ಮುಡಿಪು: ಕುಡ್ಲ ಚಾಲೆಂಜ್ ಸೀಸನ್ -4 ಆಫ್ ರೋಡಿಂಗ್ ರೇಸ್ ಸಮಾರೋಪ
ಕೊಣಾಜೆ: ಕೆ.ಎ.19-20 ಯುನೈಟಡ್ ಆಫ್ ರೋಡರ್ಸ್ ವತಿಯಿಂದ ಮುಡಿಪುವಿನಲ್ಲಿ ನಡೆದ ಕುಡ್ಲ ಚಾಲೆಂಜ್ ಸೀಸನ್ -4 ಆಫ್ ರೋಡಿಂಗ್ ರೇಸ್ ಸ್ಪರ್ಧೆ ರವಿವಾರ ಸಂಜೆ ತೆರೆ ಕಂಡಿತು.
ರೇಸಿಂಗ್ ನಲ್ಲಿ ವಿವಿಧ ರಾಜ್ಯಗಳ ಒಟ್ಟು 105 ವಾಹನಗಳು ಎಂಟ್ರಿಯನ್ನು ಪಡೆದು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಲೇಡಿಸ್ ಕ್ಲಾಸ್ ನಲ್ಲಿ ದಿವ್ಯ ಮುತ್ತಪ್ಪ ಪ್ರಥಮ, ಅಕ್ಸಾ ದ್ವಿತೀಯ, ಮೀನಾ ತೃತೀಯ ಸ್ಥಾನ ಪಡೆದರು.
ಶನಿವಾರ ಸಂಜೆ ಕೊನೆಯ ಹಂತದ ಆಫ್ ರೋಡಿಂಗ್ ನ ಪೆಟ್ರೋಲ್ ಮಾಡಿಪೈಡ್ ನಲ್ಲಿ ಕೇರಳದ ವಿಬಿನ್ ವರ್ಗೀಸ್ ಪ್ರಥಮ, ಗೋವಾ ದ ವಿದ್ದೇಶ್ ದ್ವಿತೀಯ, ಕೇರಳದಅಮೀರ್ ಬೆನ್ಸಿ ತೃತೀಯ ಸ್ಥಾನ ಪಡೆದರು.
ಡೀಸಿಲ್ ಮೋಡಿಪೈಡ್ ವಿಭಾಗದಲ್ಲಿ ಬೆಂಗಳೂರಿನ ಚತುರ್ ಆದಿತ್ಯ ಪ್ರಥಮ, ಕೇರಳದ ಮೆಹಬೂಬ್ ದ್ವಿತೀಯ, ಬೆಂಗಳೂರಿನ ನಿಶ್ಚಲ್ ತೃತೀಯ ಸ್ಥಾನ ಪಡೆದರು.
ಓಪನ್ ಕ್ಲಾಸ್ ವಿಭಾಗದಲ್ಲಿ ಕೇರಳದ ವಿಬೀನ್ ವರ್ಗಿಸ್ ಪ್ರಥಮ, ಕೇರಳದ ಮೆಹಬೂಬ್ ದ್ವಿತೀಯ, ಕೇರಳದ ಹ್ಯಾರೀಸ್ ತೃತೀಯ ಸ್ಥಾನ ಪಡೆದುಕೊಂಡರು. ಜಿಮ್ಮಿ ಕ್ಲಾಸ್ ವಿಭಾಗದಲ್ಲಿ ಫೈಸಲ್ ಪ್ರಥಮ, ಚಂದ್ರಮೌಲಿ ದ್ವಿತೀಯ, ಮಹಮ್ಮದ್ ಆಶಿಕ್ ತೃತೀಯ ಸ್ಥಾನ ಪಡೆದಿದ್ದಾರೆ. ಥಾರ್ 2020 ವಿಭಾಗದಲ್ಲಿ ಜಯಪ್ರಕಾಶ್ ಬಿವಿ ಪ್ರಥಮ, ಮಿಥುನ್ ದ್ವಿತೀಯ, ಫೈಝ್ ಶೇಖ್ ತೃತೀಯ. ಸ್ಟಾರ್ ಪೆಟ್ರೋಲ್ ವಿಭಾಗದಲ್ಲಿ ಶಬೀಲ್ ಕೋಯ ಪ್ರಥಮ, ಮಡ್ಡಿ ದ್ವಿತೀಯ, ಅಜಯ್ ಶೆಟ್ಟಿ ತೃತೀಯ ಸ್ಥಾನ ಪಡೆದಿದ್ದಾರೆ. ಸ್ಟಾಕ್ ಡಿಸೀಲ್ ವಿಭಾಗದಲ್ಲಿ ವಿಶಾಖ್ ರೈ ಪ್ರಥಮ, ಮಿಥುನ್ ಕರಿಯಪ್ಪ ದ್ವಿತೀಯ, ಸುದೀನ್ ರೈ ತೃತೀಯ ಸ್ಥಾನ ಪಡೆದುಕೊಂಡರು.
