ತ್ರೋಬಾಲ್ ಪಂದ್ಯಾಟ: ಇಂದ್ರಪ್ರಸ್ಥ ಪ.ಪೂ ಕಾಲೇಜಿನ ವಿದ್ಯಾರ್ಥಿನಿ ಅಮತನ್ನೂರ್ ಸಲೀಂ ರಾಷ್ಟ್ರಮಟ್ಟಕ್ಕೆ ಆಯ್ಕೆ
Update: 2024-12-24 16:38 GMT
ಉಪ್ಪಿನಂಗಡಿ: ಪದವಿ ಪೂರ್ವ ವಿದ್ಯಾಲಯಗಳ ರಾಜ್ಯ ಮಟ್ಟದ ಬಾಲಕಿಯರ ತ್ರೋಬಾಲ್ ಕ್ರೀಡಾಕೂಟದಲ್ಲಿ ದ.ಕ. ಜಿಲ್ಲಾ ತಂಡವನ್ನು ಪ್ರತಿನಿಧಿಸಿದ ಉಪ್ಪಿನಂಗಡಿಯ ವಿದ್ಯಾರ್ಥಿನಿ ಅಮತನ್ನೂರ್ ಸಲೀಂ ರಾಷ್ಟ್ರ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.
ಉಪ್ಪಿನಂಗಡಿಯ ಎಸ್.ಎಂ. ಮುಹಮ್ಮದ್ ಸಲೀಂ ಮತ್ತು ನಸೀಮ ದಂಪತಿಯ ಪುತ್ರಿಯಾಗಿರುವ ಈಕೆ ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ.
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಬೆಂಗಳೂರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಬಾಗಲಕೋಟೆ ಮತ್ತು ಕೊಣ್ಣೂರ ವಿಜ್ಞಾನ ಪದವಿ ಪೂರ್ವ ವಿದ್ಯಾಲಯ ಯಲ್ಲಟ್ಟಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಬಾಲಕಿಯರ ತ್ರೋಬಾಲ್ ಕ್ರೀಡಾಕೂಟದಲ್ಲಿ ದ.ಕ. ಜಿಲ್ಲಾ ತಂಡ ಪ್ರಥಮ ಸ್ಥಾನವನ್ನು ಪಡೆದಿದೆ.