ಕವಿಗಳು ದೇಶದ ಕಾವಲುಗಾರರು: ಭೀಮರಾವ್ ವಾಷ್ಠರ್

Update: 2024-12-27 15:58 GMT

ಪುತ್ತೂರ: ಕಣ್ಣಾರೆ ಕಂಡ ವಿಷಯಗಳಿಗೆ ಮತ್ತು ಭಾವನೆಗಳಿಗೆ ಅಕ್ಷರ ರೂಪ ಕೊಡುವ ಮೂಲಕ ಕವಿಗಳು ಕ್ರಾಂತಿಕಾರಿ ಕವನಗಳನ್ನು ರಚಿಸಿ ಸಮಾಜವನ್ನು ಒಳಿತಿನ ಹಾದಿಗೆ ಸೇರಿಸುವ ದೇಶದ ಕಾವಲುಗಾರರಾಗಿರುವರು ಎಂದು ಸಾಹಿತಿ ಹೆಚ್. ಭೀಮರಾವ್ ವಾಷ್ಠರ್ ಸುಳ್ಯ ಹೇಳಿದ್ದಾರೆ.

ಕರ್ನಾಟಕ ಭಾವೈಕ್ಯ ಪರಿಷತ್ ವತಿಯಿಂದ ಮಾದಕತೆ ಮಾರಣಾಂತಿಕ ಪುಸ್ತಕ ಬಿಡುಗಡೆ ಅಂಗವಾಗಿ ಪುತ್ತೂರು ಸುದಾನ ಮೈದಾನದಲ್ಲಿ ಗುರುವಾರ ನಡೆದ ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಸಾಹಿತ್ಯಕ್ಕೆ ಜನರ ಮನಸ್ಸನ್ನು ಒಗ್ಗೂಡಿಸುವ ಅಭೂತಪೂರ್ವ ಶಕ್ತಿಯಿದೆ. ಸಾಹಿತ್ಯವು ನಿರಂತರ ಹರಿಯುವ ತೊರೆಯಾ ಗಿದ್ದು ಇಡೀ ಜಗತ್ತು ಈ ಶುದ್ಧ ತೊರೆಯನ್ನು ಪರಿವರ್ತನೆಗಾಗಿ ಬಳಸಿ ಅಮೂಲಾಗ್ರ ಬದಲಾವಣೆ ತರಬಹುದು ಎಂದು ಭೀಮರಾವ್ ವಾಷ್ಠರ್ ಹೇಳಿದರು.

ಹವ್ಯಾಸಿ ಪತ್ರಕರ್ತ ಕೆ.ಎ.ಅಬ್ದುಲ್ ಅಝೀಝ್ ಪುಣಚ ಕವಿಗೋಷ್ಠಿಯನ್ನು ಉದ್ಘಾಟಿಸಿದರು. ಲೇಖಕ, ನೂರೇ ಅಜ್ಮೀರ್ ಕಾರ್ಯಕ್ರಮದ ಆಯೋಜಕ, ಕರ್ನಾಟಕ ಭಾವೈಕ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಇಖ್ಬಾಲ್ ಬಾಳಿಲ, ಪುತ್ತೂರು ಠಾಣೆಯ ಉಪನಿರೀಕ್ಷಕ ಆಂಜನೇಯ ರೆಡ್ಡಿ, ಪುಸ್ತಕ ಬಿಡುಗಡೆ ಸಮಿತಿತ ಅಧ್ಯಕ್ಷ ಅಶ್ರಫ್ ಶಾ ಮಾಂತೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕವಿಗಳಾದ ಮನ್ಸೂರ್ ಮೂಲ್ಕಿ, ನಾರಾಯಣ ರೈ ಕುಕ್ಕುವಳ್ಳಿ, ಎ.ಅಬೂಬಕರ್ ಅನಿಲಕಟ್ಟೆ, ಡಾ. ಸುರೇಶ ನೆಗಳಗುಳಿ, ಎಂ.ಪಿ.ಬಶೀರ್ ಅಹ್ಮದ್, ಅಶ್ರಫ್ ಅಪೋಲೋ, ನಾರಾಯಣ ಕುಂಬ್ರ, ಅಬ್ದುಲ್ ಸಮದ್ ಬಾವ ಪುತ್ತೂರು, ಸಲೀಂ ಮಾಣಿ, ಎನ್.ಎಂ.ಹನೀಫ್ ನಂದರಬೆಟ್ಟು, ಝುನೈಫ್ ಕೋಲ್ಪೆ, ಶಂಶೀರ್ ಬುಡೋಳಿ, ಎಂ.ಎ.ಮುಸ್ತಫಾ ಬೆಳ್ಳಾರೆ ಕವನ ವಾಚಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News