ಮುಲ್ಕಿ: ಶಾಫಿ ಜುಮಾ ಮಸ್ಜಿದ್ ನಿಂದ ಮೀಲಾದುನ್ನಬಿ ಕಾರ್ಯಕ್ರಮ

Update: 2024-09-16 05:36 GMT

ಮುಲ್ಕಿ: ಇಲ್ಲಿನ ಶಾಫಿ ಜುಮಾ ಮಸ್ಜಿದ್ ಜಮಾಅತ್ ವತಿಯಿಂದ ಮೀಲಾದುನ್ನಬಿ ಹಾಗೂ ಸಾಧಕರಿಗೆ ಗೌರವ ಕಾರ್ಯಕ್ರಮ ಮಸೀದಿ ಆವರಣದಲ್ಲಿ ನಡೆಯಿತು.

ಖತೀಬ್ ಉಸ್ಮಾನುಲ್ ಫೈಝಿ ತೊಡಾರ್ ದುಆ ನೆರವೇರಿಸಿದರು

ಕಾರ್ಯಕ್ರಮದ ಉದ್ಘಾಟಿಸಿ ಸಮಸ್ತ ಕೇಂದ್ರ ಮುಶಾವರ ಸದಸ್ಯ ಅಲ್ಹಾಜ್ ಬಂಬ್ರಾಣ ಬಿ.ಕೆ.ಅಬ್ದುಲ್ ಖಾದರ್ ಮುಸ್ಲಿಯಾರ್ ಮಾತನಾಡಿ, ಯುವ ಜನಾಂಗ ಸಮಾಜದಲ್ಲಿ ಉತ್ತಮ ಶಿಕ್ಷಣ ಪಡೆದು ಸರ್ವ ಜನಾಂಗದವರ ಜೊತೆ ಉತ್ತಮ ಬಾಂಧವ್ಯದಿಂದ ಬಾಳಿದರೆ ಸಾಧಕರಾಗಲು ಸಾಧ್ಯ. ಎಂದರು

ಮುಲ್ಕಿ ಶಾಫಿ ಜುಮಾ ಮಸ್ಜಿದ್ ಜಮಾಅತ್ ಅಧ್ಯಕ್ಷ ಸುಹೈಲ್ ಹೈದರ್ ಎಂ.ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮುಲ್ಕಿ ನಪಂ ಸದಸ್ಯ ಪುತ್ತುಬಾವ, ಉದ್ಯಮಿ ರಿಝ್ವಾನ್ ಬಪ್ಪನಾಡು, ಕಾರ್ನಾಡ್ ಮಸೀದಿಯ ಖತೀಬ್ ಇಸ್ಮಾಯೀಲ್ ದಾರಿಮಿ, ಮುಲ್ಕಿ ಮಸೀದಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಫಾರೂಕ್, ಕೋಶಾಧಿಕಾರಿ ಇಕ್ಬಾಲ್ ಅಹ್ಮದ್, ಕಾರ್ಯದರ್ಶಿ ರಝಾಕ್, ಮಾಜಿ ಅಧ್ಯಕ್ಷ ಲಿಯಾಕತ್ ಅಲಿ, ನುಸ್ರತುಲ್ ಮಸಾಕೀನ್ ಅಧ್ಯಕ್ಷ ಅಮಾನುಲ್ಲಾ, ಕಾರ್ನಾಡ್ ಮುಸ್ಲಿಮ್ ಯಂಗ್ ಮೆನ್ಸ್ ಅಸೋಸಿಯೇಶನ್ ಅಧ್ಯಕ್ಷ ಅಲ್ಫಾಝ್ ಮತ್ತಿತರರು ಉಪಸ್ಥಿತರಿದ್ದರು

ಶಾಸಕ ಉಮಾನಾಥ ಕೋಟ್ಯಾನ್, ಮುಲ್ಕಿ ನಪಂ ಅಧ್ಯಕ್ಷ ಸತೀಶ್ ಅಂಚನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು

ಕೋಶಾಧಿಕಾರಿ ಇಕ್ಬಾಲ್ ಅಹ್ಮದ್ ಸ್ವಾಗತಿಸಿದರು ಇಸ್ಮಾಯೀಲ್ ಕಾರ್ಯಕ್ರಮ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ಸಾಧಕರ ನೆಲೆಯಲ್ಲಿ ಹಾಜಿ ಬಂಬ್ರಾಣ ಉಸ್ತಾದ್, ಮುಲ್ಕಿ ನಪಂ ಸದಸ್ಯ ಪುತ್ತುಬಾವ, ಖತೀಬ್ ಉಸ್ಮಾನುಲ್ ಫೈಝಿ ತೊಡಾರ್ ರನ್ನು ಗೌರವಿಸಲಾಯಿತು.

ಮೀಲಾದ್ ಫೆಸ್ಟ್ ವಿಜೇತ ದರ್ಸ್ ಮತ್ತು ಮದ್ರಸ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News