ದೆಹಲಿ ತುಳುಸಿರಿಯ ಅಧ್ಯಕ್ಷರಾಗಿ ವಸಂತ ಶೆಟ್ಟಿ ಬೆಳ್ಳಾರೆ ಪುನರಾಯ್ಕೆ

Update: 2024-12-27 13:30 GMT

ಮಂಗಳೂರು, ಡಿ.27: ಹಲವು ವರ್ಷಗಳಿಂದ ದೆಹಲಿಯಲ್ಲಿ ತುಳುನಾಡಿನ ಮಣ್ಣಿನ ಸೊಗಡನ್ನು ಪಸರಿಸುತ್ತಿರುವ ದೆಹಲಿ ತುಳುಸಿರಿಯ ಅಧ್ಯಕ್ಷರಾಗಿ ದೆಹಲಿ ಕರ್ನಾಟಕ ಸಂಘ, ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ಸಾಂಸ್ಕೃತಿಕ ಸಂಘಟಕ ವಸಂತ ಶೆಟ್ಟಿ ಬೆಳ್ಳಾರೆ ಪುನರಾಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಬಿ.ಪ್ರದೀಪ್, ಮಾಲಿನಿ ಪ್ರಹ್ಲಾದ್, ಕಾರ್ಯದರ್ಶಿಯಾಗಿ ಅರವಿಂದ ಬಿಜೈ, ಜೊತೆ ಕಾರ್ಯದರ್ಶಿಯಾಗಿ ಪ್ರಕಾಶ್ ಶೆಟ್ಟಿ ಉಳೆಪಾಡಿ, ಕೃಷ್ಣರಾಜ್ ಕೆ.ಎನ್., ಖಜಾಂಚಿಯಾಗಿ ವಿಖ್ಯಾತ್ ಸಿ. ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಲಕ್ಷ್ಮಣ್ ನಾಯ್ಕ್, ಡ್ಯಾರೆಲ್ ಜೆಸಿಕ ಫೆರ್ನಾಂಡಿಸ್, ಹರ್ಷಿತಾ ಎಸ್.ಕೆ., ಪ್ರಶಾಂತ್ ಕುಮಾರ್, ಮೆಲ್ವಿನ್ ಗ್ಯಾಬ್ರೆಲ್ ಲೋಬೊ, ಕಾರ್ತಿಕ್ ರೈ, ರವಿ, ಯು.ಎ. ಶರೀಫ್, ರಾಘವೇಂದ್ರ ನಾಯ್ಕ, ನಾಗರಾಜ್ ಎಂ., ಶುಭ ದೇಪ್ರಸಾದ್, ನಿರ್ಮಲಾ ನಾಗೇಶ್, ಅಶ್ವಿತಾ ಮಿಥೇಶ್ ಶೆಟ್ಟಿ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News