ಜ.4ರಂದು ವಚನ ಸಾಹಿತ್ಯ ಸಮ್ಮೇಳನದಲ್ಲಿ ಸಾಧಕರಿಗೆ ಕಾಯಕ ರತ್ನ ಪ್ರಶಸ್ತಿ ಪ್ರದಾನ

Update: 2024-12-27 15:23 GMT

ಮಂಗಳೂರು: ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜ.4ರಂದು ಜರಗುವ ರಾಜ್ಯಮಟ್ಟದ ವಚನ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಕಾಯಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ಡಾ.ಹರಿಕೃಷ್ಣ ಪುನರೂರು (ಸಮಾಜ ಸೇವೆ), ಡಾ.ಮೊಹನ ಆಳ್ವ (ಶಿಕ್ಷಣ/ಸಾಂಸ್ಕೃತಿಕ), ಮಣಿಕಾಂತ ಕದ್ರಿ (ಸಂಗೀತ), ಡಾ. ಶಾಲಿನಿ ನಾಲ್ವಾಡ್(ವೈದ್ಯಕೀಯ), ಡಾ.ಗುರುಕಿಣ್ (ಸಂಗೀತ), ಮಲ್ಲಮ್ಮ ಯಾಳವಾರ (ಸಹಕಾರಿ ಬ್ಯಾಂಕ್), ರಾಜೇಶ್ವರಿ ಜಮಖಂಡಿ (ಸಮಾಜ ಸೇವೆ), ಕೆ.ಯುವರಾಜ್ ಶಿವಮೊಗ್ಗ (ಜನಪದ ಗಾಯಕ/ಸಂಗೀತ ನಿರ್ದೇಶಕ),ಡಾ.ದೇವದಾಸ್ ಕಾಪಿಕಾಡ್(ತುಳು ಸಿನಿಮಾ/ನಾಟಕರಂಗ), ಜನಾರ್ದನ ಬಿಜೊಡಿ (ದೈವ ನರ್ತನ), ಮುಹಮ್ಮದ್ ಯಾಸಿರ್ (ಪುರಾತನ ವಸ್ತುಸಂಗ್ರಹ), ವಾಲ್ಟರ್ ನಂದಳಿಕೆ (ಪತ್ರಿಕೊದ್ಯಮ) ಹಾಗೂ ಬೆಂಗಳೂರಿನ ಜನಸ್ನೇಹಿ ಚಾರಿಟೇಬಲ್ ಟ್ರಸ್ಟ್ ಮತ್ತು ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಸಂಘಟನೆಗಳನ್ನು ಗೌರವಿಸಲಾಗುವುದು.

ಸುತ್ತೂರು ಜಗದ್ಗುರು ಡಾ.ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮಿ, ಪೇಜಾವರ ಮಠಾಧಿಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮತ್ತು ರುದ್ರಮುನಿ ಮಹಾಸ್ವಾಮಿಗಳ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಹಾಗೂ ಅಕ್ಕ ಮಹಾದೇವಿ ವೀರಶೈವ ಮಹಿಳಾ ಸಂಘದ ಅಧ್ಯಕ್ಷೆ ಸುಮಾ ಎ.ಮಾನ್ವಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News