ಅಳೇಕಲ: ಮದನಿ ಪದವಿ ಪೂರ್ವ ಕಾಲೇಜಿನ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರ

Update: 2024-10-11 06:40 GMT

ಉಳ್ಳಾಲ: ಅಳೇಕಲದ ಮದನಿ ಪದವಿ ಪೂರ್ವ ಕಾಲೇಜಿನ ಎನ್ನೆಸ್ಸೆಸ್ ಘಟಕದ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರವು  ಅ. 01 ರಿಂದ 07 ರ‌ ವರೆಗೆ ಅಂಬ್ಲವೊಗರು ಸರಕಾರಿ ಪ್ರೌಢ ಶಾಲೆಯಲ್ಲಿ ನಡೆಯಿತು.

ಮದನಿ ಎಜುಕೇಶನಲ್ ಎಸೋಸಿಯೇಶನ್ (ರಿ.) ಇದರ ಉಪಾಧ್ಯಕ್ಷ  ಮುಹಮ್ಮದ್ ತ್ವಾಹ ಹಾಜಿ ಅಧ್ಯಕ್ಷತೆ ವಹಿಸಿದ್ದರು.ಆಡಳಿತ ಮಂಡಳಿ ಕಾರ್ಯದರ್ಶಿ ಜನಾಬ್ ಅಬ್ದುಲ್ ಫತ್ತಾಹ್ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮದನಿ ಸಂಸ್ಥೆಯ ನಿವೃತ್ತ ಪ್ರಾಂಶುಪಾಲ ಟಿ.ಇಸ್ಮಾಯಿಲ್ ಮಾತನಾಡುತ್ತಾ, "ಮಾಹಿತಿ ತಂತ್ರಜ್ಞಾನದ ಶೀಘ್ರ ಬೆಳವಣಿಗೆಯ ಈ ಕಾಲ ಘಟ್ಟದಲ್ಲಿ ಹದಿಹರಯದ ವಿದ್ಯಾರ್ಥಿಗಳಿಗೆ ಕಲಿಕೆಯೊಂದಿಗೆ ಸೇವಾ ಮನೋಭಾವವನ್ನು ಮೈಗೂಡಿಸಿಕೊಳ್ಳಲು ರಾಷ್ರೀಯ ಸೇವಾ ಯೋಜನಾ ಶಿಬಿರ ಹೆಚ್ಚು ಪ್ರಯೋಜನಕಾರಿಯಾಗಿದೆ" ಎಂದರು.

ಅತಿಥಿಗಳಾಗಿ ಸ್ಥಳೀಯ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಸವಿತಾ ವೈ , ಎಸ್.ಡಿ.ಎಂ.ಸಿ ಅಧ್ಯಕ್ಷ ಬದ್ರುದ್ದೀನ್, ಮದನಿ ಸಂಸ್ಥೆಯ ಆಡಳಿತ ಮಂಡಳಿ ಸಂಚಾಲಕ ಕೆ.ಎನ್ ಮುಹಮ್ಮದ್, ಕೋಶಾಧಿಕಾರಿ ಹಾಜಿ ಯು.ಪಿ ಅರಬಿ, ಸಂಸ್ಥೆಯ ಪ್ರಾಂಶುಪಾಲ ಅಬ್ದುಲ್ ಅಝೀಝ್, ಬ್ರೈಟ್ ಮದನಿ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಸಯ್ಯದ್ ತ್ವಾಹಿರ್ ತಂಙಳ್, ಅಕಾಡಮಿಕ್ ಅಡ್ವೈಸರ್ ಹಾಜಿ ಯು.ಟಿ ಇಕ್ಬಾಲ್, ಲೆಕ್ಕ ಪರಿಶೋಧಕ ಯು.ಎಂ ಇಬ್ರಾಹಿಂ ಆಲಿಯಬ್ಬ, ಆಡಳಿತ ಸಮಿತಿ ಸದಸ್ಯ ಯು.ಎ ಇಸ್ಮಾಯಿಲ್, ಉಮ್ಮರ್ ಫಾರೂಖ್, ಯು.ಎನ್ ಇಕ್ಬಾಲ್,ಯು.ಎ ಬಾವ, ಯು.ಪಿ ಅಬ್ಬಾಸ್, ಉಪನ್ಯಾಸಕಿಯರಾದ ಅರ್ಚನಾ, ಪ್ರೀತಿಕ, ದೈಹಿಕ ಶಿಕ್ಷಣ ಉಪನ್ಯಾಸಕ ಮುಹಮ್ಮದ್ ಅಶ್ರಫ್, ಸ್ಥಳೀಯ ಪ್ರೌಢ ಶಾಲಾ ಅಧ್ಯಾಪಕ ನಾಗರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಂಬ್ಲಮೊಗರು ಸರಕಾರಿ ಪ್ರೌಢಶಾಲೆಯ ಕನ್ನಡ ಅಧ್ಯಾಪಕ ಡಾ.ರಾಮಮೂರ್ತಿ ಸಮಾರೋಪ ಭಾಷಣ ಗೈದರು. ಶಿಬಿರಾರ್ಥಿಗಳು ಎನ್ನೆಸ್ಸೆಸ್ ಧ್ಯೇಯಗೀತೆಯನ್ನು ಹಾಡಿದರು. ಶಿಬಿರಾಧಿಕಾರಿ ಹಬೀಬ್ ರಹಿಮಾನ್ ಸ್ವಾಗತಿಸಿ ಭೂಗೋಳ ಶಾಸ್ತ್ರ ಉಪನ್ಯಾಸಕ ಬಾಲಕೃಷ್ಣ ವಂದಿಸಿದರು. ವಾಣಿಜ್ಯ ಶಾಸ್ತ್ರ ಉಪನ್ಯಾಸಕ ಮುಹಮ್ಮದ್ ಫಾಝಿಲ್ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News