ಸೂರಲ್ಪಾಡಿ ರೇಂಜ್ ಅಸ್ತಿತ್ವಕ್ಕೆ: ಪದಾಧಿಕಾರಿಗಳ ಆಯ್ಕೆ

Update: 2024-10-11 12:13 GMT

ಹಂಝ ಅಸ್ಲಮಿ, ಮುನವ್ವರ್ ಬಾಖವಿ ಕರಾಯ, ಶೇಖ್ ಮುಕ್ತಾರ್ ಸೂರಲ್ಪಾಡಿ

ಮಂಗಳೂರು, ಅ.11: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ವಿದ್ಯಾಭ್ಯಾಸ ಮಂಡಳಿಯಾದ ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಸೆಂಟ್ರಲ್ ಕೌನ್ಸಿಲ್‌ನ ಅಧೀನದಲ್ಲಿ ಅಂಗೀಕಾರಗೊಂಡ ಸೂರಲ್ಪಾಡಿ ರೇಂಜ್ ಅಸ್ತಿತ್ವಕ್ಕೆ ಬಂದಿದೆ.

ಸೂರಲ್ಪಾಡಿ ನೂರುಲ್ ಉಲೂಂ ಮದ್ರಸ ವಠಾರದಲ್ಲಿ ನಡೆದ ಸಭೆಯಲ್ಲಿ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಮುಫತ್ತಿಸ್ ಖಾಸಿಂ ಮುಸ್ಲಿಯಾರ್ ಮಠ ಅಧ್ಯಕ್ಷತೆ ವಹಿಸಿದ್ದರು. ಹೈದರ್ ದಾರಿಮಿ ದುಆಗೈದರು. ಮುಸ್ತಫಾ ಹನೀಫಿ ಉದ್ಘಾಟಿಸಿದರು.

ನೂತನ ಸಮಿತಿಯ ಅಧ್ಯಕ್ಷರಾಗಿ ಹಂಝ ಅಸ್ಲಮಿ, ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್ ಯಮಾನಿ, ಮುರ್ಶಿದ್ ಫೈಝಿ ಸೂರಲ್ಪಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಮುನವ್ವರ್ ಬಾಖವಿ ಕರಾಯ, ಜೊತೆ ಕಾರ್ಯದರ್ಶಿಯಾಗಿ ಇಲ್ಯಾಸ್ ನಿಝಾಮಿ, ಲುಕ್ಮಾನುಲ್ ಹಕೀಂ ಫೈಝಿ, ಕೋಶಾಧಿಕಾರಿಯಾಗಿ ಶೇಖ್ ಮುಕ್ತಾರ್ ಸೂರಲ್ಪಾಡಿ, ಐ.ಟಿ. ಕೋಆರ್ಡಿ ನೇಟರಾಗಿ ಅಬೂಬಕ್ಕರ್ ಸಿದ್ದೀಕ್ ದಾರಿಮಿ ಕಿನ್ಯ, ಪರೀಕ್ಷಾ ಬೋರ್ಡ್ ಅಧ್ಯಕ್ಷರಾಗಿ ಸಿದ್ದೀಕ್ ದಾರಿಮಿ ಅಸೈ, ಉಪಾಧ್ಯ ಕ್ಷರಾಗಿ ಹನೀಫ್ ಯಮಾನಿ, ಶರೀಫ್ ಅಝ್ಹರಿ, ಎಸ್‌ಕೆಎಸ್‌ಬಿವಿ ಅಧ್ಯಕ್ಷರಾಗಿ ಫಾರೂಕ್ ಯಮಾನಿ, ಸಂಚಾಲಕರಾಗಿ ಶಾಕಿರ್ ಅಝ್ಹರಿ, ಕುರುನ್ನುಗಳ್ ಸಂಚಾಲಕರಾಗಿ ಸಮದ್ ಫೈಝಿ, ಕಬೀರ್ ದಾರಿಮಿ, ರಿಲೀಫ್ ಸೆಲ್ ಸಂಚಾಲಕರಾಗಿ ಅಬ್ದುಲ್ ಖಾದರ್ ಯಮಾನಿ, ಶಾಕಿರ್ ಅಝ್ಹರಿ, ಇಕ್ಬಾಲ್ ನಿಝಾಮಿ ಕಿತ್ತಳೆಗಂಡಿ ಆಯ್ಕೆಗೊಂಡರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News