ಪಿ ಎ. ಫಾರ್ಮಸಿ ಕಾಲೇಜು ವತಿಯಿಂದ ಗಾಲಿ ಕುರ್ಚಿ ವಿತರಣೆ ,ಆರೋಗ್ಯ ತಪಾಸಣೆ

Update: 2024-09-28 07:49 GMT

ದೇರಳಕಟ್ಟೆ : ಪಿ.ಎ. ಕಾಲೇಜ್ ಆಫ್ ಫಾರ್ಮಸಿಯ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳ ವತಿಯಿಂದ "ವಿಶ್ವ ಔಷಧ ತಜ್ಞರ ದಿನ"ದ ಅಂಗವಾಗಿ ನರಿಂಗಾನ ಗ್ರಾಮದ ಕಲ್ಲೊರ ಕೋಡಿಯಲ್ಲಿ ರುವ ಯೆನೆಪೋಯ ಆರ್ಯುವೇದಿಕ್ ಆಸ್ಪತ್ರೆಯ ರೋಗಿಗಳಿಗೆ ಉಚಿತ ಗಾಲಿ ಕುರ್ಚಿ ಹಾಗೂ ಹಣ್ಣುಹಂಪಲುಗಳನ್ನು ವಿತರಿಸಲಾಯಿತು.

ಬಳಿಕ ಸೋಮೇಶ್ವರದಲ್ಲಿರುವ ಪಶ್ಚಿಮ್ ರಿಹಾಬಿಲೇಶನ್ ಸೆಂಟರ್ ಮಾನಸಿಕ ಪುನಶ್ಚೇತನ ಕೇಂದ್ರದಲ್ಲಿರುವ ಆಶ್ರಮ ನಿವಾಸಿಗಳಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಿ, ಆರೋಗ್ಯ ಸಂರಕ್ಷಣೆಯ ಮಾಹಿತಿಗಳನ್ನು ನೀಡಿ, ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಯಿತು.

ಪಿ.ಎ. ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ಸಲೀಮುಲ್ಲಾ ಖಾನ್ ಈ ಸಂದರ್ಭದಲ್ಲಿ ಮಾತನಾಡಿ ,ಫಾರ್ಮಸಿ ವೃತ್ತಿಯು ಸೇವಾಧಾರಿತ ವೃತ್ತಿಯಾಗಿದ್ದು, ಎಲ್ಲರಲ್ಲೂ ಸೇವಾ ಮನೋಭಾವ ಬೆಳೆದು ಬಂದರೆ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.

ಪಿ.ಎ. ಎಜ್ಯುಕೇಶನಲ್ ಟ್ರಸ್ಟ್ ಅಸಿಸ್ಟಂಟ್ ಜನರಲ್ ಮ್ಯಾನೇಜರ್ ಶರ್ಫುದ್ಧೀನ್ ಪಿ.ಕೆ., ಪಿ.ಎ. ಮ್ಯಾನೇಜ್‌ಮೆಂಟ್ ಸ್ಟಡೀಸ್ ಇದರ ಡೈರೆಕ್ಟರ್ ಡಾ. ಸಯ್ಯದ್ ಅಮೀನ್, ಪ್ರೊಫೆಸರ್ ಡಾ. ಮುಹಮ್ಮದ್ ಮುಬೀನ್ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News