ಡಿ.29: ಪೇಜಾವರ ವಿಶ್ವೇಶತೀರ್ಥ ನಮನ ಕಾರ್ಯಕ್ರಮ
ಮಂಗಳೂರು, ಡಿ.27: ಪೇಜಾವರ ವಿಶ್ವೇಶತೀರ್ಥ ಸ್ಬಾಮೀಜಿಯ ಪಂಚಮ ಪುಣ್ಯ ತಿಥಿಯ ಅಂಗವಾಗಿ ಕಲ್ಕೂರ ಪ್ರತಿಷ್ಠಾನವು ಪೇಜಾವರ ವಿಶ್ವೇಶತೀರ್ಥ ನಮನ -2024 ಕಾರ್ಯಕ್ರಮವನ್ನು ಡಿ.29ರಂದು ಮಧ್ಯಾಹ್ನ 2:30ಕ್ಕೆ ಕದ್ರಿ ಕಂಬಳ ರಸ್ತೆಯ ಮಲ್ಲಿಕಾ ಬಡಾವಣೆಯ ಮಂಜುಪ್ರಾಸಾದದ ವಾದಿರಾಜ ಮಂಟಪದ ವಿಶ್ವೆಶತೀರ್ಥ ವೇದಿಕೆಯಲ್ಲಿ ಆಯೋಜಿಸಿದೆ.
ಪೇಜಾವರ ಮಠಾಧಿಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಮೊಹನದಾಸ ಸ್ವಾಮೀಜಿ ಶ್ರೀಧಾಮ ಮಾಣಿಲ, ವಿದ್ಯೇಂದ್ರ ತೀರ್ಥ ಸ್ವಾಮೀಜಿ ಚಿತ್ರಾಪುರ ಇವರ ಉಪಸ್ಥಿತಿಯಲ್ಲಿ ಜರಗಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಡುಬಿದಿರೆ ಆಳ್ವಾಸ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ. ಮೋಹನ್ ಆಳ್ವ ವಹಿಸುವರು. ಮೇಯರ್ ಮನೋಜ್ ಕುಮಾರ್ ಉದ್ಘಾಟಿಸು ವರು. ಮುಲ್ಕಿ ಸೀಮೆಯ ಅರಸ ದುಗ್ಗಣ್ಣ ಸಾವಂತ ಹಾಗೂ ಮೂಡುಬಿದಿರೆಯ ಚೌಟರ ಅರಮನೆಯ ಕುಲದೀಪ ಎಂ. ಚೌಟ ಪುಷ್ಪ ನಮನ ಸಲ್ಲಿಸುವರು. ವೇದ ವಿದ್ವಾಂಸ ಡಾ. ಸತ್ಯಕೃಷ್ಣ ಭಟ್ ಸಂಸ್ಮರಣಾ ನುಡಿಯಾಡಲಿದ್ದಾರೆ.
ಹಿರಿಯ ಸಾಧಕರಿಗೆ ಜೀವಮಾನ ಸಾಧನಾ ಪ್ರಶಸ್ತಿ ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ಪೇಜಾವರ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಅಂಚೆ ಕಾರ್ಡಿನಲ್ಲಿ ವಿಶ್ವೇಶತೀರ್ಥ ಸ್ವಾಮೀಜಿಯ ಚಿತ್ರ ಹಾಗೂ ಪ್ರಬಂಧ ರಚನಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ.
*ಪ್ರಬಂಧ ಸ್ಪರ್ಧೆಯ ವಿಜೇತರು
ಪೇಜಾವರ ಸ್ಬಾಮೀಜಿಯ ಪುಣ್ಯತಿಥಿಯ ಅಂಗವಾಗಿ ಏರ್ಪಡಿಸಿದ್ದ ಪ್ರಬಂಧ ರಚನಾ ಸ್ಪರ್ಧೆಯಲ್ಲಿ ಯಕ್ಷಿತಾ ಕಾವಿನಕಲ್ಲು ಕುಳಾಯಿ (ಪ್ರಥಮ), ಲಕ್ಷ್ಮಿ ಪೆರ್ಮುದೆ (ದ್ವಿತೀಯ), ಸುರೇಖಾ ಮತ್ತು ಮಾನಸ ವಿಜಯ್ ಕೈಂತಜೆ ಮಾಣಿ (ತೃತೀಯ) ಸ್ಥಾನ ಹಾಗೂ ವಿದ್ಯಾರ್ಥಿನಿ ಅದಿತಿ ರಾವ್ ಪ್ರೋತ್ಸಾಹ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.