ಸ್ಕೂಟರ್ ಬೆಂಕಿಗಾಹುತಿ

Update: 2024-10-18 16:13 GMT

ಉಳ್ಳಾಲ: ತಿಂಗಳ ಹಿಂದಷ್ಟೆ ಖರೀದಿಸಿದ್ದ ಹೊಸ ಟಿವಿಎಸ್ ಎಂಟಾರ್ಕ್ ಸ್ಕೂಟರ್  ಬೆಂಕಿ ಹತ್ತಿ ಹೊತ್ತಿ ಉರಿದ ಘಟನೆ ಕುಂಪಲ, ವಿದ್ಯಾನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ.

ಕುಂಪಲ ವಿದ್ಯಾನಗರದ ನಿವಾಸಿ ಐಟಿಐ ವಿದ್ಯಾರ್ಥಿ ರಾಕೇಶ್ ತಿಂಗಳ ಹಿಂದೆ ಟಿವಿಎಸ್ ಎಂಟಾರ್ಕ್ ಸ್ಕೂಟರ್ ಖರೀದಿಸಿದ್ದು, ಈ ಸ್ಕೂಟರ್ ಹೊತ್ತಿ ಉರಿದಿದ್ದು ಸಂಪೂರ್ಣ ಸುಟ್ಟು ಕರಕಲಾಗಿದೆ. ಘಟನೆಯಿಂದ ಮನೆಯ ಗೋಡೆ ,ಕಿಟಕಿಗಳ ಗಾಜುಗಳು, ಒಣಗಲು ಹಾಕಲಾದ ಬಟ್ಟೆಗಳು ಸುಟ್ಟು ಕರಕಲಾಗಿ ಅಪಾರ ನಷ್ಟ ಉಂಟಾಗಿದೆ.

ಈ ವೇಳೆ ನಿದ್ದೆಯಿಂದ ಎಚ್ಚೆತ್ತ ಮನೆ ಮಂದಿ ಬೆಂಕಿಯನ್ನು ನಂದಿಸಿದ್ದಾರೆ. ಸ್ಕೂಟರ್ ನ ಬ್ಯಾಟರಿ ಸಿಡಿದು ಬೆಂಕಿ ಹೆಚ್ಚಿರಬೇಕು ಎಂದು ಶಂಕಿಸಲಾಗಿದೆ.ರಾಕೇಶ್ ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News