ಖೇಲೋ ಇಂಡಿಯಾ ಮಂಗಳೂರು ತಂಡಕ್ಕೆ ಒಟ್ಟು 14 ಪದಕ

Update: 2024-09-23 16:50 GMT

ಮಂಗಳೂರು: ಮೈಸೂರು ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ ವತಿಯಿಂದ ಮೈಸೂರಿನ ಚಾಮುಂಡಿ ವಿಹಾರ ಸ್ಟೇಡಿಯಂನಲ್ಲಿ ನಡೆದ ಕರ್ನಾಟಕ ರಾಜ್ಯ ಅಂತರ್ ಜಿಲ್ಲಾ ಕಿರಿಯರ ಹಾಗೂ 23 ವಯೋಮಿತಿಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಖೇಲೋ ಇಂಡಿಯಾ ಅಥ್ಲೆಟಿಕ್ಸ್ ಸೆಂಟರ್ ಮಂಗಳೂರಿನ ಕ್ರೀಡಾಪಟುಗಳು ಒಟ್ಟು 14 ಪದಕ ಗೆದ್ದಿದ್ದಾರೆ.

60 ಮೀ.ಮತ್ತು 600 ಮೀ. ರೇಸ್‌ನಲ್ಲಿ ಚಿನ್ನದ ಪದಕ ಗೆದ್ದ ಮಂಗಳೂರು ತಂಡದ ಆಯುಷ್ ಪ್ರಾಂಜಲ್ 16 ವಯೋಮಿತಿ ವಿಭಾಗದಲ್ಲಿ ಅತ್ಯುತ್ತಮ ಅಥ್ಲೆಟ್ ಪ್ರಶಸ್ತಿ ಪಡೆದರು.

16 ವಯೋಮಿತಿ ವಿಭಾಗದ ಲಾಂಗ್‌ಜಂಪ್‌ನಲ್ಲಿ ಅದ್ವಿತ್.ವಿ.ಯಾದವ್ ಚಿನ್ನ, 60 ಮೀ.ನಲ್ಲಿ ನಿದೀಕ್ಷಾ ಬೆಳ್ಳಿ, 600 ಮೀ.ನಲ್ಲಿ ಸನಿಹ ಶೆಟ್ಟಿ ಕಂಚು, 18 ವಯೋಮಿತಿ ವಿಭಾಗದ ಲಾಂಗ್‌ಜಂಪ್‌ನಲ್ಲಿ ಸಾತ್ವಿ ಶೆಟ್ಟಿ ಬೆಳ್ಳಿ, 100 ಮೀ.ನಲ್ಲಿ ಯಶಸ್ ಬೆಳ್ಳಿ, 23 ವಯೋಮಿತಿ ವಿಭಾಗದ 110 ಮೀ.ಹರ್ಡಲ್ಸ್‌ನಲ್ಲಿ ಅದ್ವಿತ್.ಡಿ.ಶೆಟ್ಟಿ ಚಿನ್ನ, 400 ಮೀ.ಹರ್ಡಲ್ಸ್‌ನಲ್ಲಿ ಆದಿತ್ಯ ಕಂಚು, 14 ವಯೋಮಿತಿ ವಿಭಾಗದ ಟ್ರಯತ್ಲಾನ್‌ನಲ್ಲಿ ಸಂಹಿತಾ ಬೆಳ್ಳಿ ಪದಕ ಗೆದ್ದಿದ್ದಾರೆ.

ಸೃಜನ್ ಅವರು 16 ವಯೋಮಿತಿ ವಿಭಾಗದ 80 ಮೀ.ಹರ್ಡಲ್ಸ್ ಹಾಗೂ ಪೆಂಟಾತ್ಲಾನ್‌ನಲ್ಲಿ ಬೆಳ್ಳಿ ಪದಕ , ಸಾಕ್ಷಿ ಅವರು ಪೆಂಟಾತ್ಲಾನ್‌ನಲ್ಲಿ ಬೆಳ್ಳಿ ಹಾಗೂ 80 ಮೀ.ಹರ್ಡಲ್ಸ್‌ನಲ್ಲಿ ಕಂಚು ಗೆದ್ದರು. ಕ್ರೀಡಾಪಟುಗಳು ಮಂಗಳೂರು ಖೇಲೋ ಇಂಡಿಯಾ ಅಥ್ಲೆಟಿಕ್ಸ್ ಸೆಂಟರ್‌ನ ಕೋಚ್ ಭಕ್ಷಿತ್ ಸಾಲ್ಯಾನ್ ಅವರಿಂದ ತರಬೇತಿ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News