ತಣ್ಣೀರು ಬಾವಿಯಲ್ಲಿ ಕರಾವಳಿ ಬೀಚ್ ಉತ್ಸವ ಸಮಾರೋಪ

Update: 2025-01-12 15:40 GMT

ಮಂಗಳೂರು: ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ನಡೆದ ಎರಡು ದಿನಗಳ ಬೀಚ್ ಉತ್ಸವದ ಸಮಾರೋಪದಲ್ಲಿಂದು ಖ್ಯಾತ ಗಾಯಕ ರಘು ದೀಕ್ಷಿತ್ ತಮ್ಮ ಗಾಯನ ದಿಂದ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.

ಮಂಜರಿ ಚಂದ್ರ ಪುಷ್ಪರಾಜ್ ರವರ ಸೃಷ್ಟಿ ನೃತ್ಯ ಕಲಾ ತಂಡದವರಿಂದ ನೃತ್ಯ ಕಾರ್ಯಕ್ರಮ ನಡೆಯಿತು. ಜೊತೆಗೆ ಗಾಯಕರಾದ ಸಮರ್ಥ್ ಶೆಣೈ,ಆದಿತ್ಯ ಹೆಗ್ಡೆ, ಸಾನ್ವಿ ಹಾಡು ಹಾಡಿದರು.

ಸಮಾರೋಪ ಸಮಾರಂಭ:-ಮಂಗಳೂರು ಉತ್ತರ. ಶಾಸಕ ಭರತ್ ಶೆಟ್ಟಿ ಅವರು ಸಮಾರೋಪದಲ್ಲಿ ಮಾತನಾಡಿ, ಬೀಚ್ ಉತ್ಸವದಿಂದ ಪ್ರವಾಸೋದ್ಯಮಕ್ಕೆ ಹೆಚ್ಚು ಉತ್ತೇಜನ ದೊರಕಲಿದೆ. ಕರಾವಳಿಯ ಸೊಬಗನ್ನು ಹೆಚ್ಚಿಸಲು ಇಂತಹ ಕಾಯ೯ಕ್ರಮಗಳು ಇನ್ನಷ್ಟು ನಡೆಯಲಿ ಎಂದು ಹೇಳಿದರು.



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News