ಮಂಗಳೂರು: ಸಾಹಿತಿ ಮನೊರಮಾ ಭಟ್‌ಗೆ ಶ್ರದ್ಧಾಂಜಲಿ

Update: 2024-09-23 13:34 GMT

ಮಂಗಳೂರು: ಹಿರಿಯ ಸಾಹಿತಿ ಮನೊರಮಾ ಎಂ.ಭಟ್ ಅವರು ಸರಳ ಹಾಗೂ ಸುಂದರವಾದ ನಿರೂಪಣೆ ಯೊಂದಿಗೆ ಔಚಿತ್ಯಪೂರ್ಣ ಕಥೆಗಳನ್ನು ರಚಿಸುವ ಮೂಲಕ ಸಾಹಿತ್ಯ ರಂಗವನ್ನು ಪ್ರವೇಶಿಸಿ ಮಹಿಳಾ ಸಾಹಿತಿಯಾಗಿ ಪ್ರಸಿದ್ದರಾಗಿದ್ದರು. ಪತಿಯ ಅಗಲಿಕೆಯ ಬಳಿಕ ಏಕಾಂಗಿ ಜೀವನವನ್ನು ನಿರ್ವಹಿಸಿ ಕೊನೆದಿನಗಳಲ್ಲಿ ಆಶ್ರಮವಾಸಿಯಾ ಗಿದ್ದರು, ಹೊಸಹಾದಿ ನಿರ್ಧಾರ ಇತ್ಯಾದಿ ಅನೇಕ ಉತ್ತಮವಾದ ಕೃತಿಗಳನ್ನು ರಚಿಸಿ ಹೆಸರು ಗಳಿಸಿದ್ದರು. ಮಂಗಳೂರು ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಅವರು ಜಿಲ್ಲಾ ರಾಜ್ಯೊತ್ಸವ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿ ಪುರಸ್ಕಾರ ಗಳಿಗೆ ಭಾಜನರಾಗಿದ್ದರು ಎಂದು ಕಲ್ಕೂರಾ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು.

ನಗರದ ಕಲ್ಕೂರ ಪ್ರತಿಷ್ಠಾನದ ಕಚೇರಿಯಲ್ಲಿ ಸೋಮವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಡಾ.ಹರಿಕೃಷ್ಣ ಪುನರೂರು, ಪ್ರೊ.ಜಿ.ಕೆ.ಭಟ್ ಸೇರಾಜೆ, ಹಿರಿಯ ಯಕ್ಷಗಾನ ಪ್ರಸಂಗಕರ್ತ ಪೊಳಲಿ ನಿತ್ಯಾನಂದ ಕಾರಂತ, ಗಣೇಶ್ ಚೇತನ್ ಮುಳಿಯ, ಕವಿ ಮುಹಮದ್ ಬಡ್ಡೂರು, ಹೆಚ್.ಜನಾರ್ದನ ಹಂದೆ, ನಿವೃತ್ತ ಅಧ್ಯಾಪಕಿ ರತ್ನಾವತಿ ಬೈಕಾಡಿ, ಸಾಮಾಜಿಕ ಕಾರ್ಯಕರ್ತೆ ವಿಜಯಲಕ್ಷ್ಮಿ ಬಿ. ಶೆಟ್ಟಿ, ಸುಧಾಕರ ರಾವ್ ಪೇಜಾವರ ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News