ದೀಪಾವಳಿ ಸ್ಪೆಷಲ್ ರೈಲು ಸಂಚಾರದ ಅವಧಿ ವಿಸ್ತರಣೆ
Update: 2024-10-31 15:59 GMT
ಮಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ಆರಂಭಿಸಿದ ಲೋಕಮಾನ್ಯ ತಿಲಕ್ ಟಿ (ಮುಂಬೈ)-ಕೊಚುವೆಲಿ (ತಿರುವನಂತಪುರ) ಸಾಪ್ತಾಹಿಕ ಸ್ಪೆಷಲ್ (01463) ರೈಲನ್ನು ನ.21ರ ತನಕ ಹಾಗೂ ಕೊಚುವೆಲಿ-ಲೋಕಮಾನ್ಯ ತಿಲಕ್ (ಟಿ) ಸಾಪ್ತಾಹಿಕ ಸ್ಪೆಷಲ್ (01464) ರೈಲನ್ನು ನವೆಂಬರ್ 23 ತನಕ ವಿಸ್ತರಿಸಲಾಗಿದೆ.
ಈ ರೈಲು ಮಂಗಳೂರು ಜಂಕ್ಷನ್ ಮೂಲಕ ಪ್ರಯಾಣಿಸಲಿದೆ. ರೈಲು ಆರಂಭಿಸುವ ಸಂದರ್ಭ ಕ್ರಮವಾಗಿ ನ.14 ಮತ್ತು 15ರ ತನಕ ಸಂಚರಿಸಲು ನಿರ್ಧರಿಸಲಾಗಿತ್ತು. ಆದರೆ ಪ್ರಯಾಣಿಕರ ಬೇಡಿಕೆಯಂತೆ ಉಭಯ ಕಡೆಗಳಿಂದ ರೈಲುಗಳ ತಲಾ ಒಂದು ಪ್ರಯಾಣ (ಟ್ರಿಪ್) ಹೆಚ್ಚು ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.