ಕ್ಯಾ. ಬ್ರಿಜೇಶ್ ಚೌಟ ಸಾರಥ್ಯದ ಮಂಗಳೂರು ಕಂಬಳಕ್ಕೆ ಚಾಲನೆ
Update: 2024-12-28 06:36 GMT
ಮಂಗಳೂರು,ಡಿ.28; ಕ್ಯಾ. ಬ್ರಿಜೇಶ್ ಚೌಟ ಸಾರಥ್ಯದಲ್ಲಿ ನಡೆಯುವ 8 ನೇ ವರ್ಷದ ರಾಮ ಲಕ್ಷ್ಮಣ ಕಂಬಳಕ್ಕೆ ಕ್ಯಾಪ್ಟನ್ ಪ್ರಾಂಜಲ್ ಅವರ ತಂದೆ ಎಂಆರ್ ಪಿಎಲ್ ನ ಮಾಜಿ ಆಡಳಿತ ನಿರ್ದೇಶಕ ವೆಂಕಟೇಶ್ ಅವರು ಶನಿವಾರ ನಗರದ ಗೋಲ್ಡ್ ಫಿಂಚ್ ಸಿಟಿಯ ರಾಮ ಲಕ್ಷ್ಮಣ ಜೋಡು ಕರೆಯಲ್ಲಿ ಚಾಲನೆ ನೀಡಿದರು.
ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್ ಧರ್ಮ, ಶ್ರೀ ಬ್ರಹ್ಮಬೈದರ್ಕಳ ಗರೋಡಿಯ ಮೋಕ್ತೆಸರ ಚಿತ್ತರಂಜನ ಗರೋಡಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ವಜ್ರದೇಹಿ ಮಠದ ರಾಜಶೇಖ ರಾನಂದ ಸ್ವಾಮೀಜಿ, ಶ್ರೀ ರಾಮಕೃಷ್ಣ ಮಠದ ಚಿದಂಬರನಾಂದ ಸ್ವಾಮೀಜಿ, ಬ್ರಿಗೇಡಿಯರ್ ಐ.ಎಂ ರೈ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಪ್ರದೀಪ್ ಕುಮಾರ್ ಕಲ್ಕೂರ, ಕಟೀಲ್ ಅನಂತ ಪದ್ಮನಾಭ ಆಸ್ರಣ್ಣ, ಜಯರಾಮ್ ಶೆಟ್ಟಿ, ಮನಪಾ ಸದಸ್ಯ ಕಿರಣ್, ನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಅನಿಲ್ ಕುಮಾರ್, ಸಂಜಯ ಪ್ರಭು, ಮಾಜಿ ಮೇಯರ್ ಕವಿತಾ ಸನಿಲ್ ಹಾಗೂ ಕಂಬಳ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.