ಸ್ಪರ್ಧಾತ್ಮಕ ಮನೋಭಾವದಿಂದ ಅನುಭವ ಹೆಚ್ಚುತ್ತದೆ: ಆನಂದ್ ಜಿ.ಪೈ

Update: 2024-11-12 16:57 GMT

ಕೊಣಾಜೆ: ನಮ್ಮಲ್ಲಿ ಸ್ಪರ್ಧಾತ್ಮಕ ಮನೋಭಾವ ಇದ್ದರೆ ನಮ್ಮಲ್ಲಿ ಜ್ಞಾನ,‌ ಕೌಶಲದಿಂದ ಅನುಭವವೂ ಹೆಚ್ಚಾಗುತ್ತದೆ. ಆದ್ದರಿಂದ ಸ್ಪರ್ಧೆಗಳಲ್ಲಿ ಸೋಲು ಗೆಲುವಿಗಿಂತ ಭಾಗವಹಿಸುವಿಕೆಯೇ ಮುಖ್ಯವಾಗುತ್ತದೆ ಎಂದು ಕೆಸಿಸಿಐ ಅಧ್ಯಕ್ಷರಾದ ಆನಂದ್ ಜಿ ಪೈ ಅವರು ಹೇಳಿದರು.

ಅವರು ನಡುಪದವಿನ ಪಿ.ಎ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ನಡೆದ ರಾಷ್ಟ್ರ ಮಟ್ಟದ ಏಕದಿನ ಅಂತರ್ ಪಿ ಯು ಕಾಲೇಜು ಸ್ಪರ್ಧೆ 'ಕ್ಯಾಂಪಸ್ ಕ್ರೋಮ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪಿ. ಎ.ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ ಸರ್ಫ್ರಾಜ್ ಜೆ ಹಾಸಿಂ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ದರು. ಕೆಸಿಸಿಐ ಕಾರ್ಯ ನಿರ್ವಾಹಕ ಮುಖ್ಯಸ್ಥರಾದ ಮೈತ್ರೇಯ ಎ, ಪಿ.ಎ. ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶು ಪಾಲರಾದ ಡಾ ಹರಿಕೃಷ್ಣಣ್ ಜಿ, ಪಿ.ಎ.ಇ.ಟಿ ಯ ಎ.ಜಿ.ಎಂ ಶರಫುದ್ದೀನ್ ಪಿ.ಕೆ, .ಎ‌.ಇ.ಟಿ ಯ ವಿದ್ಯಾರ್ಥಿ ಡೀನ್ ಡಾ. ಸಯ್ಯಿದ್ ಅಮೀನ್ ಅಹ್ಮದ್, ಪಿ.ಎ ಕಾಲೇಜ್ ಆಫ್ ಫಾರ್ಮಸಿಯ ಪ್ರಾಂಶುಪಾಲರಾದ ಡಾ. ಸಲೀಮುಲ್ಲಾ ಖಾನ್, ಪಿ.ಎ ಪಾಲಿಟೆಕ್ನಿಕ್ ನ ಉಪಪ್ರಾಂಶುಪಾಲರಾದ ಪ್ರೊ. ಇಸ್ಮಾಯಿಲ್ ಖಾನ್, ಕ್ಯಾಂಪಸ್ ವ್ಯವಸ್ಥಾಪಕರಾದ ಡಾ ಇಕ್ಬಾಲ್, ಐ.ಕ್ಯೂ.ಎ.ಸಿ ಯ ಮುಖ್ಯಸ್ಥೆ ವಾಣಿಶ್ರೀ, ವಿಜ್ಞಾನ ವಿಭಾಗದ ಮುಖ್ಯಸ್ಥೆ ಆಶಾಲತಾ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ದೀಪ್ತಿ ಉದ್ಯಾವರ್, ಮಾನವಿಕ ವಿಭಾಗದ ಮುಖ್ಯಸ್ಥೆ ನೂರ್ ಜಹಾನ್ ಬೇಗಂ, ಪಿ.ಎ.ಇ.ಟಿ ದಾಖಲಾತಿ ನಿರ್ವಹಣಾಧಿಕಾರಿ ಶಫಿನಾಝ್, ಕಾಲೇಜ್ ನ ಖರೀದಿ ವಿಭಾಗದ ನಿರ್ದೇಶಕರಾದ ಹಾರಿಸ್ ಟಿ.ಡಿ ಹಾಗೂ ಕಾರ್ಯಕ್ರಮದ ಸಂಯೋಜಕರಾದ ಮುಹಮ್ಮದ್ ಸಂಶೀರ್ ಕೆ.ಎಸ್, ಲವೀನ ಡಿ ಸೋಜ ಮತ್ತು ಸಜೀರ್ ಅಹ್ಮದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಹೈಫ್ನಾ ಸ್ವಾಗತಿಸಿ, ಶಾಝಿಮ ವಂದಿಸಿದರು ಹಿಬಾ ಮರ್ಯಂ ಮತ್ತು ಮುಹಮ್ಮದ್ ಫರ್ಹಾನ್ ಕಾರ್ಯಕ್ರಮ ನಿರೂಪಿಸಿದರು.



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News