ಮುಲ್ಕಿ ಸೀಮೆಯ ಪ್ರತಿಷ್ಠಿತ ಅರಸು ಪ್ರಶಸ್ತಿ ಪ್ರಕಟ

Update: 2024-11-10 14:17 GMT

ಮುಲ್ಕಿ: ಸೀಮೆಯ ಪ್ರತಿಷ್ಠಿತ ಅರಸು ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಪ್ರತೀ ವರ್ಷದಂತೆ ಈ ವರ್ಷವು ಡಿ. 22ರಂದು ಅರಮನೆಯ ಧರ್ಮ ಚಾವಡಿಯಲ್ಲಿ ಸೀಮೆಯ ಅರಸರಾದ ಎಮ್. ದುಗ್ಗಣ್ಣ ಸಾವಂತರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ 14 ಮಂದಿ ಸಾಧಕರಿಗೆ ನೀಡಲಾಗುವುದು ಎಂದು ಅರಮನೆಯ ಪ್ರಕಟಣೆ ತಿಳಿಸಿದೆ.

ಮುಲ್ಕಿ ಅರಮನೆ ವೆಲ್ಫೇರ್ ಮತ್ತು ಚಾರಿಟೇಬಲ್ ಟ್ರಸ್ಟ್ ಮತ್ತು ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಹಳೆಯಂಗಡಿ ಇದರ ಸಹಭಾಗಿತ್ವದಲ್ಲಿ ಕೊಡಮಾಡುವ “ಅರಸು ಪ್ರಶಸ್ತಿ” 78 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಮುಲ್ಕಿ ಸೀಮೆ 32 ಗ್ರಾಮ ವ್ಯಾಪ್ತಿಯಲ್ಲಿ ಸಾಧನೆಗೈದ 14 ಜನರನ್ನು ಗುರುತಿಸಿ ಪ್ರಶಸ್ತಿ ನೀಡಲಿದೆ.

ಈ ಬಾರಿಯ ಸಾಧನಾ ಪ್ರಶಸ್ತಿಯನ್ನು ನಿಪ್ಪಾಣಿ ಪೀಠದ ಅರುಣಾನಂದ ತೀರ್ಥ ಸ್ವಾಮೀಜಿ ಆಯ್ಕೆಯಾಗಿದ್ದಾರೆ. ಮರಣೋತ್ತರ ಪ್ರಶಸ್ತಿಗಾಗಿ ಸಹಕಾರಿ ಕ್ಷೇತ್ರದ ಸಾಧಕ ಎಚ್. ನಾರಾಯಣ ಸನಿಲ್, ಕಂಬಳ ಕ್ಷೇತ್ರದ ಸಾಧಕರಾದ ಬಾಬು ಶೆಟ್ಟಿ ಮುಂಬೈ ಆಯ್ಕೆಯಾಗಿದ್ದಾರೆ.

ಸಂಘ ಸಂಸ್ಥೆಗಳ ವಿಭಾಗದಲ್ಲಿ ಶ್ರೀ ಸುಬ್ರಮಣ್ಯ ಮಹಾ ಗಣಪತಿ ಸ್ಪೋರ್ಟ್ಸ್ ಕ್ಲಬ್ ತೋಕೂರು ಹಾಗೂ ಶಿವ ಸಂಜೀವಿನಿ ಸುರಗಿರಿ ಆಯ್ಕೆಯಾಗಿದ್ದರೆ, ಸಾಹಿತ್ಯ ಕ್ಷೇತ್ರದಲ್ಲಿ ಎಚ್. ಶಕುಂತಲಾ ಭಟ್ ಹಳೆಯಂಗಡಿ, ಪರಮಾನಂದ ಸಾಲಿಯಾನ್ ಸಸಿಹಿತ್ಲು ಆಯ್ಕೆಯಾಗಿದ್ದಾರೆ.

ಯಕ್ಷಗಾನ ಕ್ಷೇತ್ರದಲ್ಲಿ ಶ್ರೀ ವಿನಾಯಕ ಯಕ್ಷಗಾನ ಫೌಂಡೇಶನ್ ಕೆರೆಕಾಡು, ಸೀತಾರಾಮ್ ಕುಮಾರ್ ಕಟೀಲು, ಕೃಷಿ- ಪರಿಸರ ಕ್ಷೇತ್ರದಿಂದ ವಾಲ್ಟರ್ ಡಿಸೋಜಾ ಪಕ್ಷಿಕೆರೆ, ವೈದ್ಯಕೀಯ ಕ್ಷೇತ್ರದಿಂದ ಡಾ. ಹಸನ್ ಮುಬಾರಕ್ ಬೊಳ್ಳೂರು, ಸಾಮಾಜಿಕ ಕ್ಷೇತ್ರದಲ್ಲಿ ಮಾಧವ ಶೆಟ್ಟಿಗಾರ್ ಬೆಳ್ಳಾಯರು, ಚಂದ್ರ ಕುಮಾರ್ ಸಸಿಹಿತ್ಲು ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಮೀರಾಬಾಯಿ ಕೆ ಪಾವಂಜೆ ಆಯ್ಕೆಯಾಗಿದ್ದಾರೆ ಎಂದು ಮುಲ್ಕಿ ಸೀಮೆಯ ಅರಮನೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News