ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಓರಿಯೆಂಟೇಷನ್ ಕಾರ್ಯಕ್ರಮ

Update: 2024-09-23 16:25 GMT

ಮಂಗಳೂರು: ‘ನಾಳಿನ ನಾಯಕರ ಪೋಷಣೆ’ ಎಂಬ ವಿಷಯದ ಕುರಿತು ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಓರಿಯೆಂಟೇಷನ್ ಮತ್ತು ಇಂಡಕ್ಷನ್ ಕಾರ್ಯಕ್ರಮ ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಟೆಕ್ನಾಲಜಿಯ(ಬಿಐಟಿ) ಮಂಗಳೂರು ಕ್ಯಾಂಪಸ್‌ನಲ್ಲಿ ನಡೆಯಿತು.

ಬ್ಯಾರೀಸ್ ಗ್ರೂಪ್‌ನ ಮೊಹಮ್ಮದ್ ಅಲಿ ರೂಮಿ ಸಂಪನ್ಮೂಲ ವ್ಯಕ್ತಿಯಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಬಿಐಟಿಯ ಯಶಸ್ಸು ಮನಸ್ಸಿನ ಸ್ಪಷ್ಟತೆ ಮತ್ತು ಹೃದಯದ ಶುದ್ಧತೆಯ ತತ್ವಗಳ ಮೇಲೆ ಅವಲಂಬಿತವಾಗಿದೆ ಎಂದು ಅವರು ಹೇಳಿದರು. ನಮ್ಮ ಗುರಿ ಒಟ್ಟಾರೆ ವ್ಯಕ್ತಿತ್ವ ಅಭಿವೃದ್ಧಿ ಮತ್ತು ವಿದ್ಯಾರ್ಥಿಗಳಲ್ಲಿ ನಾಯಕತ್ವ ಮತ್ತು ತಾಂತ್ರಿಕ ಕೌಶಲ್ಯಗಳನ್ನು ಹೆಚ್ಚಿಸುವುದು, ಮುಂದಿನ ನಾಲ್ಕು ವರ್ಷಗಳಲ್ಲಿ ಜೀವನದ ಉದ್ದೇಶವನ್ನು ವ್ಯಾಖ್ಯಾನಿಸಲು ಅರ್ಥಪೂರ್ಣ ಆತ್ಮಾವಲೋಕನದಲ್ಲಿ ತೊಡಗುವುದು ಆಗಿದೆ ಎಂದು ಅವರು ವಿವರಿಸಿದರು.

ವಿದ್ಯಾರ್ಥಿಗಳಲ್ಲಿ ನಿಯಮಿತ ಹಾಜರಾತಿ, ಸಮಗ್ರ ಅಭಿವೃದ್ಧಿ, ಪರಿಣಾಮಕಾರಿ ಸಂವಹನ ಕೌಶಲ್ಯ ಮತ್ತು ಒಟ್ಟಾರೆ ವ್ಯಕ್ತಿತ್ವ ವಿಕಸನದ ಮಹತ್ವವನ್ನು ರೂಮಿ ವಿವರಿಸಿದರು. ಬಿಐಟಿ ಪ್ರಾಂಶುಪಾಲ ಡಾ.ಎಸ್.ಐ.ಮಂಜುರ್ ಬಾಷಾ, ಬೋಧಕರಾದ ಡಾ.ಅಮೀರ್ ಪಾಷಾ ಮತ್ತು ಸಿಬ್ಬಂದಿ ವರ್ಗ ಅಧಿವೇಶನದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News