ವಿವಿಧ ರಾಜ್ಯಗಳಾದ ತಮಿಳುನಾಡು, ಆಂದ್ರಪ್ರದೇಶ, ಕೇರಳ, ಗೋವಾ ಸೇರಿದಂತೆ ಇನ್ನಿತರ ಕಡೆಗಳ ಆಫ್ ರೋಡರ್ ಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಅಲ್ಲದೆ ಮಹಿಳೆಯರಿಗೂ ಉತ್ತೇಜನ ನೀಡುವ ಸಲುವಾಗಿ ಮಹಿಳಾ ಕ್ಲಾಸ್ ಆಯೋಜಿಸಲಾಗಿದ್ದು 5 ಎಂಟ್ರಿಗಳನ್ನು ಪಡೆದ ಮಹಿಳೆಯರು ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
ಆಫ್ ರೋಡಿಂಗ್ ವೀಕ್ಷಣೆಗೆ ಹತ್ತು ಸಾವಿರಕ್ಕೂ ಹೆಚ್ಚು ಜನ ಭಾಗಿ:
ಕೆ.ಎ.19-20 ಯುನೈಟಡ್ ಆಫ್ ರೋಡರ್ಸ್ ವತಿಯಿಂದ ಈ ಆಫ್ ರೋಡ್ ರೇಸಿಂಗ್ ಕುಡ್ಲ ಚಾಲೆಂಜ್ ಸೀಸನ್ 4 ಆಯೋಜಿಸಲಾಗಿದ್ದು, ಸಂಘಟಕರಾದ ಅವಿನಾಶ್ ಅಡಪ, ನಾಸೀರ್ ನಡುಪದವು, ವಿಜೇಶ್ ನಾಯ್ಕ್ ಅವರು ಮೊದಲ ಬಾರಿ ಆಫ್ ರೋಡಿಂಗ್ ಸ್ಪರ್ಧೆಯನ್ನು ಆಯೊಜಿಸಿ ಯಶಸ್ವಿಯಾಗಿದ್ದಾರೆ. ಎರಡು ದಿನಗಳ ಆಫ್ ರೋಡಿಂಗ್ ನಲ್ಲಿ ಸ್ಪರ್ಧೆಯನ್ನು ವೀಕ್ಷಿಸಲು ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾರ್ವಜನಿಕರು ಜಾಗರೂಕರಾಗಿ ಭಾಗವಹಿಸುವಂತೆ ಹಾಗೂ ಅಳವಡಿಸಿರುವ ಸೂಚನೆಗಳನ್ನು ಪಾಲಿಸಲು ಸ್ವಯಂಸೇವಕರು ಅಲ್ಲಲ್ಲಿ ನಿಂತು ಗಮನಕೊಡುತ್ತಿದ್ದರು. ಸುರಕ್ಷತೆ ದೃಷ್ಟಿಯಿಂದ ಸರಕಾರದ ಎಲ್ಲಾ ಇಲಾಖೆಗಳ ಅನುಮತಿಗಳನ್ನು ಪಡೆದುಕೊಳ್ಳಲಾಗಿತ್ತು. ಅಗ್ನಿ ಶಾಮಕ ದಳ, ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಆಂಬ್ಯುಲೆನ್ಸ್ ಹಾಗೂ ವೈದ್ಯರು ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿದರು.