ಸೆ ಕೈಗೊಂಡಿದ್ದು, ಇದು ದಕ್ಷಿಣ ಭಾರತದಲ್ಲೇ ಮೊಟ್ಟಮೊದಲ ಬಾರಿಗೆ ಇಂತಹ ಚಿಕಿತ್ಸೆಯನ್ನು ಕೈಗೊಳ್ಳಲಾಗಿದೆ.

ಜೂ. 30 ರಂದು 60ರ ಹರೆಯದ ವ್ಯಕ್ತಿಯೊಬ್ಬರಿಗೆ ಯಶಸ್ವಿಯಾಗಿ ಈ ಚಿಕಿತ್ಸೆಯನ್ನು ನಡೆಸಲಾಗಿದೆ.

ಯೆನೆಪೊಯ ಆಸ್ಪತ್ರೆಯ ಪ್ರಮಾಣೀಕೃತ ರೋಬೋಟಿಕ್ ಚಾಯಿಂಟ್ ರಿಪ್ಲೇಸ್ಮೆಂಟ್ ಮತ್ತು ಆರ್ಥ್ರೋಸ್ಕೋಪಿ ಶಸ್ತ್ರ ಚಿಕಿತ್ಸಕ ಡಾ.ದೀಪಕ್ ರೈ ಅವರು ಸ್ಟಾಕ್‌ಹೋಮ್‌ನ ಕ್ಯಾರೋಲಿನ್‌ಸ್ಕಾ ಇನ್‌ಸ್ಟಿಟ್ಯೂಟ್‌ನ ಮಾಜಿ ಪ್ರಾಧ್ಯಾಪಕ ಮತ್ತು ಎಪಿಸರ್ಫ್ ಮೆಡಿಕಲ್ ಎಬಿ ಸಂಸ್ಥೆಯ ಸಂಸ್ಥಾಪಕ ಪ್ರೊಫೆಸರ್ ಲೈಫ್ ರೈಡ್ ಜೊತೆಯಾಗಿ ಈ ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದಾರೆ.

ಡಾ. ದೀಪಕ್ ರೈ ಮತ್ತು ಎಪಿಸರ್ಫ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮೋಹನ್ ನಾಯರ್ ಅವರು ಮೂಳೆ ಶಸ್ತ್ರಚಿಕಿತ್ಸೆಯಲ್ಲಿನ ಈ ಮಹತ್ವದ ಪ್ರಗತಿಯ ಕುರಿತು ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಶನಿವಾರ ಮಾಹಿತಿ ನೀಡಿದರು.

ಈ ರೀತಿ ಶಸ್ತ್ರ ಚಿಕಿತ್ಸೆ ಮಾಡಿಕೊಂಡರೆ 15 ವರ್ಷಗಳ ತನಕ ಯಾವುದೇ ಸಮಸ್ಯೆ ಇಲ್ಲದೆ ನಡೆದಾಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಮೊಣಕಾಲು ಕೀಲು ದೇಹದಲ್ಲಿನ ಅತಿದೊಡ್ಡ ಜಾಯಿಂಟ್ ಆಗಿದ್ದು, ಫೀಮರ್ (ತೊಡೆಯ ಮೂಳೆ), ಟಿಬಿಯಾ (ಮೊಣಕಾಲಿನ ಕೆಳಗಿನ ಮುಂಭಾಗದ ಎಲುಬು) ಮತ್ತು ಪಟೆಲ್ಲಾ (ಮಂಡಿಚಿಪ್ಪು) ಅನ್ನು ಜೋಡಿಸುತ್ತದೆ. ಮೂಳೆಗಳು ಸಂಧಿಸುವ ಮೇಲ್ಮೈಯನ್ನು ಕಾರ್ಟಿಲೇಜ್ ಆವರಿಸುತ್ತದೆ, ಇದು ಸ್ಪಂಜಿನಂತಹ ವಸ್ತುವಾಗಿದ್ದು ಶಾಕ್ ಅಬ್ದಾರ್ಬರ್ ಆಗಿ ಕಾರ್ಯನಿರ್ವಹಿಸುತ್ತದೆ ಎಂದು ಮಾಹಿತಿ ನೀಡಿದರು.

ಯೆನೆಪೊಯ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಮುಹಮ್ಮದ್ ತಾಹಿರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News