ಮೆಸ್ಕಾಂ: ಭ್ರಷ್ಟಾಚಾರ ವಿರುದ್ಧ ಜಾಗೃತಿ ಕಾರ್ಯಕ್ರಮ
ಮಂಗಳೂರು: ಜಾಗೃತಿ ಸಪ್ತಾಹದ ಅಂಗವಾಗಿ ಮಂಗಳೂರು ವಿದ್ಯುಚ್ಚಕ್ತಿ ಸರಬರಾಜು ಕಂಪೆನಿ ನಿಯಮಿತ (ಮೆಸ್ಕಾಂ) ವತಿಯಿಂದ ಭ್ರಷ್ಟಚಾರ ವಿರುದ್ದ ಜಾಗೃತಿ ಮೂಡಿಸುವ ಕಾರ್ಯಕ್ರಮ ಗುರುವಾರ ಮೆಸ್ಕಾಂ ಕಾರ್ಪೊರೆಟ್ ಕಚೇರಿ ಸಭಾಂಗಣದಲ್ಲಿ ಜರಗಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗ ಪೊಲೀಸ್ ಅಧೀಕ್ಷಕ ಎಂ.ಎ ನಟ ರಾಜ, ಲೋಕಾಯುಕ್ತ ವ್ಯವಸ್ಥೆ, ಅದರ ವ್ಯಾಪ್ತಿ, ಕಾನೂನುಗಳು, ಕಾರ್ಯಾಚರಣೆ, ಮೊಕದ್ದಮೆ, ಶಿಕ್ಷೆಯ ಪ್ರಮಾಣದ ಬಗ್ಗೆ ವಿವರಿಸಿದರು.
ಭ್ರಷ್ಟಾಚಾರ ವಿರುದ್ದದ ಕಾರ್ಯಕ್ರಮದಲ್ಲಿ ಎಲ್ಲರೂ ಕೈಜೋಡಿಸಿದಾಗ ನಿಯಂತ್ರಣ ಸಾಧ್ಯ ಎಂದ ಅವರು ಜಾಗೃತಿ ಅಂಗವಾಗಿ ಸಿಬ್ಬಂದಿ, ಅಧಿಕಾರಿ ವರ್ಗಕ್ಕೆ ಮಾಹಿತಿ ಕಾರ್ಯಕ್ರಮ ಅಯೋಜಿಸಿರುವುದಕ್ಕೆ ಮೆಸ್ಕಾಂಗೆ ಅಭಿನಂದಿಸಿದರು.
ಅಧ್ಯಕ್ಷತೆ ವಹಿಸಿದ್ದ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಡಿ.ಪದ್ಮಾವತಿ ಮಾತನಾಡಿ ಮೆಸ್ಕಾಂನ ಧ್ಯೇಯೋದ್ದೇಶಗಳಿಗೆ ಬದ್ದರಾಗಿ ಗ್ರಾಹಕರಿಗೆ, ಸಮಾಜಕ್ಕೆ ಉತ್ತಮ ಸೇವೆ ನೀಡೋಣ ಎಂದರು.
ತಾಂತ್ರಿಕ ನಿರ್ದೇಶಕರಾದ ಕೆ.ಎಂ. ಮಹಾದೇವ ಸ್ವಾಮಿ ಪ್ರಸಾದ ,ಮುಖ್ಯ ಆರ್ಥಿಕ ಅಧಿಕಾರಿಗಳಾದ ಮೌರೀಸ್ ಡಿಸೋಜ, ಅರ್ಥಿಕ ಸಲಹೆಗಾರರಾದ ಬಿ. ಹರಿಶ್ಚಂದ್ರ , ಪ್ರಧಾನ ವ್ಯವಸ್ಥಾಪಕ ಉಮೇಶ್ ಉಪಸ್ಥಿತರಿದ್ದರು.
ಸಾರ್ವಜನಿಕ ರ್ಸಪರ್ಕ ಅಧಿಕಾರಿ ವಸಂತ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು. ಸಹಾಯಕ ಪ್ರಧಾನ ವ್ಯವಸ್ಥಾಪಕ ನವೀನ್ ಕುಮಾರ್ ವಂದಿಸಿದರು.