ಸುಳ್ಯ| ಕಾರಿನೊಳಗೆ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

Update: 2024-09-23 17:21 GMT

ಸುಳ್ಯ: ಕಳೆದ ಕೆಲವು ದಿನಗಳಿಂದ ಕೆಟ್ಟು ನಿಲ್ಲಿಸಿದ್ದ ಓಮ್ನಿ ಕಾರಿನೊಳಗೆ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾದ ಘಟನೆ ಸುಳ್ಯದ ಪರಿವಾರಕಾನ ಬಳಿ ನಡೆದಿದೆ.

ಪರಿವಾರಕಾನದ ಸ್ನೇಹ ಶಾಲೆಗೆ ಹೋಗುವ ರಸ್ತೆಯ ಬದಿ ಸ್ವಲ್ಪ ಸಮಯದಿಂದ ಈ ಓಮ್ನಿ ಕಾರು ಕೆಟ್ಟು ನಿಂತಿತ್ತು. ಸೋಮವಾರ ಸಂಜೆ ಕೊಳೆತ ವಾಸನೆ ಬರುತ್ತಿದ್ದ ವೇಳೆ ಸ್ಥಳೀಯರು ಪರಿಶೀಲನೆ ನಡೆಸಿದ್ದಾಗ ಸುಮಾರು 45 ವರ್ಷ ಪ್ರಾಯದ ವ್ಯಕ್ತಿಯ ಮೃತದೇಹ ಓಮ್ನಿ ವಾಹನದ ಒಳಗೆ ಪತ್ತೆಯಾಗಿದೆ.

ಸ್ಥಳಕ್ಕೆ ಬಂದ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News