ವಿದ್ಯಾರ್ಥಿಗಳಿಗೆ ಹೆತ್ತವರೇ ಮಾದರಿಯಾಗಲಿ: ಕುಕ್ಕಿಲ ದಾರಿಮಿ

Update: 2024-12-24 13:30 GMT

ಮಂಗಳೂರು: ವಿದ್ಯಾರ್ಥಿಗಳಿಗೆ ತನ್ನ ತಂದೆ ತಾಯಿ ಅಥವಾ ರಕ್ಷಕರೇ ಮಾದರಿಯಾಗಿರಬೇಕೆಂದು ವಳಚ್ಚಿಲ್ ಜುಮ್ಮಾ ಮಸೀದಿ ಖತೀಬ್ ಬಹು. ಕೆ.ಐ.ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ ಹೇಳಿದ್ದಾರೆ.

ದೇರಳಕಟ್ಟೆ ಜಲಾಲ್ ಬಾಗ್ ಮಸ್ಜಿದುಲ್ ಅರಫಾ ಮತ್ತು ಮದರಸತುಲ್ ಅರಫಾ ಇವುಗಳ ಆಶ್ರಯದಲ್ಲಿ ನಡೆದ ಏಕದಿನ ಮತ ಪ್ರಭಾಷಣ ಕಾರ್ಯಕ್ರಮದಲ್ಲಿ ’ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ರಕ್ಷಕರ ಪಾತ್ರ ಮತ್ತು ಆಧುನಿಕ ಯುಗ’ ಎಂಬ ವಿಷಯದ ಕುರಿತು ಮಾತನಾಡಿದರು.

ಇಂದಿನ ವಿದ್ಯಾರ್ಥಿಗಳ ರಕ್ಷಕರೇ ಪಾಶ್ಚಿಮಾತ್ಯ ಸಂಸ್ಕೃತಿಗಳಿಗೆ ಮಾರುಹೋಗಿರುವುದರಿಂದ ವಿದ್ಯಾರ್ಥಿಗಳು ಕೂಡಾ ಅಡ್ಡದಾರಿ ಹಿಡಿದು ದುಶ್ಚಟಗಳಿಗೆ ಬಲಿಯಾಗುತ್ತಿರುವುದನ್ನು ನಾವು ಕಾಣಬಹುದಾಗಿದೆ. ಆಧುನಿಕ ಯುಗದಲ್ಲಿ ಯುವಕ, ಯುವತಿಯರು ಮಾದಕ ದ್ರವ್ಯದ ವ್ಯಸನಿಗಳಾಗಿ ಹಾದಿ ತಪ್ಪಿ ಸಮಾಜಕ್ಕೆ ಕಂಟಕವಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ರಕ್ಷಕರು ಹಾಗೂ ನಾವೆಲ್ಲರೂ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗದೆ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ಹಾಗೂ ಸ್ವಹಾಬಿಗಳ ಜೀವನ ಕ್ರಮವನ್ನು ಅನುಸರಿಸಿ ಅದರಂತೆ ಜೀವಿಸಿ ಇತರರಿಗೂ ಮಾದರಿಯಾಗಬೇಕಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಜಮಾಅತಿನ ಅಧ್ಯಕ್ಷ ಹೈದರ್ ಪರ್ತಿಪ್ಪಾಡಿ ವಹಿಸಿದ್ದರು. ಕಿನ್ಯಾ ಶಂಸುಲ್ ಉಲಮಾ ದಾರುಸ್ಸಲಾಂ ಅಕಾಡಮಿ ವಾದಿತ್ತೈ ಅಧ್ಯಕ್ಷ ಸಯ್ಯದ್ ಅಮೀರ್ ತಂಳ್ ದುವಾಃದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸ್ಥಳೀಯ ಖತೀಬ್ ಎಮ್.ಕೆ.ಅಬ್ದುಲ್ ರ‌್ರಹ್ಮಾನ್ ಫೈಝಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಸೀದಿ ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಕೊಣಾಜೆ ಪ್ರಾಸ್ತಾವಿಕ ವಾಗಿ ಮಾತನಾಡಿದರು.

ಮಸೀದಿಯ ಮಾಜಿ ಖತೀಬ್ ಹಂಝ ಫೈಝಿ ಶುಭ ಹಾರೈಸಿದರು. ಸಮಸ್ತ ಕೇರಳ ಜಂ- ಇಯ್ಯತುಲ್ ಮುಅಲ್ಲಿಮೀನ್ ಕಿನ್ಯ ರೇಂಜ್ ಇದರ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಫೈಝಿ , ಕೋಟೆಕಾರು ಪಟ್ಟಣ ಪಂಚಾಯತ್‌ನ ಮಾಜಿ ಸದಸ್ಯರಾ ಡಿ.ಎಮ್. ಮಹಮ್ಮದ್ , ಸ್ಥಳೀಯ ಉದ್ಯಮಿ ಪಿ.ಎಮ್. ಇಬ್ರಾಹೀಂ ಪನೀರ್, ಡಿ.ಎಸ್. ರಫೀಕ್ ಹಾಗೂ ಬಿ.ಎಚ್.ಅಶ್ರಫ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಜಮಾತಿನ ಮಾಜಿ ಅಧ್ಯಕ್ಷ ಅಬ್ದುಲ್ ರಝಾಕ್, ಉಪಾಧ್ಯಕ್ಷ ಮಹಮ್ಮದ್ ಹನೀಫ್, ಕೋಶಾಧಿಕಾರಿ ಮಹಮ್ಮದ್ ಫಾರೂಕ್, ಮಜ್ಲಿಸ್ ನ್ನೂರ್ ಸಂಚಾಲಕ ಮಹಮ್ಮದಾಲಿ ಹಾಜಿ, ಮಸೀದಿ ಆಡಳಿತ ಸಮಿತಿ ಸದಸ್ಯ ಹಮೀದ್ ಡ್ರೈವರ್ , ಅಬ್ದುಲ್ ರಹ್ಮಾನ್ ಹಾಜಿ, ಮಸೀದಿ ಮುಅಝ್ಝಿನ್ ಅಬ್ದುಲ್ ರ‌್ರಹ್ಮಾನ್ ಮುಸ್ಲಿಯಾರ್, ಮದರಸ ಮುಅಲ್ಲಿಮ್ ಫಾರೂಕ್ ಮುಸ್ಲಿಯಾರ್ ಮತ್ತಿತರರು ಉಪಸ್ಥಿತರಿದ್ದರು.

ಮದರಸ ಮೇಲ್ವಿಚಾರಕರುಗಳಾದ ಹಮೀದ್ ಪಜೀರ್ ಸ್ವಾಗತಿಸಿದರು. ಅಬೂಬಕರ್ ಪಿ.ಕೆ.ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News