ಮಾನವನ ಬದುಕು ಅತ್ಯಂತ ಅಗ್ಗವಾದಂತಿದೆ: ಮೌಲಾನ ಸೈಯದ್ ಬಿಲಾಲ್ ಅಬ್ದುಲ್ ಹೈ ಹಸನಿ ನದ್ವಿ ಕಳವಳ

Update: 2024-09-28 17:42 GMT

ಮಂಗಳೂರು, ಸೆ.28: ಮಾನವನಲ್ಲಿ ಮಾನವೀಯತೆ, ನೈತಿಕತೆ ಕಳೆದು ಹೋದಂತೆ ಕಾಣುತ್ತಿರುವ ಇಂದಿನ ದಿನಗಳಲ್ಲಿ ಮಾನವನ ಬದುಕು ಅತ್ಯಂತ ಅಗ್ಗವಾದಂತೆ ಕಾಣುತ್ತಿದೆ ಎಂದು ಅಖಿಲ ಭಾರತ ಪಯಾಂ-ಇ-ಇನ್ಸಾನಿಯತ್ ಫೋರಂ ನ ಪ್ರಧಾನ ಕಾರ್ಯದರ್ಶಿ ಹಾಗೂ ಅಖಿಲ ಭಾರತ ಮುಸ್ಲಿಂ ಪರ್ಸನಲ್ ಲಾ ಬೋರ್ಡ್‌ನ ಕಾರ್ಯದರ್ಶಿ ಮೌಲಾನ ಸೈಯದ್ ಬಿಲಾಲ್ ಅಬ್ದುಲ್ ಹೈ ಹಸನಿ ನದ್ವಿ ಕಳವಳ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನ ಇಖ್ರಾ ಅರಬಿಕ್ ಸ್ಕೂಲ್, ಅಖಿಲ ಭಾರತ ಪಯಾಂ-ಇ-ಇನ್ಸಾನಿಯತ್ ಫೋರಂನ ಆಶ್ರಯದಲ್ಲಿ ನಗರದ ಕರಂಗಲ್ಪಾಡಿಯ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾದ ‘ವಿಚಾರ ಸಂಕಿರಣ’ದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಾದಕ ವಸ್ತುಗಳ ಆಕರ್ಷಣೆಗೆ ಯುವಜನತೆ ಬಲಿಯಾಗುತ್ತಿದ್ದಾರೆ. ದೇಶದ ಭವಿಷ್ಯ ಯುವಜನತೆಯ ಕೈಯಲ್ಲಿರುವುದ ರಿಂದ ಅವರು ದುಶ್ಚಟಗಳಿಗೆ ಬಲಿಯಾಗದಂತೆ ಎಚ್ಚರವಹಿಸಬೇಕಾಗಿದೆ ಎಂದರು.

ರಾಷ್ಟ್ರದ ತಳಹದಿಗಳಾದ ಜಾತ್ಯತೀತತೆ, ಪ್ರಜಾಪ್ರಭುತ್ವ ಮತ್ತು ಅಹಿಂಸೆ ದುರ್ಬಲಗೊಳ್ಳುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿ ಸಿದ ಅವರು ಮೂಲ ಮೌಲ್ಯಗಳು ನಾಶವಾಗುತ್ತಿವೆ, ಇದು ರಾಷ್ಟ್ರದ ಏಕತೆ ಮತ್ತು ಸಮಗ್ರತೆಗೆ ಗಂಭೀರ ಅಪಾಯ ವನ್ನುಂಟುಮಾಡಬಹುದು ಎಂದು ಎಚ್ಚರಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಡಾ. ಪರಿಣಿತಾ, ನಿವೃತ್ತ ಪ್ರಾಧ್ಯಾಪಕರಾದ ಡಾ. ರಾಜಾರಾಮ್ ತೋಳ್ಪಾಡಿ , ಪ್ರೊ. ಶಿವರಾಂ ಶೆಟ್ಟಿ, ವಾರ್ತಾ ಭಾರತಿ ಕನ್ನಡ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಅಬ್ದುಸ್ಸಲಾಂ ಪುತ್ತಿಗೆ , ಇಕ್ರಾ ಅರೆಬಿಕ್ ಸ್ಕೂಲ್‌ನ ಪ್ರಾಂಶುಪಾಲ ಮೌಲಾನಾ ಸಾಲಿಮ್ ಖಲೀಫಾ ನದ್ವಿ , ಮಾಜಿ ಮೇಯರ್ ಶಶಿಧರ ಹೆಗ್ಡೆ, ಮೋತಿಶ್ಯಾಮ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಅರ್ಷದ್ ಎಸ್ ಎಂ, ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಚಿಂತಕ ಎಂಜಿ ಹೆಗ್ಡೆ, ಆರ್‌ಎಸ್‌ಎ ಸ್ ಧುರೀಣ ವೆಂಕಟೇಶ್ , ಮನಪಾ ಮಾಜಿ ಸದಸ್ಯೆ ಪ್ರತಿಭಾ ಕುಳಾಯಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ ಆರ್ ಪೂಜಾರಿ, ಸಾಮಾಜಿ ಕಾರ್ಯಕರ್ತ ರೆನ್ನಿ ಡಿ ಸೋಜ, ಉದಯ ಆಚಾರ್, ಸ್ಕೌಟ್ ಆ್ಯಂಡ್ ಗೈಡ್ಸ್‌ನ ಮಾಜಿ ಆಯುಕ್ತ ಎನ್‌ಜಿ ಮೋಹನ್, ಮೀನುಗಾರ ಮುಖಂಡ ಚೇತನ್ ಬೆಂಗ್ರೆ, ತುಳುನಾಡು ರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗೀಶ್ ಜೆಪ್ಪು, ಮಂಜುನಾಥ್ ನಿಸರ್ಗ ಮತ್ತಿತರರು ಭಾಗವಹಿಸಿದ್ದರು.

ಮೌಲಾನಾ ಫರ್ಹಾನ್ ನದ್ವಿ ಕಾರ್ಯಕ್ರಮ ನಿರೂಪಿಸಿದರು.










 


 


 


 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News