SKSBV ದಕ್ಷಿಣ ಕನ್ನಡ ಜಿಲ್ಲೆ ಲೀಡರ್ಸ್ ಕ್ಯಾಂಪ್ ಹಾಗೂ ಜಿಲ್ಲಾ ಸಮಿತಿ ರಚನೆ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಜಂ ಇಯ್ಯತುಲ್ ಮುಅಲ್ಲಿಮೀನ್ ಇದರ ವಿದ್ಯಾರ್ಥಿ ಸಂಘಟನೆಯಾದ ಸಮಸ್ತ ಕೇರಳ ಸುನ್ನಿ ಬಾಲವೇದಿ (SKSBV ) ಯ ಲೀಡರ್ಸ್ ಕ್ಯಾಂಪ್ ಮತ್ತು ಜಿಲ್ಲಾ ಸಮಿತಿ ರಚನೆಯು ಮಾಣಿ ಸಮೀಪದ ಬುಡೋಳಿ ಸಮಸ್ತ ಮುಅಲ್ಲಿಂ ಸೆಂಟರ್ನಲ್ಲಿ SKSBV ಜಿಲ್ಲಾ ಚೇರ್ಮನ್ ಪಿ.ಎಂ ಯಹ್ಯಾ ಮದನಿ ಮರ್ಧಾಳ ರವರ ಸಭಾಧ್ಯಕ್ಷ ತೆಯಲ್ಲಿ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾ SKSBV ಕನ್ವೀನರ್ ಕೆ.ಎಚ್ ಅಶ್ರಫ್ ಹನೀಫಿ ಕರಾಯ ಸ್ವಾಗತಿಸಿದರು. ಸ್ಥಳೀಯ ಖತೀಬ್ ಅಬೂಬಕ್ಕರ್ ಸಅದಿ ಸಭೆಯನ್ನು ಉದ್ಘಾಟಿಸಿದರು. SKJMCC ಮುದರ್ರಿಬ್ ಅದ್ನಾನ್ ಅನ್ಸಾರಿ ಹಾಗೂ ಹಾಶಿಂ ರಹ್ಮಾನಿ ತರಗತಿ ನಡೆಸಿಕೊಟ್ಟರು. ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಕಾರ್ಯದರ್ಶಿ ಮುಹಮ್ಮದ್ ನವವಿ ಮುಂಡೋಳೆ ಸಮಿತಿ ರಚನೆಗೆ ನೇತೃತ್ವ ನೀಡಿದರು.
2024 /25 ನೇ ಸಾಲಿಗೆ ನೂತನ ಸಮಿತಿಯನ್ನು ರಚಿಸಲಾಯಿತು. SKSBV ನೂತನ ಸಾಲಿನ ಚೇರ್ಮನಾಗಿ ಪಿ.ಎಂ ಯಹ್ಯಾ ಮದನಿ, ಬಾಂಬಿಲ ರೇಂಜ್ ವೈಸ್ ಚೇರ್ಮನಾಗಿ ಐ ಕೆ ಇಸ್ಹಾಕ್ ಫೈಝಿ ದೇರಳಕಟ್ಟೆ ರೇಂಜ್, ಹಾರಿಸ್ ಫೈಝಿ ಬೆಳ್ತಂಗಡಿ ರೇಂಜ್, ಜಿಲ್ಲಾ ಕನ್ವೀನರಾಗಿ ಕೆ.ಎಚ್.ಅಶ್ರಫ್ ಹನೀಫಿ ಕರಾಯ, ವೈಸ್ ಕನ್ವೀನರಾಗಿ ಅಲ್ತಾಫ್ ಮೌಲವಿ ಮೂಡಬಿದ್ರೆ ರೇಂಜ್, ಹಫೀಝ್ ಅನ್ಸಾರಿ ಸುರತ್ಕಲ್ ರೇಂಜ್, ಮೀಡಿಯಾ ವಿಂಗ್, ಶರೀಫ್ ಫೈಝಿ ಮಅಬರಿ ಉಡುಪಿ ರೇಂಜ್ , ಅನ್ಸಾರ್ ಅನ್ಸಾರಿ ಸುರತ್ಕಲ್ ರೇಂಜ್, ಮುಯೀನುದ್ದೀನ್ ಫೈಝಿ ಸುಳ್ಯ ರೇಂಜ್.
ಅಧ್ಯಕ್ಷರಾಗಿ ಹಾಶಿಂ ನಿಹಾಲ್ ಮಿತ್ತಬೈಲು ರೇಂಜ್, ಉಪಾಧ್ಯಕ್ಷರಾಗಿ ಶಾಹಿದ್ ಯೂಸುಫ್ ಕಡಬ ರೇಂಜ್, ಮುಹಮ್ಮದ್ ಹಫೀಫ್ ಮಂಗಳೂರು ವೆಸ್ಟ್ ರೇಂಜ್, ಮುಹಮ್ಮದ್ ಸವಾದ್ ಮಾಡನ್ನೂರು ರೇಂಜ್ ಆಯ್ಕೆಯಾದರು.
ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಶಾಹಿಂ ಸೂರಲ್ಪಾಡಿ ರೇಂಜ್, ವರ್ಕಿಂಗ್ ಕಾರ್ಯದರ್ಶಿಯಾಗಿ ಮುಹಮ್ಮದ್ ಮುಫೀಝ್ ಗುರುಪುರ ರೇಂಜ್, ಜೊತೆಕಾರ್ಯದರ್ಶಿಗಳಾಗಿ ಮುಹಮ್ಮದ್ ಅಸ್ಲಂ ಆತೂರು ರೇಂಜ್, ಮುಹಮ್ಮದ್ ಸಹಾದ್ ಸುಳ್ಯ ರೇಂಜ್, ಮುಹಮ್ಮದ್ ನಿಹಾಲ್ ಮಾಣಿ ರೇಂಜ್, ಕೋಶಾಧಿಕಾರಿಯಾಗಿ ಮುಹಮ್ಮದ್ ತಮೀಮ್ ಪುತ್ತೂರು ರೇಂಜ್, ಅದಬ್ ಚೇರ್ಮನಾಗಿ ಝಿಯಾದ್ ಬಾಂಬಿಲ ರೇಂಜ್, ಕನ್ವೀನರಾಗಿ ಅಹ್ಮದ್ ಝೈನ್ ದೇರಳಕಟ್ಟೆ ರೇಂಜ್, ಕಿದ್ಮ ಚೇರ್ಮನಾಗಿ ಸಲ್ಮಾನ್ ಫಾರಿಸ್ ಬೆಳ್ತಂಗಡಿ ರೇಂಜ್, ಕನ್ವೀನರ್ ಅಹ್ಮದ್ ಇಶಾಂ ಉಪ್ಪಿನಂಗಡಿ ರೇಂಜ್, ಅಲಿಫ್ ಚೇರ್ಮನಾಗಿ ಇಸ್ಮಾಯಿಲ್ ರಾಶಿಂ ಸಾಲೆತ್ತೂರು ರೇಂಜ್, ಕನ್ವೀನರ್ ಮುಹಮ್ಮದ್ ಝವೀರ್ ಬಂಟ್ವಾಳ ರೇಂಜ್, ಟೆಕ್ಅಡ್ಮಿನ್ ಚೇರ್ಮೇನ್ ಮುಹಮ್ಮದ್ ಅನಸ್ ಉಡುಪಿ ರೇಂಜ್, ಕನ್ವೀನರ್ ಮುಹಮ್ಮದ್ ಶಾನ್ ಪರಂಗಿಪೇಟೆ ರೇಂಜ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುಹಮ್ಮದ್ ಅಸದುಲ್ಲಾ ಅಡ್ಯಾರ್ ಕಣ್ಣೂರು ರೇಂಜ್, ಇಸ್ಮಾಯಿಲ್ ಸುಹೈಲ್ ಮೂಡಬಿದ್ರೆ ರೇಂಜ್, ಝುಹೈಬ್ ಹಸನ್ ಸುರತ್ಕಲ್ ರೇಂಜ್, ಮುಹಮ್ಮದ್ ಸಿಹಾನ್ ವಿಟ್ಲ ರೇಂಜ್, ಇಮ್ತಿಯಾಝ್ ಕುಂಬ್ರ ರೇಂಜ್, ಸೈಫ್ ಕೂರ್ನಡ್ಕ ರೇಂಜ್, ಮುಹಮ್ಮದ್ ಹನೀನ್ ಕಲ್ಲಡ್ಕ ರೇಂಜ್, ಸಿನಾನ್ ಮಂಗಳೂರು ರೇಂಜ್ ಇವರನ್ನು ರೇಂಜ್ ಗಳ ಚೇರ್ಮೇನ್ ಕನ್ವೀನರ್ಗಳ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಸದಸ್ಯರಾದ ನಿಝಾರ್ ಮುಸ್ಲಿಯಾರ್ ಬಂಟ್ವಾಳ ರೇಂಜ್, ಖಾಸಿಂ ಅರ್ಷದಿ ಪರಂಗಿಪೇಟೆ ರೇಂಜ್, ಮಜೀದ್ ದಾರಿಮಿ ಮಾಣಿ ರೇಂಜ್, ಹಾಗೂ ಪಿ.ಜೆ. ಅಬ್ದುಲ್ ಅಝೀಝ್ ಗಡಿಯಾರ್, ಅಲ್ದುಲ್ ರಹ್ಮಾನ್ ದಾರಿಮಿ ಸತ್ತಿಕಲ್ಲು, ಕೆ.ಪಿ.ಅಬ್ದುಲ್ ಮಜೀದ್ ಬುಡೋಳಿ, ಅತಾವುಲ್ಲಾ ಗಡಿಯಾರ್, ಹನೀಫ್ ಗಡಿಯಾರ್, ಮುಸ್ತಫ ಗಡಿಯಾರ್, ಜಲೀಲ್ ಮುಸ್ಲಿಯಾರ್ ಉಪಸ್ಥಿತರಿದ್ದರು. ಕೇಂದ್ರ SKSBV ಉಪಾಧ್ಯಕ್ಷರಾದ ಫರ್ವೀಝ್ ಅಕ್ತರ್ ಪುತ್ತೂರು ವಂದಿಸಿದರು.