ಯೆನೆಪೋಯ ವಿವಿಯಲ್ಲಿ ಅಂತರ್‌ರಾಷ್ಟ್ರೀಯ ಶಾಂತಿ ದಿನಾಚರಣೆ

Update: 2024-09-23 16:44 GMT

ಮಂಗಳೂರು: ಯುನೈಟೆಡ್ ನೇಷನ್ಸ್ ಅಕಾಡೆಮಿಕ್ ಇಂಪ್ಯಾಕ್ಟ್ (ಯುಎನ್‌ಎಐ) ಸಂಸ್ಥೆಯ ಸದಸ್ಯತ್ವ ಪಡೆದಿರುವ ಯೆನೆಪೊಯ ಪರಿಗಣಿತ ವಿವಿ ಯ ಸೆಂಟರ್ ಫಾರ್ ಎಥಿಕ್ಸ್ (ಸಿಎಫ್‌ಇ) ಇದರ ವತಿಯಿಂದ ಸೆ.20ರಂದು ಅಂತರ್‌ ರಾಷ್ಟ್ರೀಯ ಶಾಂತಿ ದಿನವನ್ನು ಆಚರಿಸಲಾಯಿತು.

ಯೆನೆಪೊಯ ವಿವಿ ಕುಲಪತಿ ಡಾ. ವೈ. ಅಬ್ದುಲ್ಲ ಕುಂಞಿ ಕಾರ್ಯಕ್ರಮ ಉದ್ಘಾಟಿಸಿದರು. ಸಮಾಜದಲ್ಲಿ ಶಾಂತಿ, ಸಾಮರಸ್ಯವನ್ನು ಬೆಳೆಸುವಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಪಾತ್ರವನ್ನು ಅವರು ಒತ್ತಿ ಹೇಳಿದರು.

ವಿವಿಯ ಉಪಪ್ರಾಂಶುಪಾಲ ಡಾ.ಪ್ರಕಾಶ್ ಸಲ್ಡಾನ್ಹಾ ಮತ್ತು ವೈಎಂಸಿಯ ಡೀನ್ ಡಾ.ಅಭಯ್ ನಿರ್ಗುಡೆ ಅವರು ಶಿಕ್ಷಣದಲ್ಲಿ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಅಳವಡಿಸಿಕೊಳ್ಳುವ ಅಗತ್ಯತೆಯ ಬಗ್ಗೆ ಮಾತನಾಡಿದರು.

ಸಿಎಫ್‌ಇ ನಿರ್ದೇಶಕಿ ಡಾ.ವೀಣಾ ವಾಸ್ವಾನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಮುಹಮ್ಮದ್ ನಾಸಿರ್ ಅಹ್ಮದ್ ಸ್ವಾಗತಿಸಿದರು ಸಿಎಫ್‌ಇಯ ಟ್ಯೂಟರ್ ಆರತಿ ಹಲವಾಯಿ ವಂದಿಸಿದರು.

ಬಳಿಕ ನಡೆದ ಮೊದಲ ಅಧಿವೇಶನದಲ್ಲಿ ಲೆಫ್ಟಿನೆಂಟ್ ಕರ್ನಲ್ (ಡಾ) ನೀಲಂಪುತ್ರನ್ (ನಿವೃತ್ತ), ವೈಎಂಸಿ ನೇತ್ರ ವಿಜ್ಞಾನದ ಮಜಿ ಎಚ್‌ಒಡಿ, ಲೆಫ್ಟಿನೆಂಟ್ ಕರ್ನಲ್ (ಡಾ) ಸಿಂಥಿಯಾ ಅರುಣಾಚಲಂ ಮಾತನಾಡಿದರು.

ಎರಡನೇ ಅಧಿವೇಶನದ ಸಿಎಫ್‌ಇ ನಿರ್ದೇಶಕಿ ಡಾ.ವಿನಾ ವಾಸ್ವಾನಿ ‘‘ಅಂಡರ್‌ಸ್ಟ್ಯಾಂಡಿಂಗ್ ಇಂಟರ್‌ಜೆನೆರೇಶನಲ್ ಜಸ್ಟಿಸ್’’ ಕುರಿತು ಉಪನ್ಯಾಸ ನೀಡಿದರು.

ಸ್ವಿಟ್ಜರ್ಲೆಂಡ್‌ನ ಇಂಟರ್‌ನ್ಯಾಷನಲ್ ಕಮಿಟಿ ಫಾರ್ ರೆಡ್‌ಕ್ರಾಸ್ ಫೋರೆನ್ಸಿಕ್ ವಿಭಾಗದ ಮಾಜಿ ಮುಖ್ಯಸ್ಥ ಡಾ.ಓರಾನ್ ಫಿನೆಗನ್ ಅವರು ಶಾಂತಿ ನಿರ್ಮಾಣ ಮತ್ತು ಸಮನ್ವಯತೆಯಲ್ಲಿ ಫೋರೆನ್ಸಿಕ್ಸ್ ಪಾತ್ರ ಕುರಿತು ಮಾತನಾಡಿದರು.

ವೈದ್ಯಕೀಯ, ದಂತ ವೈದ್ಯಕೀಯ, ಹೋಮಿಯೋಪತಿ, ನರ್ಸಿಂಗ್, ಫಿಸಿಯೋಥೆರಪಿ, ಫಾರ್ಮಸಿ ಮತ್ತು ಫೋರೆನ್ಸಿಕ್ ವಿಭಾಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಿಎಎಫ್‌ಇ ಇಫೆಯಾನಿಚುಕ್ವು ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News