ಕೊಂಕಣಿ ಗೌರವ ಪ್ರಶಸ್ತಿ, ಪುಸ್ತಕ ಪುರಸ್ಕಾರ ಪ್ರದಾನ

Update: 2024-11-11 14:30 GMT

ಮಂಗಳೂರು,ನ.11: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಮತ್ತು ಪುಸ್ತಕ ಪುರಸ್ಕಾರ 2023’ ಪ್ರಶಸ್ತಿ ಪ್ರದಾನ ಸಮಾರಂಭ ರವಿವಾರ ಹೊನ್ನಾವರದ ಕಾಸರಕೋಡ್ ಶಾನ್‌ಬಾಗ್ ರೆಸಿಡೆನ್ಸಿಯಲ್ಲಿ ನಡೆಯಿತು.

ಗೌರವ ಪ್ರಶಸ್ತಿಗೆ ಭಾಜನರಾದ ಮಾರ್ಸೆಲ್ ಎಂ. ಡಿಸೋಜ, ಹ್ಯಾರಿ ಫೆರ್ನಾಂಡಿಸ್, ಅಶೋಕ ಕಾಸರ್‌ಕೋಡ್ ಹಾಗೂ ಪುಸ್ತಕ ಪುರಸ್ಕಾರ ಆಯ್ಕೆಯಾದ ಮೇರಿ ಸಲೋಮಿ ಡಿಸೋಜ, ಸ್ಟೀಫನ್ ಮಸ್ಕರೇನ್ಹಸ್ (ಹೇಮಾಚಾರ್ಯ), ಫಾ.ರೊಯ್ಸನ್ ಫೆರ್ನಾಂಡಿಸ್ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಮಿಲಾಗ್ರಿಸ್ ಕೊ.ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜೋರ್ಜ್ ಫೆರ್ನಾಂಡಿಸ್ ಕಾಸರ್‌ಕೋಡ್ ಪಂಚಾಯತ್‌ನ ಅಧ್ಯಕ್ಷರಾದ ಮಂಕಾಳಿ ಪ್ರಕಾಶ್ ಹರಿಜನ್, ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ್ ಸಭಾ(ರಿ)ದ ಅಧ್ಯಕ್ಷ ಮೋಹನ್ ನಾಗೇಶ್ ಬಾನಾವಳಿಕರ, ತಂಝಿಂ ಭಟ್ಕಳ್ ಉಪಾಧ್ಯಕ್ಷ ಮೊಹಿದಿನ್ ರುಕ್ನದ್ದಿನ್, ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಹಾಗೂ ಅಕಾಡೆಮಿಯ ಮಾಜಿ ಅಧ್ಯಕ್ಷ ರೋಯ್ ಕ್ಯಾಸ್ತೆಲಿನೊ ಮತ್ತು ಅಕಾಡೆಮಿಯ ರಿಜಿಸ್ಟ್ರಾರ್ ರಾಜೇಶ್ ಜಿ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಅಕಾಡೆಮಿಯ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಮಾತನಾಡಿ ಅಕಾಡೆಮಿಯು ಜನರ ಆಸ್ತಿ. ಕೊಂಕಣಿ ಜನರಿದ್ದಲ್ಲಿಗೆ ಹೋಗಿ, ಅಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತೇವೆ. ಎಲ್ಲಾ ಕೊಂಕಣಿ ಸಮುದಾಯದ ಜನರು ತಮ್ಮ ಸಮುದಾಯದ ಒಳಿತಿಗಾಗಿ ಕಾರ್ಯಕ್ರಮಗಳನ್ನು ರೂಪಿಸಿದ್ದಲ್ಲಿ, ಅಕಾಡೆಮಿಯು ಸಹಕಾರ ನೀಡಲು ಸಿದ್ದವಿದೆ ಎಂದು ಹೇಳಿದರು.

ಗೌರವ ಪ್ರಶಸ್ತಿ ಮತ್ತು ಪುಸ್ತಕ ಪುರಸ್ಕಾರ ಕಾರ್ಯಕ್ರಮದಲ್ಲಿ ಅಕಾಡೆಮಿ ಸದಸ್ಯರಾದ ಜೇಮ್ಸ್ ಲೋಪಿಸ್ ,ನವೀನ್ ಲೋಬೊ, ರೊನಾಲ್ಡ್ ಕ್ರಾಸ್ತಾ, ಸಮರ್ಥ್ ಭಟ್, ಫಾ.ಪ್ರಶಾಂತ್ ಮಾಡ್ತಾ, ಅಕ್ಷತಾ ನಾಯಕ್, ಪ್ರಮೋದ್ ಪಿಂಟೊ, ಶ್ರೀನಿವಾಸ್ ಗೌಡ, ದಯಾನಂದ ಮಡ್ಕೇಕರ್, ಜಗದೀಶ್ ಖಾರ್ವಿ, ಮಾಮ್ದು ಇಬ್ರಾಹೀಂ ಹಾಜರಿದ್ದರು.

ವಿವಿಧ ಕಲಾತಂಡಗಳಿಂದ ನಡೆದ ಸಾಂಸ್ಕೃತಿಕ ಮೆರವಣಿಗೆಯಲ್ಲಿ ಪ್ರಶಸ್ತಿ ವಿಜೇತರನ್ನು ಕರೆತರಲಾಯಿತು. ಆಶಾ ದೇವ್ರಾಯ್ ಮೇಸ್ತ ಮತ್ತು ತಂಡದಿಂದ ಕುಂಭ ಕಳಶ, ನೆಲ್ಸನ್ ಲೋಪಿಸ್ ಮತ್ತು ತಂಡದಿಂದ ಗೊಂಬೆ ನೃತ್ಯ, ಕೋಸ್ಟ ಫರ್ನಾಂಡಿಸ್ ಮತ್ತು ತಂಡದಿಂದ ಶಿಗ್ಮೊ ನೃತ್ಯ, ಯಗ್ನೆಲ್ ಲೋಪಿಸ್ ಹಾಗೂ ಮದರ್ ತೆರೆಜಾ ಬ್ಯಾಂಡ್ ತಂಡದಿಂದ ಬ್ರಾಸ್ ಬ್ಯಾಂಡ್ ಕಾರ್ಯಕ್ರಮ, ಮರಿಯಾಣಿ ಎಂ. ಸಿದ್ದಿ ಮತ್ತು ತಂಡ, ಮುಂಡುಗೋಡು ಇವರಿಂದ ಸಿದ್ದಿ ಜಾನಪದ ನೃತ್ಯ, ಲಕ್ಷ್ಮಣ್ ಖಾರ್ವಿ ಮತ್ತು ತಂಡದಿಂದ ಖಾರ್ವಿ ಜಾನಪದ ನೃತ್ಯ, ಸುರೇಶ್ ಸಿ. ನಾಯ್ಕ್ ಮತ್ತು ತಂಡದಿಂದ ಗುಮ್ಟೆಂ ಫಾಂಗ್ ಪ್ರದರ್ಶನ ನಡೆಯಿತು.

ವಿಕ್ಟರ್ ಮಥಾಯಸ್ ಕಾರ್ಯಕ್ರಮ ನಿರೂಪಿಸಿದರು. ರಿಜಿಸ್ಟ್ರಾರ್ ರಾಜೇಶ್ ಜಿ. ವಂದಿಸಿದರು. ಕಾರ್ಯಕ್ರಮದ ಬಳಿಕ ಮನೋಜ್ ಲೊಪೀಸ್ ಮತ್ತು ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮವು ನಡೆಯಿತು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News