ರಾಜ್ಯೋತ್ಸವ ಕವಿಗೋಷ್ಠಿಗೆ ಸ್ವರಚಿತ ಕವನಗಳ ಆಹ್ವಾನ

Update: 2024-10-18 14:49 GMT

ಮಂಗಳೂರು : ಕನ್ನಡ ರಾಜ್ಯೋತ್ಸವ ಸಮಿತಿ, ಕಲ್ಕೂರ ಪ್ರತಿಷ್ಠಾನ ಮಂಗಳೂರು ಏರ್ಪಡಿಸುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಪ್ರಯುಕ್ತ ರಾಜ್ಯೋತ್ಸವ ಕವಿಗೋಷ್ಠಿಗೆ ಸ್ವರಚಿತ ಕವನಗಳನ್ನು ಆಹ್ವಾನಿಸಲಾಗಿದೆ.

ಕನ್ನಡ ನಾಡು-ನುಡಿ-ಸಂಸ್ಕೃತಿ, ಪರಿಸರ ಸಹಿತ ಪ್ರಸ್ತುತ ವಿದ್ಯಮಾನ ಹಾಗೂ ರಾಷ್ಟ್ರೀಯತೆ ವಿಷಯಾಧಾರಿತ ಕವನ ಗಳನ್ನು ರಚಿಸಬೇಕು. ಸ್ಪರ್ಧೆಯನ್ನು ಪ್ರೌಢ ಶಾಲಾ ಮತ್ತು ಕಾಲೇಜು ಹಾಗೂ ಮುಕ್ತ ವಿಭಾಗ ಹೀಗೆ 3 ವಿಭಾಗಗಳಲ್ಲಿ ಆಯೋಜಿಸಲಾಗಿದೆ. ಕವನಗಳು ಗರಿಷ್ಟ ೫ ಚರಣಗಳಿಗೆ ಮೀರಬಾರದು ಹಾಗೂ ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. ಪ್ರೌಢಶಾಲಾ/ಕಾಲೇಜು ವಿಭಾಗದ ವಿದ್ಯಾರ್ಥಿಗಳು ಶಾಲಾ ಮುಖ್ಯಶಿಕ್ಷಕರ ಸಹಿ ಹಾಗೂ ಮೊಹರುಳ್ಳ ದೃಢೀಕರಣ ಪತ್ರ ವನ್ನು ಕವನದೊಂದಿಗೆ ಲಗತ್ತಿಸಿರಬೇಕು.

ಕವನಗಳನ್ನು ಅ.30ರೊಳಗೆ ರಾಜ್ಯೋತ್ಸವ ಕವನ ಸ್ಪರ್ಧಾ ವಿಭಾಗ ಕಲ್ಕೂರ ಪ್ರತಿಷ್ಠಾನ, ಶ್ರೀಕೃಷ್ಣ ಸಂಕೀರ್ಣ, ಕೊಡಿಯಾಲ್‌ ಬೈಲ್, ಮಂಗಳೂರು-೩ ಈ ವಿಳಾಸಕ್ಕೆ ಕಳುಹಿಸಿ ಕೊಡುವಂತೆ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News